
ಜೋಯಿಡಾ ತಾಲೂಕಿನಲ್ಲಿ ಕಳೆದ ಸಾಲಿನ ಎಸ್,ಎಸ್,ಎಲ್,ಸಿ ಪರೀಕ್ಷೇಯಲ್ಲಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತು ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯೋತ್ಸವದ ದಿನದಂದು ತಹಶೀಲ್ದಾರ ಕಚೇರಿಯ ಮುಂಭಾಗದಲ್ಲಿ ಲ್ಯಾಪ್ಟಾಪ್ ವಿತರಿಸಲಾಯಿತು.
ಜೋಯಿಡಾ ತಾಲೂಕಿನ ಗುಂದ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ದೀಕ್ಷಾ ದಯಾನಂದ ಉಪಾಧ್ಯ (95,68) ಹಾಗೂ ಗಿರೀಜಾ ಗಾಂವ್ಕರ (93.44) ಇವರಿಗೆ ಸಹಾಯಧನ ನೀಡಿ ಲ್ಯಾಪ್ಟಾಪ್ ನೀಡಲಾಯಿತು.
ಈ ಸಂಧರ್ಭದಲ್ಲಿಜಿ.ಪಂ. ಸದಸ್ಯ ರಮೇಶ ನಾಯ್ಕ, ತಾ.ಪಂ. ಅಧ್ಯಕ್ಷೆ ನರ್ಮದಾ ಪಾಟ್ನೇಕರ್, ಗ್ರಾ.ಪಂ.ಅಧ್ಯಕ್ಷ ಶೈಲಾ ನಾಯ್ಕ, ಉಪಾಧ್ಯಕ್ಷ ಶ್ಯಾಮ ಪೊಕಳೆ, ತಾ.ಪಂ. ಸದಸ್ಯೆ ಅಲ್ಕಾಂಜಾ ಮಥೇರೊ, ಬ್ಲಾಕ್ ಕಾಗ್ರೇಸ್ ಅಧ್ಯಕ್ಷ ಸದಾನಂದ ದಬಗಾರ, ಬಿ.ಜೆ.ಪಿ.ತಾಲೂಕಾ ಆದ್ಯಕ್ಷ ತುಕಾರಾಮ ಮಾಂಜ್ರೇಕರ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪ್ರಕಾಶ ಹಾಲಮ್ಮನವರ, ಸಿ.ಪಿ.ಐ. ಹುಗಾರ ಉಪಸ್ಥಿತರಿದ್ದರು.
Leave a Comment