
ಹಳಿಯಾಳ:- ಸಮಗ್ರ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ ಅಭಿಯಾನವು ಈ ತಿಂಗಳ ದಿ.30ರವರೆಗೆ ನಡೆಯಲಿದ್ದು, ಇರದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಪರಿಶೀಲನಾ ಮತ್ತು ಧೃಢೀಕರಣ, ತಿದ್ದುಪಡಿಯಂತಹ ಅನೇಕ ಸಹಾಯಕವಾಗುವ ಕಾರ್ಯ ಮಾಡಲಾಗುವುದು ಆದ್ದರಿಂದ ಸಾರ್ವಜನೀಕರು ಹೆಚ್ಚಿನ ಲಾಭ ಪಡೆದುಕೊಳ್ಳಬೇಕೆಂದು ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಕರೆ ನೀಡಿದರು.
ತಹಶೀಲ್ದಾರ ಕಛೇರಿಯ ಸಭಾ ಭವನದಲ್ಲಿ ಅವರು, ಜೆ.ಎನ್.ಎಫ್.ಸಿ.ಯ ಸಹಾಯಕ ಅಭಿಯೋಜಕರಾದ ಅಜೀತ ಜನೆಗೌಡ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ ಕುರಿಯವರ, ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಸಮೀರ ಮುಲ್ಲಾ ಇವರ ನೇತ್ರತ್ವದಲ್ಲಿ ಈ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿ ಯುವ ಮತದಾರರನ್ನು ಪಟ್ಟಿಗೆ ಸೇರಿಸಿಕೊಳ್ಳಲು ಉತ್ತಮ ಅವಕಾಶ ಇದಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿಗಳ ಮಾರ್ಗದರ್ಶನದಂತೆ ಮತದಾರ ಪಟ್ಟಿಯ ಪರಿಶೀಲನಾ ಕಾರ್ಯಕ್ರಮ ಮುಂದಿನ ಒಂದು ತಿಂಗಳವರಗೆ ನಡೆಯಲಿದೆ. ಸಾಮಾನ್ಯ ಸೇವಾ ಕೇಂದ್ರ, ಬೆಂಗಳೂರು ಒನ್, ಕರ್ನಾಟಕ ಒನ್, ಅಟಲ್ ಜನಸ್ನೇಹಿ ಕೇಂದ್ರ, ಬಾಪೂಜಿ ಸೇವಾ ಕೇಂದ್ರ ಮತಗಟ್ಟೆ ಅಧಿಕಾರಿ, ಮತದಾರ ನೋಂದಣಿ ಅಧಿಕಾರಿಗಳ ಕಛೇರಿಯ ಮತದಾರರ ಪೂರಕ ಕೇಂದ್ರಗಳಲ್ಲಿ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆಯ ಮಾಹಿತಿ ಪಡೆಯಬಹುದು ಮತ್ತು 1950 ಉಚಿತ ಕರೆಯ ಮೂಲಕ ಸಂಪರ್ಕಿಸಬಹುದು. ಯಾವುದೆ ಮತದಾರ ಮತದಾನದಿಂದ ಹೊರಗುಳಿಯಬಾರದು ಎನ್ನವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.
ಈ ಸಂದರ್ಭದಲ್ಲಿ ದಾಂಡೇಲಿ ತಹಶೀಲ್ದಾರ್ ಶೈಲೇಶ ಪರಮಾನಂದ, ತಾಲೂಕಿನ ಗ್ರಾಮ ಲೆಕ್ಕಾಧಿಕಾರಿಗಳು, ಪಿಡಿಒಗಳು ಹಾಗೂ ತಾಲೂಕಾಡಳಿತದ ಸಿಬ್ಬಂದಿ ವರ್ಗ ಇದ್ದರು.
Leave a Comment