
ಜೋಯಿಡಾ ತಾಲೂಕಿನ ಕುಂಬಾರವಾಡಾ ಗ್ರಾಮ ಪಂಚಾಯತ ವ್ಯಾಪ್ತಿಯ ಕುಂಬಾರವಾಡಾ ಮತ್ತು ಕಿರವತ್ತಿ ಶಾಲೆಗಳಲ್ಲಿ ಯುವ ಬ್ರಿಗೇಡ್ ಜೋಯಿಡಾ ವತಿಯಿಂದ ಉಸಿರು ಹಂಚೋಣ ಎಂಬ ಕಾರ್ಯಕ್ರಮ ನಡೆಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಜೋಯಿಡಾ ಯುವ ಬ್ರೀಗೇಡ್ನ ಕಾರ್ಯಕರ್ತ ಗಣೇಶ ಹೆಗಡೆ ಗಿಡ ನೆಡುವುದರಿಂದ ನಮ್ಮ ಮುಂದಿನ ಪೀಳಿಗೆಗೆ ಸಹಾಯವಾಗುತ್ತದೆ, ಅಲ್ಲದೇ ಉಸಿರು ಹಂಚೋಣ ಎಂಬ ಕಾರ್ಯಕ್ರಮದಿಂದ ಜೋಯಿಡಾ ತಾಲೂಕಿನ ಶಾಲೆಗಳಲ್ಲಿ ಗಿಡ ನೆಟ್ಟು ಉಸಿರನ್ನು ನೀಡುತ್ತಿದ್ದೇವೆ, ಶಾಲೆಯ ಮಕ್ಕಳಿಗೆ ಮರ ಅಥವಾ ಗಿಡ ಇದ್ದರೆ ಅದರಿಂದಾಗುವ ಉಪಯೋಗದ ಬಗ್ಗೆ ತಿಳಿಸಿಕೊಟ್ಟರು,
ಕುಂಬಾರವಾಡಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 150 ಕ್ಕೂ ಹೆಚ್ಚಿನ ಗಿಡಗಳನ್ನು ಯುವಬ್ರೀಗೇಡ ವತಿಯಿಂದ ನಡೆಲಾಯಿತು, ಮಕ್ಕಳು ,ಶಿಕ್ಷಕರು ಮತ್ತು ಯುವ ಬ್ರಿಗೇಡ್ ಜೋಯಿಡಾದ ಕಾರ್ಯಕರ್ತರು ಗಿಡ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Leave a Comment