
ಹಳಿಯಾಳ:- ವಿವಿಧ ಸಂಘಟನೆಯವರು ಸೇರಿ ತಾಲೂಕಿನ ಯಡೋಗಾ ಗ್ರಾಮದಲ್ಲಿಯ ಸಂತ್ರಸ್ಥರಿಗೆ ದಿನಸಿ ವಸ್ತುಗಳನ್ನು ನೀಡಿ ಸಹಾಯ ಹಸ್ತ ಚಾಚಿದರು.
ಕಳೆದ 5 ದಿನಗಳ ಹಿಂದೆ ಯಡೋಗಾ ಹಳ್ಳದಲ್ಲಿ ಬಂದ ಪ್ರವಾಹದಿಂದ ಸಂಪೂರ್ಣ ಮನೆಯನ್ನು ಕಳೆದುಕೊಂಡು ನಿರಾಶ್ರಿತರಾಗಿರುವ 2 ಕುಟುಂಬಗಳ 20 ಜನರು ಯಡೋಗಾ ಗ್ರಾಮದ ಸಿದ್ದಾರೂಢ ಮಠದಲ್ಲಿ ಆಶ್ರಯ ಪಡೆದಿದ್ದಾರೆ.
ಇವರಿಗೆ ಮಠದ ನಿರ್ಮಲಾನಂದ ಮಾತೆಯು ಆಶ್ರಯ ನೀಡಿದ್ದು ಅಲ್ಲದೇ ಊಟ-ಉಪಚಾರ ನೀಡಿದ್ದಾರೆ. ಇದನ್ನು ತಿಳಿದ ಪಟ್ಟಣದ ಹಿಂದೂ ಮುಖಂಡರಾದ ರಾಜು ಧೂಳಿ, ಪ್ರಸಾದ ಹುನ್ಸವಾಡಕರ, ಲಯನ್ಸ್ ಸಂಸ್ಥೆಯ ಎಮ್.ಆರ್.ಹಿರೆಮಠ, ಕರ್ನಾಟಕ ರಕ್ಷಣಾ ವೇದಿಕೆಯ ಬಸರವಾಜ ಬೇಂಡಿಗೇರಿ, ಚಂಧ್ರಕಾಂತ ದುರ್ವೆ, ನಿವೃತ್ತ ಪ್ರಾಧ್ಯಾಪಕ ಸುರೇಶ ಕಡೆಮನಿ, ಪತ್ರಕರ್ತರ ಸಂಘದ ಉಪಾಧ್ಯಕ್ಷ ಯೋಗರಾಜ ಎಸ್.ಕೆ, ಪ್ರಮುಖರಾದ ಜಿಡಿ ಗಂಗಾಧರ, ನಾಗರಾಜ ಹಂದ್ರಾಳ, ಭಜರಂಗಳದ ರಾಕೇಶ ವಾಣಿ ಇತರರು ತಮ್ಮ ಸ್ವಂತ ಹಣವನ್ನು ಕೂಡಿಸಿ ದಿನಸಿ ಕಿರಾಣಿ ವಸ್ತುಗಳು, ಕಾಯಿಪಲ್ಯೆಯನ್ನು ಖರೀದಿಸಿ ಮಠಕ್ಕೆ ಭೆಟಿ ನಿಡಿ ಸಂತ್ರಸ್ಥರಿಗೆ ತಲುಪಿಸಿದರು.
Leave a Comment