ಹಳಿಯಾಳ:- ಹಳಿಯಾಳ ದಲಿತಪರ ಸಂಘಟನೆಗಳ ಒಕ್ಕೂಟದ ನೂತನ ಅಧ್ಯಕ್ಷರನ್ನಾಗಿ ಯಲ್ಲಪ್ಪಾ ಹೊನ್ನೋಜಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ತಾಲೂಕಿನ ಹಲವಾರು ದಲಿತ ಸಂಘಟನೆಗಳು ಸೇರಿ ಈ ಒಕ್ಕೂಟವನ್ನು ಕಳೆದ 3 ವರ್ಷಗಳ ಹಿಂದೆ ರಚಿಸಲಾಗಿತ್ತು. ಹಿಂದಿನ ಅಧ್ಯಕ್ಷರನ್ನು ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಿದ ಬಳಿಕ ನೂತನ ಅಧ್ಯಕ್ಷರು ಹಾಗೂ ಸಂಪೂರ್ಣ ಒಕ್ಕೂಟಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳು:- ತಾಲೂಕಾ ಅಧ್ಯಕ್ಷರಾಗಿ ಯಲ್ಲಪ್ಪಾ ಹೊನ್ನೊಜಿ, ಗೌರವಾಧ್ಯಕ್ಷರಾಗಿ ಹನುಮಂತ ಗಂಗಪ್ಪಾ ಚಲವಾದಿ, ಕಾರ್ಯಾಧ್ಯಕ್ಷರಾಗಿ-ಭರಮೊಜಿ ಮಣ್ಣವಡ್ಡರ, ಸಂತೋಷ ಘಟಕಾಂಬಳೆ, ಪಾಂಡು ಚಲವಾದಿ. ಉಪಾಧ್ಯಕ್ಷರಾಗಿ-ಮಾರುತಿ ಕಲಭಾವಿ, ಕಿರಣ ಭಜಂತ್ರಿ, ಸುರೇಶ ಮೇತ್ರಿ, ಪ್ರಧಾನ ಕಾರ್ಯದರ್ಶಿಯಾಗಿ-ಹನುಮಂತ ಹರಿಜನ, ಪವಿತ್ರ ಮೇತ್ರಿ, ಬಡೇಸಾಬ ಕಕ್ಕೇರಿ, ಸಂಘಟನಾ ಕಾರ್ಯದರ್ಶಿ- ಆನಂದ ಮೇತ್ರಿ, ಸಂತೋಷ ಮೇತ್ರಿ, ಯಾಕುಬಸಾಬ ನಾಯಕ, ಸಂಘಟನಾ ಸಂಚಾಲಕರಾಗಿ- ಮಾರುತಿ ಕುರಿಯಾರ, ಮಾಣಿಕ ಘಟಕಾಂಬಳೆ, ಕುಮಾರ ಕಲಭಾವಿ, ಖಜಾಂಚಿ- ರಾಯಪ್ಪಾ ಹೊಂಗಲ್, ಕಾನೂನು ಸಲಹೆಗಾರರಾಗಿ-ವಕೀಲರಾದ ಮೇಘರಾಜ ಮೇತ್ರಿ ಹಾಗೂ ಮಂಜುನಾಥ ಮಾದರ.
ಮಹಿಳಾ ಘಟಕದ ಅಧ್ಯಕ್ಷರಾಗಿ ಶಾಂತಾಬಾಯಿ ಕುಲಕರ್ಣಿ, ಕಾರ್ಯಾಧ್ಯಕ್ಷರಾಗಿ ಅನ್ನಪೂರ್ಣ ವರಾಡಕರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಹೊನ್ನೊಜಿ ತಿಳಿಸಿದ್ದಾರೆ.
Leave a Comment