ಮುಂಡಗೋಡ:- ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲೂಕಿನ ಚಿಗಳ್ಳಿ ಜನಲಾಶಯದ ಡ್ಯಾಂ ಮಧ್ಯಭಾಗದಿಂದ ಒಡೆದು ನೀರು ರಸ್ತೆಯ ಮೇಲೆ ರಭಸದಿಂದ ಹರಿಯುತ್ತಿದ್ದ ಕಾರಣ ಶಿರಸಿ ಮಾರ್ಗದ ಸಂಚಾರ ಬಂದ್ ಮಾಡಲಾಗಿತ್ತು. ಸಾಯಂಕಾಲದ ಹೊತ್ತಿಗೆ ನೀರಿನ ಪ್ರಮಾಣ ಕಡಿಮೆ ಆಗಿದೆ.
ಚಿಗಳ್ಳಿ ಡ್ಯಾಂ ಒಡೆದಿದ್ದರಿಂದ ಉಂಟಾದ ಪ್ರವಾಹದಲ್ಲಿ ಅರಣ್ಯ ಇಲಾಖೆಯ ಮನೆಯೊಂದು ಕೊಚ್ಚಿಕೊಂಡು ಹೋಗಿದೆ.
ಮುಂಡಗೋಡಿನಿಂದ ಶಿರಸಿ ಹೊಗುವ ಮಾರ್ಗದಲ್ಲಿ 10 ಕೀಮಿ ಅಂತರದಲ್ಲಿ ಇರುವ ನರ್ಸರಿ ಹಳ್ಳದ ಸೇತುವೆ ಮುಳುಗಡೆಯಾಗಿದ್ದರಿಂದ ಸಂಚಾರ ಕಡಿತವಾಗಿದ್ದು.
ಪ್ರವಾಹಕ್ಕೆ ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಹಾನಿಯಾಗಿದ್ದು ಸದ್ಯ ಭಾರಿ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಲಾಗಿದೆ ಎಂದು ತಿಳಿದು ಬಂದಿದೆ.
ಮಂಗಳವಾಡ ರಸ್ತೆ ರಿಪೇರಿ ಮಾಡಿದ ಬಳಿಕ ಎಲ್ಲ ವಾಹನಗಳಿಗೆ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎನ್ನಲಾಗಿದೆ.

Leave a Comment