
ಹಳಿಯಾಳ:- ಹಳಿಯಾಳ ತಾಲೂಕಿನ 14 ಪ್ರಾಥಮಿಕ ಪತ್ತಿನ ರೈತರ ಸೇವಾ ಸಹಕಾರಿ ಸಂಘಗಳು ಹಾಗೂ ಹಳಿಯಾಳ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದಿಂದ ತಲಾ 10 ಸಾವಿರ ರೂ.ಗಳಂತೆ ಒಟ್ಟೂ 1ಲಕ್ಷ 50 ಸಾವಿರ ರೂ. ಸಹಾಯ ಧನದ ಚೆಕ್ ಅನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಶುಕ್ರವಾರ ಹಳಿಯಾಳ ತಹಶೀಲ್ದಾರ್ ಮೂಲಕ ಸಲ್ಲಿಸಲಾಯಿತು. ವಿಧಾನ ಪರಿಷತ್ ಸದಸ್ಯರು ಆಗಿರುವ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಸ್.ಎಲ್.ಘೊಟ್ನೇಕರ ಹಾಗೂ ಜಿಲ್ಲಾ ಸಹಕಾರಿ ಯುನಿಯನ್ ಉಪಾಧ್ಯಕ್ಷ ಶಿವಪುತ್ರ ನುಚ್ಚಂಬ್ಲಿ ನೇತೃತ್ವದಲ್ಲಿ ನೆರೆ ಸಂತ್ರಸ್ಥರಿಗಾಗಿ ಒಂದೂವರೆ ಲಕ್ಷದ ಸಹಾಯಧನದ ಚೆಕ್ನ್ನು ಹಳಿಯಾಳ ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಅವರಿಗೆ ಹಸ್ತಾಂತರಿಸಿದರು.
Leave a Comment