
ಕಾಳಿ ನದಿ ಜೋಯಿಡಾದಲ್ಲಿ ಹುಟ್ಟಿದ್ದರೂ ಜೋಯಿಡಾ, ರಾಮನಗರ ಹಾಗೂ ತಾಲೂಕಿನ ಜನತೆಗೆ ನೀರನ್ನು ನೀಡದೆ ಹೊರಜಿಲ್ಲೆಗಳಿಗೆ ಸಾಗಿಸುವುದನ್ನು ವಿರೋಧಿಸಿ ಇಂದು ಜೋಯಿಡಾ ಬಂದ ನಡೆಯಿತು.
ಕಾಳಿ ಬ್ರೀಗೆಡ್, ಜೋಯಿಡಾ ವ್ಯಾಪಾರಸ್ಥರ ಸಂಘ, ಜೋಯಿಡಾ,ಉಳವಿ, ಕುಂಬಾರವಾಡಾ ಗ್ರಾ.ಪಂ.ಅಧ್ಯಕ್ಷ ಉಪಾಧ್ಯಕ್ಷರು ಮತ್ತು ವಿವಿಧ ಸಂಘಟನೆಗಳು ಈ ಬಂದಗೆ ಕರೆನೀಡಿದ್ದವು. ಈ ಸಂದರ್ಭದಲ್ಲಿ ಮಾತನಾಡಿದ ಕಾಳಿ ಬ್ರೀಗೆಡ್ನ ಸಂಚಾಲಕ ರವಿ ರೆಡ್ಕರ್ ಮಾತನಾಡಿ, ಕಾಳಿ ನದಿಗೆ ಸೂಪಾದಲ್ಲಿ ಜಲಾಶಯ ನಿರ್ಮಿಸಿ 40 ವರ್ಷಗಳೇ ಕಳೆದಿವೆ. ಜಲಾಶಯ ಅರ್ಧ ಆಯುಷ್ಯ ಮುಗಿದ ನಂತರ ನಾವು ಕುಡಿಯುವ ನೀರಿಗೆ ಬೇಡಿಕೆ ಸಲ್ಲಿಸುವಂತ ಸ್ಥಿತಿ ಬಂದಿದೆ. ಕಳೆದ 40 ವರ್ಷಗಳಿಂದ ಜನಪ್ರತಿನಿದಿಗಳು ಜನರ ಕುಡಿಯವ ನೀರಿನ ಸಮಸ್ಯೆ ಬಗೆ ಹರಿಸಿಲ್ಲ. ನಿರಾಶ್ರಿತ ರಾಮನಗರದ ಜನರಿಗೆ ಹದಿನೈದು ದಿನಗಳಿಗೊಮ್ಮೆ ನೀರನ್ನು ಕೊಡಲಾಗುತ್ತಿದೆ. ಅದುಕೂಡಾ ಉತ್ತಮ ನೀರಲ್ಲ. ತಾಲೂಕಿನ ಜನತೆಗೆ ವಿವಿಧ ಯೋಜನೆಗಳನ್ನು ಹೇರುವ ಮೂಲಕ ಮಹಾ ಮೋಸಮಾಡಲಾಗಿದೆ. ಯಾವ ಯೋಜನೆಗೂ ಜನರ ಅಹವಾಲನ್ನೇ ಕೇಳಿಲ್ಲ. ದಾಂಡೇಲಿಯ ಪೆಪರ್ ಮಿಲ್ಲ ಕೂಡಾ ವರ್ಷಕ್ಕೆ ನೂರಾರು ಕೋಟಿ ರೂ.ಲಾಭಮಾಡುತ್ತಾ, ಕಾಳಿ ನದಿ ದಡದಲ್ಲಿದ್ದು ಕಲುಷಿತ ನೀರನ್ನು ಕಾಳಿ ನದಿಗೆ ಬಿಡುತ್ತಿದೆ. ಆದರೂ ತಾಲೂಕಿನ ಜನತೆಗೆ ಒಂದು ಕಾಶಿನ ಉಪಕಾರ ಮಾಡುತ್ತಿಲ್ಲ. ಈಗ ಕಾಳಿ ನದಿಯ ನೀರನ್ನು ನಾವು ಹೊರಜಿಲ್ಲೆಗೆ ಬಿಡುವ ಪ್ರಶ್ನೆಯೇ ಇಲ್ಲ. ಇದಕ್ಕಾಗಿ ದಿಲ್ಲಿವರೆಗೂ ಹೋಗತ್ತೆವೆ ಎಂದರು.
ವ್ಯಾಪಾರಿ ಸಂಘದ ಅಧ್ಯಕ್ಷ ರಫಿಕ ಖಾಜಿ ಮಾತನಾಡುತ್ತಾ, ಕಾಳಿ ನದಿ ನೀರನ್ನು ಮೊದಲು ತಾಲೂಕಿನ ಜನತೆಗೆ ನೀಡಿ, ನಂತರ ಮುಂದಿನ ವಿಚಾರ ಕೈಗೊಳ್ಳಿ. ಕಾಳಿ ನದಿ ನೀರನ್ನು ನಮಗೆ ನೀಡದೆ ಬೇರ್ಯಾರಿಗೂ ನೀಡಲು ನಾವು ಬಿಡುವುದಿಲ್ಲ, ಇದಕ್ಕಗಿ ಹೋರಾಟಕ್ಕೆ ಎಂದಿಗೂ ಸಿದ್ದರಿದ್ದೇವೆ. ಈಗಾಗಲೇ ತಾಲೂಕಿಗೆ ಕುಡಿಯುವ ನೀರಿನ ಬೃಹತ್ ಯೋಜನೆಗೆ ಪ್ರಸ್ತಾವನೆಯನ್ನು ಮುಖ್ಯ ಮಂತ್ರಿಯವರಿಗೆ ಜೋಯಿಡಾ ಗ್ರಾ.ಪಂ ವತಿಯಿಂದ ನೀಡಿದ್ದು, ಅನುಮೋದನೆಯ ನಿರೀಕ್ಷೆಯಲ್ಲಿದ್ದೇವೆ. ಇದು ಆಗದಿದ್ದರೆ, ಕಾಳಿ ನೀರಿಗಾಗಿ ಅವಶ್ಯಕತೆ ಬಂದರೆ ದಿಲ್ಲಿಗೂ ಹೋಗುತ್ತೇವೆ ಎಂದರು.
ನ್ಯಾಯವಾದಿ ಸುನೀಲ ದೇಸಾಯಿ ಮಾತನಾಡಿ, ಕಾಳಿ ನದಿಗೆ ಅಣೆಕಟ್ಟು ಕಟ್ಟುವ ಮೊದಲು ನದಿಯ ಅಕ್ಕಪಕ್ಕದ ರೈತರು ನದಿಯ ನೀರನ್ನು ಬಳೆಸಿ ಸಂತೋಷದಿಂದ ಕೃಷಿ ಚಟುವಟಿಕೆ ನಡೆಸಿಕೊಂಡು ಬಂದಿದ್ದರು. ನಂತರ ಅವರನ್ನು ರಾಮನಗರಕ್ಕೆ ರಾಮನಗರಕ್ಕೆ ಎತ್ತಂಗಡಿಮಾಡಿ ಕುಡಿಯಲೂ ನೀರಿಲ್ಲದೆ ಪರಿತಪಿಸುವಂತೆ ಮಾಡಿದರು. ಇದು ತುಂಬಾ ಅನ್ಯಾಯ ಎಂದರು.
ಪ್ರತಿಭಟನೆ ಕುರಿತು ಜೋಯಿಡಾ ಗ್ರಾ.ಪಂ ಉಪಾಧ್ಯಕ್ಷ ಶ್ಯಾಮ ಪೊಕಳೆ, ಸದಸ್ಯ ವಿನಯ ದೇಸಾಯಿ, ಕುಂಬಾರವಾಡಾ ಗ್ರಾ.ಪಂ.ಅಧ್ಯಕ್ಷ ಮಂಗೇಶ ಕಾಮತ್, ಉಳವಿ ಗ್ರಾ.ಪಂ. ಅಧ್ಯಕ್ಷ ಮಂಜುನಾತ ಮೊಕಾಶಿ, ಶ್ರೀಕಾಂತ ಟೆಂಗ್ಸೆ, ಬಿಜೆ.ಪಿ ತುಕಾರಾಮ ಮಾಂಜ್ರೇಕರ್, ರೈತ ಸಂಘದ ಪ್ರೇಮಾನಂದ ವೇಳಿಪ, ದಾಂಡೇಲಿಯ ವಾಸುದೇವ ಪ್ರಭು ಮುಂತಾದವರು ಮಾತನಾಡಿದರು. ನಂತರ ನೂರಾರು ಸಂಖ್ಯೆಯಲ್ಲಿ ಜೋಯಡಾ ಸರ್ಕಲ್ದಿಂದ ತಹಶೀಲ್ದರ ಕಚೇರಿಯವರೆಗೆ ಮೆರವಣಿಗೆಯಲ್ಲಿ ಬಂದು ತಹಶೀಲ್ದಾರ ಸಂಜಯ ಕಾಂಬ್ಳೆ ಮುಖೇನ ಪ್ರಧಾನ ಮಂತ್ರಿ ಹಾಗೂ ರಾಜ್ಯದ ಮುಖ್ಯ ಮಂತ್ರಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ವ್ಯಾಪಾರಿ ಸಂಘದ ಅಧ್ಯಕ್ಷ ರಫಿಕ ಖಾಜಿ ಮಾತನಾಡುತ್ತಾ, ಕಾಳಿ ನದಿ ನೀರನ್ನು ಮೊದಲು ತಾಲೂಕಿನ ಜನತೆಗೆ ನೀಡಿ, ನಂತರ ಮುಂದಿನ ವಿಚಾರ ಕೈಗೊಳ್ಳಿ. ಕಾಳಿ ನದಿ ನೀರನ್ನು ನಮಗೆ ನೀಡದೆ ಬೇರ್ಯಾರಿಗೂ ನೀಡಲು ನಾವು ಬಿಡುವುದಿಲ್ಲ, ಇದಕ್ಕಗಿ ಹೋರಾಟಕ್ಕೆ ಎಂದಿಗೂ ಸಿದ್ದರಿದ್ದೇವೆ. ಈಗಾಗಲೇ ತಾಲೂಕಿಗೆ ಕುಡಿಯುವ ನೀರಿನ ಬೃಹತ್ ಯೋಜನೆಗೆ ಪ್ರಸ್ತಾವನೆಯನ್ನು ಮುಖ್ಯ ಮಂತ್ರಿಯವರಿಗೆ ಜೋಯಿಡಾ ಗ್ರಾ.ಪಂ ವತಿಯಿಂದ ನೀಡಿದ್ದು, ಅನುಮೋದನೆಯ ನಿರೀಕ್ಷೆಯಲ್ಲಿದ್ದೇವೆ. ಇದು ಆಗದಿದ್ದರೆ, ಕಾಳಿ ನೀರಿಗಾಗಿ ಅವಶ್ಯಕತೆ ಬಂದರೆ ದಿಲ್ಲಿಗೂ ಹೋಗುತ್ತೇವೆ ಎಂದರು.
ಜೋಯಿಡಾ ತಾಲೂಕಾ ಕೇಂದ್ರದಲ್ಲಿ ಕಛೇರಿ ಶಾಲಾ ಕಾಲೇಜು ತೆರೆದಿದ್ದು, ಬಸ್ ಸಂಚಾರ ಎಂದಿನಂತಿತ್ತು. ರಾಮನಗರ ಜಿ.ಪಂ. ಕ್ಷೇತ್ರ ವ್ಯಾಪ್ತಿಯಲ್ಲಿ ರಾಮನಗರ, ಜಗಲಬೇಟ್ ಸೇರಿದಂತೆ ಹಲವೆಡೆ ಬಂದಿಗೆ ಪ್ರತಿಕ್ರೀಯೆ ಕಂಡುಬರಲಿಲ್ಲ. ಇಲ್ಲಿ ಎಂದಿನಂತೆ ವ್ಯಪಾರ ವೈವಾಟು ನಡೆದಿದ್ದು ಕಂಡುಬಂದಿತ್ತು.

ಜೋಯಿಡಾ ಮತ್ತು ರಾಮನಗರಕ್ಕೆ ಕುಡಿಯುವ ನೀರಿನ ಯೋಜನೆಯ ಪ್ರಸ್ತಾವನೆಯನ್ನು ತಯಾರಿಸಿ ರಾಜ್ಯ ಸರಕಾರಕ್ಕೆ ನಮ್ಮ ಗ್ರಾ.ಪಂ. ವತಿಯಿಂದ ಈಗಾಗಲೇ ಕಳಿಸಿಕೊಟ್ಟಿದ್ದೇವೆ. ಮೊನ್ನೆ ಶನಿವಾರ ನಡೆದ ಕೆ.ಡಿ.ಪಿ. ಸಭೆಯಲ್ಲಿ ಉಸ್ತುವಾರಿ ಸಚಿವರ ಗಮನಕ್ಕೂ ತಂದಿದ್ದೇವೆ. ಈ ಯೋಜನೆ ಕಾರ್ಯಗತವಾಗುವವರೆಗೂ ನಮ್ಮ ಪ್ರಯತ್ನ ನಿರಂತರವಾಗಿರಲಿದೆ.್ಮಲ್ಲಿಯವರೆಗೂ ಕಾಳಿ ನೀರನ್ನು ನಮಗೆ ನೀಡದೆ ಬೇರೆಯವರಿಗೆ ಸಾಗಿಸಲು ಬಿಡುವುದಿಲ್ಲ. – ಶ್ಯಾಮ ಪೊಕಳೆ, ಗ್ರಾ.ಪಂ. ಉಪಾಧ್ಯಕ್ಷರು ಜೋಯಿಡಾ.
Leave a Comment