ಹÀಳಿಯಾಳ: ಪ್ರತಿ ವರ್ಷದಂತೆ ಈ ಬಾರಿಯೂ ಸ್ಥಳಿಯ ದುರ್ಗಾನಗರದ ಪೋಲಿಸ್ ಠಾಣೆಯ ಆವರಣದಲ್ಲಿರುವ ಶ್ರೀ ದುರ್ಗಾದೇವಿ ದೇವಸ್ಥಾನದ ಮೂರು ದಿನಗಳ ಜಾತ್ರಾ ಮಹೋತ್ಸವ ಪ್ರಾರಂಭವಾಗಿದ್ದು. ದಿ.12 ಶುಕ್ರವಾರದಂದು ವಿಶೇಷ ಹೋಮ ಹವನ ದೇವಿಯ ಪಲ್ಲಕ್ಕಿ ಮೇರವಣಿಗೆ ಶೃದ್ದಾ ಭಕ್ತಿಯಿಂದ ನೆರವೆರಿತು.
ಇಂದು ದೇವಿಯ ಸನ್ನಿಧಿಯಲ್ಲಿ ನವಗ್ರಹ ಹೋಮ, ಬಲಿದಾನ, ಸತ್ಯನಾರಾಯಣ ಪೂಜೆ, ಅನ್ನ ಸಂತರ್ಪಣೆ, ಹಾಗೂ ಸಾಯಂಕಾಲ ಶ್ರೀ ದೇವಿಯ ಪಲ್ಲಕ್ಕಿ ಮೆರವಣಿಗೆಯು ಮುಖ್ಯ ಪೇಟೆ ಬೀದಿಯ ಮುಖಾಂತರ ಸೋನಾರ ಗಲ್ಲಿ, ಗೌರಿ ಗುಡಿ ಮಾರ್ಗವಾಗಿ ಬಸವರಾಜ ಗಲ್ಲಿ, ಬ್ರಾಹ್ಮಣ ಗಲ್ಲಿ, ಶೆಟ್ಟಿ ಗಲ್ಲಿ, ಕೋಟೆ ಕಿಲ್ಲಾ ಮಾರ್ಗವಾಗಿ ಬಸ್ ಸ್ಟ್ಯಾಂಡ್, ಹಳೆಯ ಪೋಲಿಸ್ ವಸತಿ ಗ್ರಹವಿರುವ , ಪುನಃ ಧಾರವಾಡ ರಸ್ತೆಯ ಮಾರ್ಗವಾಗಿ ದುರ್ಗಾನಗರ, ಹೊಸ ಪೋಲಿಸ್ ವಸತಿ ಗ್ರಹಗಳ ಮಾರ್ಗವಾಗಿ ಪಲ್ಲಕ್ಕಿ ಮೆರವಣಿಗೆ ಬಳಿಕ ಶ್ರೀದೇವಿಯು ಮೂಲ ಸ್ಥಾನಕ್ಕೆ ವಿರಾಜಮಾನಳಾದಳು.
ಎ13 ಶನಿವಾರ ಶ್ರೀ ದೇವಿಗೆ ಮಹಾ ಅಭಿಷೇಕ ಕುಂಕುಮ ಪೂಜೆ, ಸಾರ್ವಜನಿಕರಿಂದ ಹಾಗೂ ಮಧ್ಯಾನ್ಹ 1ರಿಂದ 8ಘಂವರೆಗೆ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ ಅದೇ ದಿನ ಸಾಯಂಕಾಲ ಸ್ಥಳಿಯ ಕಲಾವಿದರಿಂದ ಸಾಂಸ್ಕøತಿಕ ಕಾರ್ಯಕ್ರಮ ದುರ್ಗಾದೇವಿ ಕಲಾ ಮಂಟಪದಲ್ಲಿ ಜರುಗಲಿದೆ.
ಕೇವಲ ಒಂದು ತಾಮ್ರದ ಕೊಡ ತನ್ನ ತಲೆಯ ಮೇಲೆ ಇಟ್ಟಿರುವುದಕ್ಕೆ ಕ್ರೋಧಿತಳಾದ ದುರ್ಗಾದೇವಿ ಇದೇ ಸ್ಥಳದಲ್ಲಿ ಒಂದು ದೇವಸ್ಥಾನ ನಿರ್ಮಿಸಲು ಅನುಮತಿ ನಿಡಿದ ನಂತರ ಇಂದಿಗೆ ಅದೇ ಸುಂದರವಾದ ದೇವಸ್ಥಾನವಾಗಿ ನಿರ್ಮಾಣಗೊಂಡು ಇವತ್ತಿಗೆ 67ವರ್ಷಗಳು ಕಳೆದಿವೆ. ನಿರಂತರವಾಗಿ ಸೇವೆಯನ್ನು ಸಲ್ಲಿಸುತ್ತಾ ಬಂದಿರುವ ಪೋಲಿಸ್ ಇಲಾಖೆ ಹಾಗೂ ತಾಲೂಕಿನ, ನಗರದ ಎಲ್ಲಾ ಭಕ್ತಾಧಿಗಳ ಆರಾದ್ಯ ದೇವಿ ಶ್ರೀ ದುರ್ಗಾದೇವಿಯಾಗಿದ್ದಾಳೆ ಎಂದು ದೇವಸ್ಥಾನದ ಅರ್ಚಕರು ಹೇಳುತ್ತಾರೆ.
Leave a Comment