ಹಳಿಯಾಳ:- ಗೂಡ್ಸ್ ರೀಕ್ಷಾದಲ್ಲಿ ಅಕ್ರಮವಾಗಿ ಸಾಗವಾನಿ ನಾಟಾಗಳನ್ನು ಸಾಗಿಸಲಾಗುತ್ತಿದೆ ಎಂದು ಬಂದ ಖಚಿತ ಮಾಹಿತಿ ಮೆರೆಗೆ ಹಳಿಯಾಳ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 4 ಲಕ್ಷ ರೂ. ಬೆಲೆ ಬಾಳುವ ಮಾಲು ಸಮೇತ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲೂಕಿನ ಚಿಬ್ಬಲಗೇರಿ ಗ್ರಾಮದಿಂದ ಹಳಿಯಾಳ ಪಟ್ಟಣಕ್ಕೆ ಸುಮಾರು 4 ಲಕ್ಷಕ್ಕೂ ಅಧಿಕ ಬೆಲೆ ಬಾಳುವ 11 ನಾಟಾಗಳನ್ನು ಟಾಟಾ ಎಸ್ ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿರುವಾಗ ದಾಳಿ ನಡೆಸಿ ಮಾಲು, ವಾಹನ ಹಾಗೂ ಓರ್ವ ಆರೋಪಿ ಪಟ್ಟಣದ ನಿವಾಸಿ ಸಂತೋಷ ನಿಂಗಪ್ಪ ಭಜಂತ್ರಿ ಎಂಬುವನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಪ್ರಕರಣದ ಮತ್ತೊಬ್ಬ ಆರೋಪಿ ಗಂಗಾರಾಮ ಮಾರುತಿ ವಡ್ಡರ ತಲೆ ಮರೆಸಿಕೊಂಡಿದ್ದು ಆತನಿಗಾಗಿ ಶೋಧ ಕಾರ್ಯ ನಡೆದಿದೆ ಎಂದು ತಿಳಿಸಿರುವ ಹಳಿಯಾಳ ವಲಯ ಅರಣ್ಯಾಧಿಕಾರಿ ಪ್ರಸನ್ನ ಸುಭೇದಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಯತೀಶಕುಮಾರ ಹಾಗೂ ಎಸಿಎಫ್ ಸಂತೋಷಕುಮಾರ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ದಿಲೀಪ ನಾಯ್ಕ, ಅರಣ್ಯ ರಕ್ಷಕ ಬಾನಸೆ, ಹನುಮಂತ ಕಲ್ಪಡಿ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದರು.
Leave a Comment