
ಹೊನ್ನಾವರ: ತಾಲೂಕಿನ ಹಿರಿಯ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ನಡೆದ ಲೋಕ ಅದಾಲತನಲ್ಲಿ ವಿಮಾ ಕಂಪನಿಗಳು ಭಾಗವಹಿಸಿ 15 ಮೋಟಾರು ಅಪಘಾತ ಪ್ರಕರಣಗಳನ್ನು ಹಾಗೂ ಒಂದು ಕಾರ್ಮಿಕ ನಷ್ಟಭರ್ತಿ ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಿಕೊಂಡು 44 ಲಕ್ಷ 23 ಸಾವಿರ ರೂಪಾಯಿಗಳನ್ನು ಪರಿಹಾರವಾಗಿ ನೀಡಲು ಒಪ್ಪಿಕೊಂಡಿತು.
ಹೊನ್ನಾವರ ಹಿರಿಯ ಸಿವಿಲ್ ಜಜ್ ನ್ಯಾಯಾಧೀಶ ಎಮ್.ವಿ. ಚೆನ್ನಕೇಶವ ರೆಡ್ಡಿ ಉಪಸ್ಥಿತಿಯಲ್ಲಿ ಲೋಕಅದಾಲತ್ ನಡೆದವು. ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿಯ ಅಧಿಕಾರಿಗಳಾದ ಮುರಳಿಧರ, ನಿಖಿಲ್ ರಾವ್, ಪಿ.ಜಿ. ಮೊಗೇರ, ಉಲ್ಲಾಸ ನಾಯ್ಕ ಹಾಗೂ ನ್ಯೂ ಇಂಡಿಯಾ ಇನ್ಸೂರೆನ್ಸ್ ಕಂಪನಿಯ ಅಧಿಕಾರಿಗಳಾದ ಕೀರ್ತಿ ವಾಸನ್, ವೆಂಕಟೇಶ ತಮ್ಮ ಕಂಪನಿಯ ವಕೀಲರಾದ ಆರ್.ಎಸ್. ಕಾಮತ, ಎಮ್.ಎಲ್. ನಾಯ್ಕ, ಎಸ್.ಎಮ್. ಭಾಗ್ವತ್ ಕರ್ಕಿ, ಪಿ.ಎಸ್. ಭಟ್ಟ ಉಪಸ್ಥಿತರಿದ್ದು ವಿಮಾ ಪರಿಹಾರ ಅರ್ಜಿಯನ್ನು ರಾಜಿ ಸಂಧಾನ ಮೂಲಕ ಇತ್ಯರ್ಥಗೊಳಿಸಿದರು. ಅರ್ಜಿದಾರರ ಪರ ವಕೀಲರು ಹಾಗೂ ಅರ್ಜಿದಾರರು ರಾಜಿ ಸಂಧಾನದಲ್ಲಿ ಭಾಗವಹಿಸಿದ್ದರು.
Leave a Comment