
ಜೋಯಿಡಾ –
ಶ್ರೀಮದ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನ, ಯಕ್ಷಶಾಲ್ಮಲಾ ಸಂಸ್ಥೆ ಹಮ್ಮಿಕೊಂಡ ಪ್ರೌಢ ಮತ್ತು ಪ್ರಾಥಮಿಕ ಶಾಲಾ ಮಕ್ಕಳ ತಾಳ ಮದ್ದಳೆ ಸ್ವರ್ಧೆ ಯಕ್ಷೋತ್ಸವ ಕಾರ್ಯಕ್ರಮ ಶ್ರೀ ಸೋಂದಾ ಸ್ವರ್ಣವಲ್ಲಿ ಮಠದಲ್ಲಿ ರವಿವಾರ ಸಂಪನ್ನಗೊಂಡಿತು.

ತಾಲೂಕಿನ ನಂದಿಗದ್ದಾ ಗ್ರಾ.ಪಂ.ದ ಯರಮುಖ, ನಂದಿಗದ್ದಾ, ಕರ್ಕಮನೆ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ನಡೆಸಿಕೊಟ್ಟ ವಾಲಿ ಮೋಕ್ಷ ಎಂಬ ಪೌರಾಣಿಕ ಯಕ್ಷಗಾನ ತಾಳಮದ್ದಳೆ ಕಥಾ ಭಾಗವು ಪ್ರಾಥಮಿಕ ಶಾಲಾ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದೆ.
ಸ್ವರ್ಣವಲ್ಲಿ ಮಹಾ ಸ್ವಾಮಿಗಳಿಂದ ತಾಳಮದ್ದಳೆ ಕೂಟವು ಪ್ರಶಸ್ತಿ ಪತ್ರವನ್ನು ಶ್ರೀಮಠದಲ್ಲಿ ಪಡೆದುಕೊಂಡಿತು. ಗುಂದ ಸೀಮಾ ಮಾತೃ ಮಂಡಳಿ ಅಧ್ಯಕ್ಷೆ ಶೀ ರಾಧಾ ಹೆಗಡೆ ಕಾರ್ಯಕ್ರಮವನ್ನು ಯಲ್ಲಾಪುರದ ನರಸಿಂಹ ಭಟ್ಟ ಕುಂಕಿಮನೆ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದರು. ವಿದ್ಯಾರ್ಥಿಗಳಾದ ವಿಜೇತ ದೇಸಾಯಿ, ಪೂರ್ವಿ ಭಟ್ಟ,ನಿಧಿ ಉಪಾಧ್ಯ, ಪ್ರಜ್ಷಾ ಹೆಗಡೆ, ತಾಳಮದ್ದಳೆಯಲ್ಲಿ ಅರ್ಥದಾರಿಗಳಾಗಿದ್ದರು.
ಯರಮುಖ ಶಾಲೆಯ ಎಸ,ಡಿ,ಎಮ್,ಸಿ,ಅದ್ಯಕ್ಷ ಮಹೇಶ ಭಟ್ಟ, ಗುಂದ ಪ್ರೌಢಶಾಲೆಯ ಅಧ್ಯಕ್ಷ ಸದಾನಂದ ಉಪಾಧ್ಯ, ಶಿಕ್ಷಕರಾದ ಜನಾರ್ಧನ ಹೆಗಡೆ, ಪ್ರಭಾ ಆಳ್ಕೆ, ಇತರರು ವಿದ್ಯಾರ್ಥಿಗಳಿಗೆ ಸಹಕಾರ ನೀಡಿದ್ದರು.
ನಂದಿಗದ್ದೆಯ ಗ್ರಾ.ಪಂ,ದ ಗ್ರಾಮಸ್ಥರು ಮತ್ತು ಗುಂದ ಸೀಮಾ ಅಧ್ಯಕ್ಷ ವಿಭಾಕರ ದೇಸಾಯಿ ಮಕ್ಕಳ ಸಾಧನೆಗೆ ಅವರನ್ನು ಅಭಿನಂದಿಸಿದ್ದಾರೆ.
Leave a Comment