
ಜೋಯಿಡಾ –
ಜೋಯಿಡಾ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆಯಲ್ಲಿ ಜಗಲಬೇಟ ಶಾಲೆಯ ವಿದ್ಯಾರ್ಥಿನಿ ನಿಖಿತಾ ದೇಸಾಯಿ ಇವಳು ಕಳೆದ ಸಾಲಿನ ಎಸ್,ಎಸ್,ಎಲ್,ಸಿ ಪರಿಕ್ಷೇಯಲ್ಲಿ ಕನ್ನಡ ವಿಷಯಕ್ಕೆ 125 ಅಂಕಗಳಿಗೆ 125 ಅಂಕ ಗಳಿಸುವ ಮೂಲಕ ಜೋಯಿಡಾ ತಾಲೂಕಿಗೆ ಕೀರ್ತಿ ತಂದಿದ್ದಳು,
ಜೋಯಿಡಾ ಕಾರ್ಯನಿರತ ಪತ್ರಕರ್ತ ಸಂಘ ಅವಳಿಗೆ ಗೌರವ ಸನ್ಮಾನ ಮಾಡುವದನ್ನು ತಿಳಿದ ದಾಂಡೇಲಿ ದಾಟ್ಕಾಮ ಮಾಲಿಕ ಸಂಜಯ ಭಟ್ಟ ಇವರು ವಿದ್ಯಾರ್ಥಿನಿಗೆ ಧನ ಸಹಾಯ ಮಾಡುವುದಾಗಿ ಹೇಳಿ ಕಾರ್ಯಕ್ರಮದಲ್ಲಿ ನಗದು ಹಣ ವಿತರಿಸಲು ತಿಳಿಸಿದ್ದರು, ಅಲ್ಲದೇ ಸಂಜಯ ಭಟ್ಟ ಇವರು ಈ ಹಿಂದೆ ಜೋಯಿಡಾ ತಾಲೂಕಿನ ಶಾಲೆಗಳಿಗೆ 18 ಸಾವಿರ ನೋಟಬುಕ್ಗಳನ್ನು ಸಹ ಕೊಟ್ಟಿದ್ದರು.
ಜೋಯಿಡಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಜೋಯಿಡಾದ ಸಿಪಿಐ ರಮೇಶ ಹೂಗಾರ ವಿದ್ಯಾರ್ಥಿಗೆ ಸಂಜಯ ಭಟ್ಟ ಅವರು ಕೊಟ್ಟಿದ್ದ ಗೌರವ ಧನ ನೀಡಿದರು.
Leave a Comment