ಹಳಿಯಾಳ :- ತಾಲೂಕಿನ ಹವಗಿ ಗ್ರಾಮದಲ್ಲಿರುವ ಜಿನ ಮಂದಿರದ ಎದುರಿನ ಕಲ್ಯಾಣಿ(ನೀರಿನ ಹೊಂಡ)ವನ್ನು ಹವಗಿ ಗ್ರಾಮಸ್ಥರು ಸ್ವಯಂ ಪ್ರೇರಣೆಯಿಂದ ಭಾನುವಾರ ಶ್ರಮದಾನದ ಮೂಲಕ ಸ್ವಚ್ಚಗೊಳಿಸಿದರು.
ಕಳೆದ ಅನೇಕ ವರ್ಷಗಳಿಂದ ನೀರಿನ ಹೊಂಡ(ಕಲ್ಯಾಣಿ)ಯಲ್ಲಿ ಬೆಳೆದು ನಿಂತಿದ್ದ ಗಿಡ ಗಂಟಿಗಳನ್ನು ಹವಗಿ ಗ್ರಾಮದ ದಿಗಂಬರ ಜೈನ್ ಮಿಲನ ಕಾರ್ಮಿಕರು, ಸದಸ್ಯರು, ಬಸವೇಶ್ವರ ಶರ್ಯತ್ತು ಕಮೀಟಿ ಸದಸ್ಯರು ಹಾಗೂ ಗ್ರಾಮದ ಹಲವರು ಸ್ವಯಂ ಪ್ರೇರಣೆಯಿಂದ ಭಾನುವಾರ ಬಿಟ್ಟು ಬಿಡದೆ ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೆ ನಿರಂತರ ಶ್ರಮದಾನ ಮಾಡುವ ಸಂಪೂರ್ಣ ಸ್ವಚ್ಚಗೊಳಿಸಿ ಸ್ವಚ್ಚತಾ ಅಭಿಯಾನಕ್ಕೆ ಕೈ ಜೋಡಿಸಿದರು. ಅಲ್ಲದೇ ಮತ್ತೇ ಈ ಕಲ್ಯಾಣಿ ಸುತ್ತಲು ಯಾರು ಕಸ –ಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳನ್ನು ಚೆಲ್ಲದಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದರು.
Leave a Comment