
ಜೋಯಿಡಾ 10 ;
ತಾಲೂಕಿನ ಜಗಲಬೇಟ್ ಹಾಗೂ ಶಿಂಗರಗಾಂವ ಗ್ರಾ.ಪಂಚಾಯತ್ ವ್ಯಾಪ್ತಿಯ ಅರಣ್ಯ ಪ್ರದೇಶದ 7 ಕಡೆ ಬೃಹತ್ ಕೆರೆಗಳ ಕಟ್ಟೆ ಒಡೆದು ನೂರಾರು ಎಕರೆ ಕೃಷಿ ಭೂಮಿಗೆ ನೀರು ನುಗ್ಗಿ ಹಾನಿ ಸಂಭವಿಸಿದರೆ, ನಾಲ್ಕು ಮನೆಗಳು ಕುಸಿದು ಅಪಾರ ಹಾನಿಯಾಗಿದ್ದ ವರಧಿಯಾಗಿದೆ.
ಜಗಲಬೇಟ್ ಹಾಗೂ ಶಿಂಗರಗಾಂವ ಪಂಚಾಯತ್ ವ್ಯಾಪ್ತಿಯ ಕುಡಲಗಾಂವ, ವೈನಿ, ಮಾಲಂಬಾ ಹಾಗೂ ಜಗಲಬೇಟ್ಗಳಲ್ಲಿ ತಲಾ ಒಂದೊಂದು ಮನೆಗಳು ಮಳೆಯ ಅಬ್ಬರಕ್ಕೆ ಕುಸಿದು ಬಿದ್ದಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಮನನೆ ಕುಸಿತಕ್ಕೆ ಪ್ರಕೃತಿ ವಿಕೋಪದಡಿ ಪರಿಹಾರ ನೀಡುವ ಬರವಸೆಯನ್ನು ಸ್ಥಳಿಯ ಗ್ರಾ.ಪಂ. ಸದಸ್ಯರು ಬರವಸೆ ನೀಡಿದ್ದಾರೆ.
ಈ ಎಡರು ಪಂಚಾಯತ್ ವ್ಯಾಪ್ತಿಯ ಅರಣ್ಯ ಪ್ರದೇಶಗಳ ಕುಶೇಲಿ, ದುರ್ಗಿ ಗೌಳೀವಾಡಾ, ದುರ್ಗಿ, ಬಾಣಸವಾಡಿ, ವೈನಿ, ದುರ್ಗಿಗಡಕರ್ ಮನೆ ಹತ್ತಿರ ಅರಣ್ಯ ಇಲಾಖೆ ನಿರ್ಮಿಸಿದ ಒಟ್ಟೂ 7 ಕೆರೆಗಳು ತುಂಬಿ ಒಡೆದುಹೋಗಿದ್ದ ಪರಿಣಾಮ, ಸುತ್ತಲ ಹೊಲ ಹಗೂ ಕಬ್ಬಿನ ಗದ್ದೆಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ.
ಈ ಭಾಗದಲ್ಲಿ ನೂರಾರು ಎಕರೆ ಭತ್ತದ ಗದ್ದೆಗಳು,ಕಬ್ಬಿನ ಗದ್ದೆಗಳು ಕೆರೆಯ ನೀರಿನ ರಭಸಕ್ಕೆ ಹಾನಿಗೊಳಗಾಗಿದ್ದು, ಹೊಲದಲ್ಲಿ ಕೆರೆಯ ನರಿನ ರಭಸಕ್ಕೆ ಬಂದ ಊಳು(ಕೆಸರು) ತುಂಬಿಕೊಂಡಿದೆ. ಇದರಿಂದಾಗಿ ನಾಟಿಮಾಡಿದ ಭತ್ತದ ಸಸಿಗಳು ನಾಶವಾಗಿದ್ದು ರೈತರಿಗೆ ಲಕ್ಷಾಂತರ ರೂಪಾಯಿ ಬೆಳೆ ಹಾನಿ ಸಂಭವಿಸಿದ್ದು ಕಂಡುಬಂದಿದೆ.
ಹಾನಿ ಪ್ರದೇಶಕ್ಕೆ ಜಿ.ಪಂ. ಸದಸ್ಯ ಸಂಜಯ ಹಣಬರ, ತಾ.ಪಂ. ಉಪಾಧ್ಯಕ್ಷ ವಿಜಯ ಪಂಡಿತ, ತಾ.ಪಂ. ಸದಸ್ಯ ಸುಹಾಸ ದೇಸಾಯಿ, ಗ್ರಾ.ಪಂ. ಉಪಾಧ್ಯಕ್ಷ ಬಲವಂತ ದೇಸಾಯಿ, ಗ್ರಾ.ಪಂ. ಸದಸ್ಯರಾದ ಸಂಜಯ ಭಟ್ಟ ಮುಂತಾದವರು ಬೇಟಿ ನೀಡಿ ಪರಿಶೀಲಿಸಿ, ಬೇಳೆ ಹಾನಿಯಾಗಿರುವ g ರೈತರಿಗೆ ಪರಿಹಾರ ನೀಡುವ ಬರವಸೆ ನೀಡಿರುತ್ತಾರೆ.
Leave a Comment