
ಜೋಯಿಡಾ –
ಸುನೀಲ್ ಹೆಗಡೆ ಜೋಯಿಡಾ ಬಿ,ಎಸ್,ಎನ,ಎಲ್, ಹಂಗಾಮಿ ಉದ್ಯೋಗಿ ಜಗದೀಶ ಗಾವಾಡಾ ರವರ ಉಪವಾಸ ಸತ್ಯಾಗ್ರಹದ ಸ್ಥಳಕ್ಕೆ ( ಬಿ,ಎಸ್,ಎನ್,ಎಲ್, ) ಬೇಟಿ ನೀಡಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಸುನೀಲ ಹೆಗಡೆ ಬಿ,ಎಸ್,ಎನ್,ಎಲ್ ನವರು ಕೇಂದ್ರ ಸರ್ಕಾರದಲ್ಲಿ ಕೈಗೊಳ್ಳುವ ಕ್ರಮಕ್ಕಾಗಿ ಕಾಯುತ್ತಿದ್ದಾರೆ, ಇನ್ನೂ ಕೆಲವೇ ದಿನಗಳಲ್ಲಿ ಬಿ,ಎಸ್,ಎನ್,ಎಲ್, ಸರಿ ಹೋಗುವ ಸಾಧ್ಯತೆ ಇದೆ, ಅಲ್ಲಿ ವರೆಗೆ ಉಪವಾಸ ಸತ್ಯಾಗೃಹ ನಿಲ್ಲಿಸುವಂತೆ ಕೇಳಿಕೊಂಡರು. ನಿಮ್ಮಂತೆ ಹಲವಾರು ಉದ್ಯೋಗಿಗಳು ಹಲವಾರು ತಿಂಗಳಿಂದ ವೇತನಕ್ಕಾಗಿ ಕಾಯುತ್ತಿದ್ದಾರೆ, ಕೇಂದ್ರದಲ್ಲಿ ವ್ಯವಸ್ಥೆ ಸರಿಯಾಗುವ ವರಗೆ ಕಾದು ನೋಡಿ, ನಾನು ಈ ಸಮಸ್ಯೆ ಯನ್ನು ಸಂಸದರ ಗಮನಕ್ಕೆ ತರುತ್ತೇನೆ ಎಂದರು.
ಆದರೆ ಬಿ,ಎಸ್,ಎನ್,ಎಲ್, ಉದ್ಯೋಗಿ ಜಗದೀಶ ಮಾತ್ರ ನಾನು ನನ್ನ ವೇತನ ಸಿಗುವ ವರೆಗೂ ಉಪವಾಸ ಸತ್ಯಾಗ್ರಹ ಬಿಡುವುದಿಲ್ಲ , ಏನೇ ಆಗಲಿ ನನ್ನ ಹೋರಾಟ ನಡೆದೇ ಇರುತ್ತದೆ ಎಂದು ಉಪವಾಸ ಸತ್ಯಾಗ್ರಹ ಹಿಂದೆ ಪಡೆಯುವುದಿಲ್ಲ ಎಂದರು.
Leave a Comment