
ಹಳಿಯಾಳ:- ಲೈಸನ್ಸ್, ವಾಹನದ ದಾಖಲಾತಿಗಳು ಇಲ್ಲದೇ ಹಾಗೂ ಹೆಲ್ಮೇಟ್ ಧರಿಸದೆ ವಾಹನ ಚಲಾವಣೆ ಮಾಡುವವರಿಗೆ ಭಾನುವಾರ ಹಳಿಯಾಳ ಪೋಲಿಸರು ಬಿಸಿ ಮುಟ್ಟಿಸಿದ್ದಾರೆ. ಒಂದೆ ದಿನ 50 ದ್ವಿಚಕ್ರ ವಾಹನ ಸವಾರರಿಗೆ 50 ಸಾವಿರ ರೂ. ದಂಡ ಹಾಕಲಾಗಿದೆ.
ಮೋಟಾರ್ ವಾಹನ ಕಾಯ್ದೆ ತಿದ್ದುಪಡಿ ಮೂಲಕ ಜಾರಿ ಮಾಡಿರುವ ಹೊಸ ದರದ ದಂಡ ಕ್ರಮವನ್ನು ಭಾನುವಾರ ಹಳಿಯಾಳ ಸಿಪಿಐ ಲೋಕಾಪುರ ಬಿಎಸ್ ಹಾಗೂ ಪಿಎಸ್ಐ ಆನಂದಮೂರ್ತಿಯವರು ಹಳಿಯಾಳದಲ್ಲಿ ಜಾರಿಗೆ ತಂದರು. ಅಲ್ಲದೇ ಹೆಲ್ಮೆಟ್ ಹಾಕಿ ವಾಹನ ಓಡಿಸಿ ಸೇರಿದಂತೆ ಸಂಚಾರ ನಿಯಮ ಉಲ್ಲಂಘಿಸಿದರೇ ದಂಡ ಎಷ್ಟು ವಿಧೀಸಲಾಗುತ್ತದೆ ಎಂಬ ಬಗ್ಗೆ ಸವಿಸ್ತಾರವಾಗಿ ನಮೂದಾಗಿರುವ ಕರಪತ್ರಗಳನ್ನು ಜನರಿಗೆ ಹಂಚುವ ಮೂಲಕ ಜಾಗೃತಿ ಮೂಡಿಸಲಾಯಿತು.
ಇನ್ನೂ ಮೊದಲ ದಿನವೇ 50 ದ್ವಿಚಕ್ರ ವಾಹನ ಸವಾರರಿಗೆ ಬಿಸಿ ಮುಟ್ಟಿಸಿದ್ದು 50 ಸಾವಿರ ರೂ. ದಂಡ ವಿಧಿಸಿಲಾಗಿದೆ ಎಂದು ಸಿಪಿಐ ಲೋಕಾಪುರ ಮಾಹಿತಿ ನೀಡಿದ್ದಾರೆ.
ಸರ್ಕಾರದ ನೀತಿ ನಿಯಮದಂತೆ ದಂಡ ವಸೂಲಿ ಮಾಡಲಾಗುತ್ತಿದೆ, ವಾಹನ ಸವಾರರಿಗೆ ತೊಂದರೆ ಆಗುವುದು ನೀಜ ಆದರೇ ಕಾನುನು ಪಾಲನೆಯು ಅನಿವಾರ್ಯವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ರೀತಿಯ ಸಂಚಾರ ಉಲ್ಲಂಘನೆಗೆ ದಂಡ ವಸೂಲಿ ಮಾಡಲಾಗುವುದು ಎಂದು ಸಿಪಿಐ ಲೋಕಾಪುರ ಎಚ್ಚರಿಕೆ ನೀಡಿದರು.
Leave a Comment