
ಹಳಿಯಾಳ :- 12ನೇ ಶತಮಾನದಲ್ಲಿ ಆಗಿ ಹೋದ ಮಹಾನ್ ಶಿವಶರಣರಲ್ಲಿ ಹಡಪದ ಅಪ್ಪಣ್ಣ ವಿಶೇಷ ಸ್ಥಾನ ಮಾನ ಪಡೆದಿದ್ದರು. ಅವರ ಹಿತವಚನಗಳು ಇಂದಿಗೂ ಪ್ರಸ್ತುತವಾಗಿದ್ದು ಇಂದಿನ ಗಡಿಬಿಡಿಯ ಜೀವನದಲ್ಲಿಯೂ ಅವುಗಳು ಮಹತ್ವ ಪಡೆದಿವೆ ಎಂದು ತಹಶೀಲದಾರ ವಿದ್ಯಾಧರ ಗುಳಗುಳಿ ಹೇಳಿದರು.
ತಾಲೂಕಾ ಆಡಳಿತ,ತಾಲೂಕಾ ಪಂಚಾಯತ್, ಶಿಕ್ಷಣ ಇಲಾಖೆ ಹಾಗೂ ಪುರಸಭೆಯವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಪಟ್ಟಣದ ಮಿನಿವಿಧಾನಸೌಧದ ಆವರಣದಲ್ಲಿ ಆಯೋಜನೆ ಮಾಡಲಾಗಿದ್ದ ಶಿವಶರಣ ಹಡಪದ ಅಪ್ಪಣ್ಣ ಅವರ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಆದ್ಯಾತ್ಮ ಚಿಂತಕ ಎಮ್.ಎನ್.ತಳವಾರ ಅವರು ಹಡಪದ ಅಪ್ಪಣ್ಣ ಕುರಿತು ವಿಶೇಷ ಉಪನ್ಯಾಸದಲ್ಲಿ ತಮ್ಮ ಕಾಯಕದಿಂದ ಇಂದಿಗೂ ಖ್ಯಾತಿಯನ್ನು ಪಡೆದಿರುವ ಹಡಪದ ಅಪ್ಪಣ್ಣ ಅವರು ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆಂದರು.
ಕಾರ್ಯಕ್ರಮದಲ್ಲಿ ತಾಪಂ ಇಒ ಡಾ.ಮಹೇಶ ಕುರಿಯವರ್, ತಹಶೀಲದಾರ ಜಿ.ಕೆ.ರತ್ನಾಕರ, ಸಿಪಿಐ ಬಿ.ಎಸ್.ಲೋಕಾಪೂರ, ಮುಖ್ಯಾಧಿಕಾರಿ ಕೇಶವ ಚೌಗುಲೆ, ಜೀಜಾಮಾತಾ ಸಂಘದ ಮಂಗಲಾ ಕಶೀಲ್ಕರ, ಈರಣ್ಣಾ ನಾವಲಗಿ, ಸುನೀಲ್ ಪನ್ನಾಳಕರ, ಯಲ್ಲಪ್ಪಾ ಹೊನ್ನೋಜಿ, ಮಂಜುನಾಥ ಮಾದರ, ಶಶಿಕಾಂತ, ರಮೇಶ ನಾವಲಗಿ, ಮಾರುತಿ ಆನಗೊಂಡ, ಕಿಶೋರ ಸಾಳುಂಕೆ, ನಾರಾಯಣ ಮುತ್ತಲ್, ಪರಶುರಾಮ ಪೋಪಳೆ, ಶ್ರೀನಿವಾಸ ಆನಗೊಂಡ, ಮಹರ್ಷಿ ಸವಿತಾ ಸಮಾಜದ ಹಿರಿಯರು ಇದ್ದರು.
Leave a Comment