
ಖಾನಾಪುರ: ತಾಲೂಕಿನ ಮಲಪ್ರಭೆಯ ಉಗಮ ಸ್ಥಾನದ ಸುತ್ತಲೂ ಹಾಗೂ ತಾಲೂಕಿನಾದ್ಯಂತೆ ಕಳೆದ ಒಂದು ವಾರದಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಗೆ ಸೇತುವೆಗಳ ಜಲಾವೃತ, ಬೆಳೆಯ ಗದ್ದೆಗಳು ಮುಳುಗಡೆ ಜೋತೆಗೆ ಸೋಮವಾರ ಮಧ್ಯಾಹ್ನದ ವರೆಗೆ ಬರೊಬ್ಬರಿ 139ಕ್ಕೂ ಅಧಿಕ ಮನೆಗಳು ಗೋಡೆ ಕುಸಿದು ಜನ ಜೀವನಕ್ಕೆ ಅಡಚಣೆ ಉಂಟು ಮಾಡಿದೆ.

ತಾಲೂಕಿನ ಹೀರೆ ಅಂಗ್ರೋಳ್ಳಿ, ಮಂಗೆನಮಕೊಪ್ಪ, ಲಿಂಗನಮಠ, ಚುಂಚವಾಡ, ದೇವಲತ್ತಿ, ಸಾವರಗಾಳಿ ಹೀಗೆ ಹಲವಾರು ಗ್ರಾಮಗಳಲ್ಲಿ ಮಳೆಯ ರಭಸಕ್ಕೆ ಮನೆಯ ಗೋಡೆಗಳು ಕುಸಿದು ಜನರ ಜೀವನಕ್ಕೆ ತೊಂದರೆ ಉಂಟುಮಾಡಿವೆ. ಮನೆಗಳ ಗೋಡೆ ಕುಸಿತವಾಗುವುದಲ್ಲದೇ ಕಿಂಚಿತ್ತೂ ಬಿಡುವಿಲ್ಲದೇ ಸುರಿಯುತ್ತಿರುವ ಮಳೆಗೆ ಹಾನಿಗೊಳಗಾದ ಸಂತ್ರಸ್ತರು ಪರದಾಡುವಂತಾಗಿದೆ.
ಮನೆಗಳ ಗೋಡೆ ಕುಸಿತದಿಂದ ಹಾನಿಗೊಳಗಾದ ಗ್ರಾಮಗಳಿಂದ ಮಾಹಿತಿ ತಿಳಿದ ತಕ್ಷಣ ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಆದರೆ ಹಾನಿಗೊಳಗಾದ ಸಂತ್ರಸ್ತರಿಗೆ ಅದೆಷ್ಟೋ ಬೇಗ ಪರಿಹಾರ ಒದಗಿಸುತ್ತಾರೋ ಕಾದು ನೋಡುವ ಪರಿಸ್ಥಿತಿ ಎದುರಾಗಿದೆ.


Leave a Comment