
ಜೋಯಿಡಾ :- ಉತ್ತರ ಕನ್ನಡ ಜಿಲ್ಲೆ ಜೋಯಿಡಾ ತಾಲೂಕಿನ ಆಸು ಗ್ರಾಮಪಂಚಾಯತಿಯಲ್ಲಿ
ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಗ್ಯಾಸ ಸಿಲಿಂಡರ್ ಗಳನ್ನು ಮಾಜಿ ಶಾಸಕ ಸುನೀಲ್ ಹೆಗಡೆ ವಿತರಿಸಿದರು.

ಕೇಂದ್ರ ಸರ್ಕಾರ ಬಡವರ, ದಿನ ದಲಿತರ ಪ್ರಗತಿಗಾಗಿ ಹಲವಾರು ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು ಉಜ್ವಲಾ ಯೋಜನೆ ಮೂಲಕ ಪ್ರತಿ ಮನೆಯಲ್ಲಿ ಗ್ಯಾಸ ಸಿಲಿಂಡರ್ ತಲುಪಿಸುವ ಮೂಲಕ ಉರುವಲು ಕಟ್ಟಿಗೆಯ ಸಮಸ್ಯೆಯನ್ನು ನಿವಾರಿಸಿ ಪರಿಸರ ಸಂರಕ್ಷಿಸುತ್ತಿದೆ ಎಂದು
ಮಾಜಿ ಶಾಸಕ ಸುನೀಲ ಹೆಗಡೆ ಹೇಳಿದರು.

ಜೋಯಿಡಾ ತಾಲೂಕಿನ ರಾಮನಗರ ಬಾಗದ ಅಕೇತಿ ಗ್ರಾಮಪಂಚಾಯತಿ ವ್ಯಾಪ್ತಿಯ ದೇವಳ್ಳಿ ಗ್ರಾಮದಲ್ಲಿಯೂ ಕೂಡ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಫಲಾನುಭವಿಗಳಿಗೆ ಗ್ಯಾಸ ಸಿಲಿಂಡರ್ , ಸ್ಟೋವ್ ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ
ಹಳಿಯಾಳ ತಾಲೂಕ ಬಿಜೆಪಿ ಅಧ್ಯಕ್ಷ ಶಿವಾಜಿ ನರಸಾನಿ ,ರಾಮನಗರ ತಾಲೂಕ ಪಂಚಾಯತ್ ಸದಸ್ಯ ಶರತ್ ಗುರ್ಜರ, ಮುಖಂಡ ಅನಿಲ ಮುತ್ನಾಳ್, ಸಂತೋಷ ಘಟಕಾಂಬ್ಳೆ ,ಸಂತೋಷ ರೇಡಕರ್ ಮೊದಲಾದವರು ಇದ್ದರು.
Leave a Comment