
ಹಳಿಯಾಳ :- ಇನ್ನೊಬ್ಬರ ಜೀವ ಉಳಿಸಲು ಯಾವುದೇ ಪ್ರತಿಫಲಾಕ್ಷೇ ಇಲ್ಲದೇ ರಕ್ತದಾನ ಮಾಡದಬೇಕೆಂದು ಧಾರವಾಡ ಜಿಲ್ಲಾ ಆಸ್ಪತ್ರೆ ರಕ್ತ ಭಂಡಾರದ ವೈದ್ಯರಾದ ಡಾ. ಪ್ರಭು ಅಭಿಪ್ರಾಯ ಪಟ್ಟರು.
ಪಟ್ಟಣದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿಯಲ್ಲಿ ಸ್ವತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂದು ವೈಧ್ಯಕೀಯ ಕ್ಷೇತ್ರ ತುಂಬಾ ಮುಂದೆವರೆದಿದ್ದು, ಒಂದು ಯುನಿಟ್ ರಕ್ತದಾನದಿಂದ ಕನಿಷ್ಠ 4 ರಿಂದ 5 ಜೀವ ಉಳಿಸಲು ಸಾಧ್ಯ. ಯುವಜನಾಂಗ ಇಂತಹ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಜೀವ ಉಳಿಸುವ ಕೆಲಸಮಾಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟಿಯ ನಿದೇರ್ಶಕ ಎನ್ರ್ ವೈದ್ಯ ವಹಿಸಿ ಮಾತನಾಡಿ, ಜೀವ ಅತ್ಯಮೂಲ್ಯವಾದುದ್ದು. ಆರೋಗ್ಯವಂತ ಯುವಜನತೆ ರಕ್ತದ ಅವಶ್ಯಕತೆವಿರುವರಿಗೆ ರಕ್ತದಾನ ಮಾಡಬೇಕೆಂದರು.
ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿಯ ಯೋಜನಾ ಸಂಯೋಜಕ ವಿನಾಯಕ ಚವ್ಹಾಣ, ಉಪನ್ಯಾಸಕ ಮಂಜುನಾಥ ಲಕ್ಕಮನ್ನಳ್ಳಿ, ಧಾರವಾಡ ಜಿಲ್ಲಾ ಆಸ್ಪತ್ರೆ ರಕ್ತ ಭಂಡಾರದ ಆಪ್ತ ಸಮಾಲೋಚಕ ಶ್ರೀಶೈಲ್, ಪ್ರಯೋಗಾಲಯದ ತಜ್ಞ ಪ್ರಕಾಶ ಕಾಳೆ, ಸಂತೋಷ ಪರೀಟ, ವಿಷ್ಣು ಮಡಿವಾಳ ಇದ್ದರು.
ಸಂಸ್ಥೆಯ ಫೋಟೋಗ್ರಾಪಿ, ವಿಡಿಯೋಗ್ರಾಪಿ ಮತ್ತು ಲಘುವಾಹನ ಚಾಲನಾ ತರಬೇತಿಯ ಶಿಬಿರಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ರಕ್ತದಾನ ಮಾಡಿದರು.
Leave a Comment