
ಜೋಯಿಡಾ –
ಗಣೇಶ ಚತುರ್ಥಿಯೊಳಗೆ ನಮಗೆ ನೀರು ಕೊಡದಿದ್ದರೆ ನಾವು ರಸ್ತೆ ತಡೆ ಮಾಡುತ್ತೇವೆ ಎಂದು ರಾಮನಗರದ ಜನರು ತಾ,ಪಂ, ಸಭೆಯಲ್ಲಿ ಅಧಿಕಾರಿಗಳಿಗೆ ಎಚ್ಚರಿಸಿದ ಘಟನೆ ನಡೆದಿದೆ.
ಅಗಸ್ಟ ತಿಂಗಳಲ್ಲಿ ಭಾರೀ ಮಳೆಗೆ ರಾಮನಗರದ ನೀರಿನ ಪಂಪ ಹೌಸಗೆ ನೀರು ನುಗ್ಗಿತ್ತು, ಮೂರು ನೀರು ಎತ್ತುವ ಮಷೀನಗಳು ಈ ವೇಳೆ ನೀರಿನಲ್ಲಿ ಮುಳುಗಿ ಹಾಳಾಗಿದ್ದು , ಈಗ ನೀರೆತ್ತುವ ಪಂಪಗಳು ಕೆಟ್ಟು ನಿಂತಿವೆ, ಹೀಗಾಗಿ ಕಳೆದ 1 ತಿಂಗಳಿಂದ ನಮಗೆ ಕುಡಿಯಲು ನೀರು ಬರುತ್ತಿಲ್ಲ ಜನರು ಪಡಬಾರದ ಕಷ್ಟ ಪಡುತ್ತಿದ್ದಾರೆ,ಆದರೂ ಜನರ ಕಷ್ಟಕ್ಕೆ ಅಧಿಕಾರಿಗಳು ಸ್ಪಂದಿಸದೆ ಕೈಕಟ್ಟಿ ಕುಳಿತು ಕೊಂಡಿದ್ದಾರೆ,ಜನರು ಪ್ರತಿಭಟನೆಯ ದಾರಿ ಹಿಡಿದ್ದಿದ್ದಾರೆ ಎಂದು ರಾಮನಗರ ಗ್ರಾ,ಪಂ,ಸದಸ್ಯ ಶಿವಾಜಿ ಗೋಸಾವಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಕುಡಿಯುವ ನೀರು ಇಲಾಕೆ ಕಳೆದ ಹಲವಾರು ತಿಂಗಳಿಂದ ಇಲ್ಲಿನ ವಾಟರ ಮೇನ್ಗಳಿಗೆ ತಿಂಗಳ ವೇತನ ನೀಡಿಲ್ಲ, ಇದರಿಂದಾಗಿ ಇಲ್ಲಿನ ವಾಟರ ಮೇನಗಳು ನಮಗೆ ನೀರು ಬಿಡುತ್ತಿಲ್ಲ,ಅಲ್ಲದೇ ಇಲ್ಲಿ ಹಾಳಾದ ಮಷೀನಗಳ ರಿಪೇರಿ ಕೂಡಾ ಮಾಡುತ್ತಿಲ್ಲ, ಪಂಚಾಯತಗೆ ಹಸ್ತಾಂತಿರಿಸಲು ಇವರಿಂದ ಆಗುತ್ತಿಲ್ಲ, ಜನರಿಗೆ ನೀರು ಕೊಡಬೇಕೆಂಬ ಪರಿಜ್ಷಾನವೂ ಇಲ್ಲಿಯ ಅಧಿಕಾರಿಗಳಿಗೆ ಇಲ್ಲ ಎಂದು ಅಧಿಕಾರಿಗಳ ಮುಖಕ್ಕೆ ಮಂಗಳಾರತಿ ಮಾಡಿದರು.
ಇದಕ್ಕೆ ಉತ್ತರಿಸಿದ ಕುಡಿಯುವ ನೀರಾವರಿ ಅಧಿಕಾರಿ ಈರಣ್ಣ ಸುಳದಾಳ ಹಾಳಾದ ಮಷೀನ್ ರಿಪೇರಿ ಮಾಡಲು 10 ಲಕ್ಷ ರೂ ಬೇಕು ಅಷ್ಟೊಂದು ಹಣ ನಮ್ಮ ಇಲಾಕೆಯಲ್ಲಿ ಇಲ್ಲ ಎಂದರು,
ಇದಕ್ಕೆ ಉತ್ತರಿಸಿದ ತಾ,ಪಂ,ಸದಸ್ಯ ಶರತ ಗುರ್ಜರ ಮಳೆಗಾಲದಲ್ಲಿ ಪಂಪ ಹೌಸಗೆ ನೀರು ಬರುತ್ತದೆ ಎಂಬ ಸೂಚನೆ ಇದ್ದರೆ ಮೊದಲೇ ಬೆಲೆ ಬಾಳುವ ಪಂಪಗಳನ್ನು ನೀವು ಸ್ಥಳಾಂತರಿಸಬೇಕಿತ್ತು, ಅದನ್ನು ಬಿಟ್ಟು ಈಗ ಹಾಳಾಗಿದೆ ಎನ್ನುವ ಮಾತು ಸಮಂಜಸವಲ್ಲ, ಅಧಿಕಾರಿಗಳಾದ ನಿಮಗೆ ಸಮಯ ಪ್ರಜ್ಷೆ ಇಲ್ಲ , ಪ್ರತಿ ವರ್ಷ ರಾಮನಗರಕ್ಕೆ ಕುಡಿಯುವ ನೀರಿನ ಹೆಸರಿನಲ್ಲಿ ಲಕ್ಷಾಂತರ ಹಣ ಗುಳುಂ ಆಗುತ್ತಿದೆ, ನಿಮ್ಮಂತ ಅಧಿಕಾರಿಗಳಿಂದ ನಮ್ಮ ರಾಮನಗರದ ಜನರು ನೀರಿಲ್ಲದೆ ಸಾಯುತ್ತಿದ್ದಾರೆ ಎಂದರು.
ಇದಕ್ಕೆ ಉತ್ತರಿಸಿದ ತಾ,ಪಂ,ಸದಸ್ಯ ಸಂಜಯ ಹಣಬರ ಕುಡಿಯುವ ನೀರು ಇಲಾಕೆಯ ಅದಿಕಾರಿಗಳಿಗೆ ಕೂಡಲೇ ಜಿಲ್ಲಾದಿಕಾರಿಗಳ ಜೊತೆ ಮಾತನಾಡಿ ನೀರಿನ ವ್ಯವಸ್ತೆ ಮಾಡಿಸುವಂತೆ ತಿಳಿಸಿದರು.
Leave a Comment