ಹೊನ್ನಾವರ: ಪಟ್ಟಣದ ಕೃಷಿ ಇಲಾಖೆ ಹತ್ತಿರ ನೂತನ ಮಿನಿ ವಿಧಾನಸೌಧದ ಹಿಂಭಾಗದಲ್ಲಿರುವ ಕಾಮತ್ ಝೆರಾಕ್ಸ ಆವರಣದಲ್ಲಿ ಮಣಿಪಾಲ ಆರೋಗ್ಯ ಕಾರ್ಡಿನ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಹಿರಿಯ ಪ್ರಸಿದ್ದ ವೈದ್ಯರಾದ ಡಾ.ಅರುಣ ವಿ.ಕಾರ್ಕಳ ಉದ್ಘಾಟಿಸಿ ನಂತರ ಮಾತನಾಡಿ ಮಣಿಪಾಲ ಆರೊಗ್ಯ ಕಾರ್ಡಿನ ಸೌಲಭ್ಯವನ್ನು ಹೊನ್ನಾವರದ ಜನತೆ ಪಡೆದುಕೊಳ್ಳಬೇಕು. ಚಿಕಿತ್ಸೆಗೆ ಹೆಚ್ಚಿನ ವೆಚ್ಚ ತಗಲುವ ಇಂದಿನ ದಿನದಲ್ಲಿ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಉತ್ತಮ ಚಿಕಿತ್ಸೆ ಪಡೆಯಬಹುದದ ಈ ಕಾರ್ಡನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ಕರೆನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಣಿಪಾಲ ಹೆಲ್ತ ಕಾರ್ಡಿನ ವಿಭಾಗಾಧಿಕಾರಿ ದರ್ಶನ ನಾಯಕ ಮಾತನಾಡಿ ಮಣಿಪಾಲ ಕಾರ್ಡಿನ ಮಹತ್ವ ಹಾಗೂ ಅದರ ಪ್ರಯೋಜನದ ಕುರಿತು ವಿವರಿಸಿದರು. ನಿಮ್ಮ ಆರೊಗ್ಯಕ್ಕಾಗಿ ನಾವು ನಿಮ್ಮೊಂದಿಗೆ ಇದ್ದೇವೆ. ಎಲ್ಲರೂ ಕಾರ್ಡಿನ ಸದಸ್ಯರಾಗುವಂತೆ ಕೋರಿದರು. ಈ ವೇಳೆ ಸಾಂಕೇತಿಕವಾಗಿ ಮಣಿಪಾಲ ಕಾರ್ಡನ್ನು ಡಾ. ಪ್ರಮೋದ ಫಾಯ್ದೆಯವರಿಗೆ ನೀಡಲಾಯಿತು.
ಕಾರ್ಡ ಸ್ವೀಕರಿಸಿದ ಡಾ. ಪ್ರಮೋದ ಫಾಯ್ದೆ ಮಾತನಾಡಿ ಬಹು ಉಪಯೋಗಿ ಆದ ಈ ಕಾರ್ಡನ್ನು ಹಿಂದುಳಿದ ಪ್ರದೇಶವಾದ ಹೊನ್ನಾವರ ತಾಲೂಕಿನ ಜನತೆಗೆ ಬಹುಮುಖ್ಯವಾಗಿದೆ.ಈ ಕಾರ್ಡ ವಿತರಿಸಲು ಮುಂದಾದ ಕಾಮತ್ ಝೆರಾಕ್ಸನ ಮಾಲಕಿ ಸ್ಮೀತಾ ಕಾಮತ್ ಇವರ ಕಾರ್ಯವೈಖರಿಯನ್ನು ಶ್ಲಾಘಿಸಿ ಶುಭಕೋರಿದರು.
ಜೀವವಿಮಾ ನಿಗಮದ ಪ್ರತಿನಿಧಿ ಜಿ.ಎಸ್.ರೇವಣಕರ್ ಇವರು ಶುಭಕೋರಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಹಲವು ಗಣ್ಯರು ಶುಭಕೋರಿದರು. ನ್ಯಾಶನಲ್ ಇನ್ಯೂರೆನ್ಸಿನ ದಿನೇಶ ಕಾಮತ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಸ್ಮೀತಾ ಕಾಮತ್ ಹಾಗೂ ಅವರ ಕುಟುಂಬವರ್ಗದವರು ಧನ್ಯವಾದ ಅರ್ಪಿಸಿದರು.
Leave a Comment