
ಹಳಿಯಾಳ:- ಹಳಿಯಾಳದ ನೆರೆ ಸಂತ್ರಸ್ತ ಸುಮಾರು 100 ಕುಟುಂಬದವರಿಗೆ ಬೆಂಗಳೂರಿನ ಬಿಡದಿಯ ಟೋಯೊಟಾ ಕಿರ್ಲೋಸ್ಕರ ಮೋಟಾರ ಕಾರ್ಮಿಕರ ಸಂಘದವರಿಂದ ಪರಿಹಾರ ಸಾಮಗ್ರಿಗಳ ಸಹಾಯ ದೊರೆತಿದೆ.
ತಾಲೂಕಿನ ಬೊಮ್ಮನಳ್ಳಿ ಹಾಗೂ ತಟ್ಟಿಹಳ್ಳ ಪ್ರದೇಶದ ಸಂತ್ರಸ್ಥರಿಗೆ ಭಾಗವತಿ ಗ್ರಾಮದಲ್ಲಿ ಶುಕ್ರವಾರ ಮಾಜಿ ಶಾಸಕ ಸುನೀಲ್ ಹೆಗಡೆ ಅವರು ಪರಿಹಾರ ಸಾಮಗ್ರಿಯ ಕಿಟ್ಗಳನ್ನು ವಿತರಿಸಿದರು. ನಂತರ ಕೆಸರೊಳ್ಳಿ ಗ್ರಾಮದಲ್ಲಿ ಕೆಸರೊಳ್ಳಿಯ ಕೆಲ ಸಂತ್ರಸ್ತರಿಗೂ ಪರಿಹಾರ ಸಾಮಗ್ರಿ ವಿತರಿಸಿದರು.
ಒಂದು ಕಂಟೆನರಲ್ಲಿ ಬಂದ ಅಕ್ಕಿ, ಚಾಪೆ, ಚಾದರ, ಬಟ್ಟೆ, ಸಾರಿ, ಪೇಸ್ಟ್, ಸೊಪು, ಬ್ಯಾಟರಿ, ಹಾಲು ಸೇರಿದಂತೆ ಜೀವನ ನಿರ್ವಹಣೆಯ ಅವಶ್ಯಕ ವಸ್ತುಗಳ ಕಿಟ್ ಗಳನ್ನು ವಿತರಿಸಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ಶಿವಾಜಿ ನರಸಾನಿ, ಬಿಜೆಪಿ ಯುವ ಮೊರ್ಚಾದ ರಾಜ್ಯ ಕಾರ್ಯಕಾರಣಿ ಸದಸ್ಯ ಗುರುಪ್ರಸಾದ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲ ಮುತ್ನಾಳ, ಪ್ರಮುಖರಾದ ಸಂತೋಷ ಘಟಕಾಂಬಳೆ, ವಿಎಮ್ ಪಾಟೀಲ್, ಬೆಂಗಳೂರಿನಿಂದ ಪರಿಹಾರ ಸಾಮಗ್ರಿ ವಿತರಿಸಲು ಬಂದಂತಹ ಉಮೇಶ, ವಸಂತ, ಹರೀಶ, ಮಂಜು, ದಿನೇಶ, ಸುಬ್ರಮಣ್ಯ, ಮಲ್ಲೀಕಾರ್ಜುನ, ಸಂತೋಷ ಇದ್ದರು.
Leave a Comment