
ಜೋಯಿಡಾ ;
ತಾಲೂಕಿನ ಯುವ ಬ್ರೀಗೆಡ್ ಕಾರ್ಯಕರ್ತರು ಗಣೇಶ ಹೆಗಡೆ ನೇತ್ರತ್ವದಲ್ಲಿ ಕಾರವಾರ ಹಾಗೂ ಜೋಯಿಡಾ ತಾಲೂಕಿನ ಗಂಜಿಕೇಂದ್ರದ ನಿರಾಶ್ರಿತರಾದ ನೂರಾರು ಕುಟುಂಬಕ್ಕೆ ಹೊದಿಕೆ, ಉಡುಗೆಯ ವಸ್ತ್ರ, ಹಾಗೂ ನಿತ್ಯ ಬಳಕೆಯ ತಿನಿಸುಗಳನ್ನು ನೀಡುವ ಮೂಲಕ ನೆರವಾಗಿ ಕಷ್ಟದಲ್ಲಿ ಇರುವವರಿಗೆ ಸಹಾಯ ಹಸ್ತ ನೀಡಿದ್ದಾರೆ.
ಕಾಳಿ ಹಿನ್ನಿರಿನ ಪ್ರವಾಹದಿಂದ ಮನೆ ಮಠ ಕಳೆದುಕೊಂಡು ಸಂತ್ರಸ್ತರಾಗಿದ್ದ ಕಾರವಾರ ತಾಲೂಕಿನ ಮಲ್ಲಾಪುರ, ವಿರ್ಜೆ, ಬೋಳೆ, ಕುನ್ನಿಪೇಟೆ, ಕೆರವಡಿಗಳಲ್ಲಿ ನೆರೆ ಸಂತ್ರಸ್ಥರಾದ 300ಕ್ಕೂ ಹೆಚ್ಚು ಕುಟುಂಬಗಳಿಗೆ ಹಾಗೂ ಜೋಯಡಾ ತಾಲೂಕಿನ ಅಣಶಿ ನೆರೆ ಸಂತ್ರಸ್ಥರಿಗೆ ಬ್ಲಾಂಕೇಟ್ಸ್, ಟಿ ಸರ್ಟ, ಟಾವೆಲ್, ಅಂಡರವೆರ್, ನೈಟಿ ವಸ್ತ್ರವನ್ನು ಪತಿಯೊಂದನ್ನೂ 300 ಸಂಖ್ಯೆಯಲ್ಲಿ ವಿತರಿಸಿದ್ದು, ದೈನಂದಿನ ಬಳಕೆಯ ಸಾಮಗ್ರಿಗಳಾದ ಸಾಬೂನು, ತೆಂಗಿನ ಎಣ್ಣೆ, ಬಿಸ್ಕೇಟ್ಸ್, ಸೆರಲಾಕ್, ಅಡಿಗೆ ಸಾಮಗ್ರಿಗಳಾದ ಬೇಳೆ ಕಾಳುಗಳು, ಅಕ್ಕಿ ಸೇರಿದಂತೆ ಸುಮಾರು 1.5 ಲಕ್ಷ ಮೌಲ್ಯದ ದೈನಂದಿನ ಬಳಕೆಯ ಸಾಮಗ್ರಿಗಳನ್ನು ನೀಡಿರುತ್ತಾರೆ.
ಜೋಯಿಡಾ ತಾಲೂಕಿನಲ್ಲಿ ಕಳೆದ ಹತ್ತಾರು ವರ್ಷಗಳಿಂದ ಬೆಂಗಳೂರಿನ ತಮ್ಮ ಆಪ್ತ ಗೆಳೆಯರ ಬೆಳಗದ ಸಹಕಾರದೊಂದಿಗೆ ಗ್ರಾಮೀಣ ಶಾಲೆಗಳಿಗೆ ನೋಟಬುಕ್, ಸಮವಸ್ತ್ರ ವಿತರಿಸುತ್ತಾ ಬಂದ ತಾಲೂಕಿನ ಯುವ ಬ್ರೀಗೆಡ್ ಎಲ್ಲಿಯೂ ತಮ್ಮ ಸೇವೆಯನ್ನು ಪ್ರಚಾರದ ಗೀಳಿಗೆ ಬಿದ್ದು, ಪ್ರಚುರಪಡಿಸಿಕೊಂಡವರಲ್ಲ. ಈ ಬಾರಿ ಕಾರವಾರ ಹಾಗೂ ಜೋಯಿಡಾ ತಾಲೂಕಿನ ನೆರೆ ಸಂತ್ರಸ್ಥರಾದ ನೂರಾರು ಕುಟುಂಬಕ್ಕೆ ತಮ್ಮ ಪಾಲಿನ ಸೇವೆ ಸಲ್ಲಿಸಿದ್ದಾರೆ. ಆದರೆ ಈ ಬಗ್ಗೆ ಎಲ್ಲಿಯೂ ತಮ್ಮ ಸೇವೆಯನ್ನು ಹೇಳಿಕೊಳ್ಳದೆ, ನೇರೆ ಸಂತ್ರಸ್ಥರಿಗೆ ಸೇವೆ ಮಾಡಿದ ಸಂತೃತ್ಪಿಯಲ್ಲಿ ಖಷಿಪಟ್ಟಿರುತ್ತಾರೆ.
ಜೋಯಿಡಾ ತಾಲೂಕಿನ ಯುವ ಬ್ರೀಗೆಡ್ ಕಾರ್ಯಕರ್ತರಾದ ಗಣೇಶ ಹೆಡಗೆ, ಮಂಜು ಶೆಟ್ಟಿ, ಸ್ವಪ್ನೇಶ ಶೇಠ್ ಕುಂಬಾರವಾಡಾ, ರೂಪೇಶ ನಾಯ್ಕ ಕುಂಬಾರವಾಡಾ, ಉದಯ ಪಾಟಿಲ್, ನಾಗರಾಜ ಪೂಜಾರ, ಕಿರಣ ನಾಯ್ಕ ವಿದ್ಯಾಹೋಟೆಲ್, ಹುಸೇನ್ ಜೋಯಿಡಾ ಮುಂತಾದವರು ಸೇವೆ ಮಾಡುವ ಮೂಲಕ ನೆರೆ ಸಂತ್ರಸ್ಥರಿಗೆ ನೆರವಾಗಿದ್ದಾರೆ. ಈ ಬಗ್ಗೆ ಪತ್ರಿಕೆಗೆಯ ಗಮನಕ್ಕೆ ಬಂದಾಗ ವಾಸ್ತವ ಸ್ಥಿತಿ ತಿಳಿದು ಇವರ ಸೇವೆ ಸಮಾಜದ ಇತರರಿಗೂ ಸ್ಫೂರ್ತಿಯಾಗಲಿ ಎಂಬ ಸದುದ್ದೇಶದಿಂದ ಈ ಟೀಮ್ ಸೇವಾ ಕಾರ್ಯವನ್ನು ನೆನಪಿಸುತ್ತಾ, ಜೋಯಿಡಾ ತಾಲೂಕಿನ ಜನತೆಯ ಪರವಾಗಿ ಅವರನ್ನು ಶ್ಲಾಘಿಸಲು ಬಯಸುತ್ತಿದ್ದೇವೆ.

Leave a Comment