ಹವಾಲಾ ಹಣ ಕೇಸಿನ ತನಿಖೆಗಾಗಿ ಇ.ಡಿ ಬಂಧನದಲ್ಲಿರುವ ರಾಜ್ಯದ ಪ್ರಭಾವಿ ರಾಜಕಾರಣಿ ಮಾಜಿ ಸಚಿವ ಡಿ.ಕೆ.ಶಿವಕುಮಾರ ಅವರು ಆರೋಗಳಿಂದ ಮುಕ್ತರಾಗಿ ಶೀಘ್ರ ಹೊರಬರುವಂತಾಗಲಿ ಎಂದು ತಾಲೂಕಾ ಒಕ್ಕಲಿಗರ ಸಂಘದವರು ಇಂದು ಪುಣ್ಯಕ್ಷೇತ್ರ ಇಡಗುಂಜಿಯಲ್ಲಿ ಗಣಹೋಮ ನಡೆಸಿ ಶ್ರೀದೇವರಿಗೆ ಪೂಜೆಸಲ್ಲಿಸಿದ್ದಾರೆ.
ಒಕ್ಕಲಿಗರ ಪ್ರಭಾವಿ ನಾಯಕನ ಬಂಧನವನ್ನು ವಿರೋಧಿಸಿ ಹಲವುಕಡೆ ಪ್ರತಿಭಟನೆಗಳು ನಡೆಯುತ್ತಿರುವ ಹೊತ್ತಲ್ಲಿ ತಾಲೂಕಿನಲ್ಲಿಯೂ ನೂರಾರು ಸಂಖ್ಯೆಯಲ್ಲಿ ಡಿ.ಕೆ.ಶಿವಕುಮಾರ ಅಭಿಮಾನಿಗಳು ದೇವಾಲಯಕ್ಕೆ ಆಗಮಿಸಿ ನೆಚ್ಚಿನ ನಾಯಕನ ಒಳಿತಿಗಾಗಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಮಾದ್ಯಮದೊಂದಿಗೆ ಮಾತನಾಡಿದ ತಾಲೂಕಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಟಿ.ಜೆ.ಗೌಡ ಅವರು ರಾಜ್ಯ ಕಾಂಗ್ರೆಸ್ಸಿನಲ್ಲಿ ಅತ್ಯಂತ ಪ್ರಭಾವಿಯಾಗಿ ಬೆಳೆಯುತ್ತಿದ್ದ ನಾಯಕರಾದ ಡಿ.ಕೆ.ಶಿವಕುಮಾರ ಅವರನ್ನು ಕೇಂದ್ರದ ಅದೀನ ಸಂಸ್ಥೆಗಳು ದುರುದ್ದೇಶದಿಂದ ವಿಚಾರಣಾ ನೆಪದಲ್ಲಿ ಬಂಧಿಸಿ ಕಿರುಕುಳ ನೀಡುತ್ತಿವೆ. ಆದರೆ ರಾಜ್ಯದ ಚುಕ್ಕಾಣಿ ಹಿಡಿಯುವ ಅರ್ಹತೆಯುಳ್ಳ ನಾಯಕನ ಒಳಿತಿಗಾಗಿ ಅವರಮೇಲೆ ಬಂದಿರುವ ಆರೋಪಗಳ ಮುಕ್ತಿಗಾಗಿ ನಾವು ನಂಬಿರುವ ಇಡಗುಂಜಿಯ ಮಹಾಗಣಪತಿಯ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಬೇಡಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಸ್ವತ: ಡಿ.ಕೆ.ಶಿವಕುಮಾರ ಅವರನ್ನೇ ಶ್ರೀಕ್ಷೇತ್ರಕ್ಕೆ ಕರೆಯಿಸಿ ಹೆಚ್ಚಿನ ಸೇವೆ ಸಲ್ಲಿಸುವ ಮಹತ್ವಾಕಾಂಕ್ಷೆಯನ್ನು ನಾವೆಲ್ಲಾ ಹೊಂದಿದ್ದೇವೆ ಎಂದರು.
ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಕೃಷ್ಣ ಗೌಡ ಮಾತನಾಡಿ ನಮ್ಮ ಸಮುದಾಯ ಒಕ್ಕೂರಲಿನಿಂದ ಖಂಡಿಸುತ್ತಿದ್ದು ಅವರು ಶಿಘ್ರ ಹೊರಬರುವ ವಿಶ್ವಾಸವಿದ್ದು ಮುಂಬರುವ ದಿನದಲ್ಲಿ ಅವರನ್ನು ಶ್ರೀ ಕ್ಷೇತ್ರಕ್ಕೆ ಕರೆತಂದು ವಿಶೇಷ ಪೂಜೆ ಸಲ್ಲಿಸಲಾಗುವುದು ಈ ದಿನ ಅವರ ಒಳಿತಿಗಾಗಿ ಗಣಹೋಮ ಹಾಗೂ ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕಾ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಮಾಬ್ಲ ಗೌಡ ಹಕ್ಕಲಕೇರಿ, ಖಜಾಂಚಿ ತಿಮ್ಮಪ್ಪ ಗೌಡ, ಜಿಲ್ಲಾಪಂಚಾಯತ ಸದಸ್ಯರಾದ ಸವಿತಾ ಗೌಡ ಒಕ್ಕಲಿಗರ ಸಂಘದ ನಿರ್ದೇಶಕರಾದ ರಾಮ ಗೌಡ, ಮಂಜು ಗೌಡ, ಮೋಳ ಗೌಡ, ಮಹೇಶ ಗೌಡ, ಮಾದೇವ ಗೌಡ ಅಣ್ಣಪ್ಪ ಗೌಡ, ನಾರಾಯಣ ಗೌಡ, ಗಣಪತಿ ಗೌಡ, ಶಂಭು ಗೌಡ, ವಿಠಲ ಗೌಡ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ನೆರೆದಿದ್ದರು.
Leave a Comment