
ಹಳಿಯಾಳ :- ಪಟ್ಟಣದಲ್ಲಿ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ನಡೆದ ಡೆಂಗ್ಯೂ ವಿರೋಧಿ ಹಾಗೂ ಜಾಗೃತಿಯ ಬೃಹತ್ ಜಾಥಾಕ್ಕೆ ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಹಸಿರು ನಿಶಾನೆ ತೊರಿಸುವ ಮೂಲಕ ಚಾಲನೆ ನೀಡಿದರು.
ತಾಲೂಕಾಡಳಿತ, ಪುರಸಭೆ, ಆರೋಗ್ಯ ಇಲಾಖೆ, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆ, ಜೀಜಾಮಾತಾ ಮಹಿಳಾ ಸಂಘಟನೆ, ಸಿಂಹಕೂಟ ಹಳಿಯಾಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಣ ಇಲಾಖೆ, ಶಾಲಾ-ಕಾಲೇಜು ವಿದ್ಯಾರ್ಥಿಗಳು ಈ ಜಾಗೃತಿ ಜಾಥಾದಲ್ಲಿ ಭಾಗವಹಿಸಿದ್ದರು.
ತಹಶೀಲ್ದಾರ್ ವಿದ್ಯಾಧರ ಗುಳಗುಳಿ, ತಾಲೂಕಾ ವೈದ್ಯಾಧಿಕಾರಿ ಡಾ.ರಮೇಶ ಕದಂ, ತಾಪಂ ಇಓ ಡಾ.ರಮೇಶ ಕುರಿಯವರ, ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ, ಪರಿಸರ ಅಭಿಯಂತರರಾದ ಬಿಎಸ್ ದರ್ಶಿತಾ, ಇಂಜೀನಿಯರ ಹರೀಶಕುಮಾರ, ಸಿಡಿಪಿಓ ಇಲಾಖೆಯ ಅಂಬಿಕಾ ಕಟಕೆ, ರಾಜೇಶ್ವರಿ ಗವಿಮಠ, ಕರವೇಯ ಬಸವರಾಜ ಬೆಂಡಿಗೇರಿಮಠ, ಜಯಕರ್ನಾಟಕ ಸಂಗಟನೆಯ ವಿಲಾಸ ಕಣಗಲಿ, ಶಿರಾಜ ಮುನವಳ್ಳಿ, ಜೀಜಾಮಾತಾ ಸಾಂತ್ವನ ಕೇಂದ್ರದ ಮಂಗಲಾ ಕಶೀಲಕರ, ಪುರಸಭೆ ಸದಸ್ಯರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಇತರರು ಇದ್ದರು.
Leave a Comment