
ಹಳಿಯಾಳ :- 2019-20 ನೇ ಸಾಲಿನ ಕರ್ನಾಟಕ ವಿಶ್ವ ವಿದ್ಯಾಲಯ ಏಕವಲಯ ಗುಡ್ಡಗಾಡು ಓಟ ಸ್ಪರ್ದೆ ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ತಂಡದ ಆಯ್ಕೆ ಪ್ರಕ್ರಿಯೇಯು ಹಳಿಯಾಳ ತಾಲೂಕಿನ ಹವಗಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು.
ದಿ.16 ಮತ್ತು 17 ಎರಡು ದಿನಗಳ ಕಾಲ ಹವಗಿಯ ಡಿಗ್ರಿ ಕಾಲೇಜಿನಲ್ಲಿ ನಡೆದ ಆಯ್ಕೆ ಮತ್ತು ಸ್ಪರ್ದಾ ಕಾರ್ಯಕ್ರಮದಲ್ಲಿ ಕರ್ನಾಟಕ ವಿಶ್ವ ವಿದ್ಯಾಲಯದ ಅಧಿನದಲ್ಲಿ ಬರುವ ಹುಬ್ಬಳ್ಳಿ-ಧಾರವಾಡ, ಉತ್ತರ ಕನ್ನಡ, ಗದಗ ಹಾಗೂ ಹಾವೇರಿ ಜಿಲ್ಲೆಗಳ 33 ಪುರುಷ ಹಾಗೂ 22 ಮಹಿಳಾ ವಿದ್ಯಾಲಯಗಳಿಂದ 85 ಪುರುಷ ಮತ್ತು 34 ಮಹಿಳಾ ಸ್ಪರ್ದಿಗಳು ಈ ಏಕವಲಯ ಗುಡ್ಡಗಾಡು ಓಟ ಸ್ಪರ್ದೆಯಲ್ಲಿ ಭಾಗವಹಿಸಿದ್ದರೆಂದು ದೈಹಿಕ ಶಿಕ್ಷಣ ಹಾಗೂ ಕ್ರೀಡಾ ವಿಭಾಗದ ನಿರ್ದೇಶಕರಾದ ಡಾ.ರೇಖಾ ಎಂ.ಆರ್. ಮಾಹಿತಿ ನೀಡಿದರು.
ಮಂಗಳವಾರ ಬೆಳಿಗ್ಗೆ ಹವಗಿಯ ಮಹಾವಿದ್ಯಾಲಯದ ಎದುರು 10ಕೀಮಿ ಏಕಲವಯ ಗುಡ್ಡಗಾಡು ಓಟಕ್ಕೆ ಕರ್ನಾಟಕ ವಿವಿ ಧಾರವಾಡ ದೈಹಿಕ ಶಿಕ್ಷಣ ವಿಭಾಗ ಸಂಯೋಜಕರಾದ ಶಕುಂತಲಾ ಹಿರೇಮಠ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಹವಗಿ, ಹುನ್ಸವಾಡ ಮೂಲಕ ಗುಡ್ಡಗಾಡು ಯಶಸ್ವಿಯಾಗಿ ನಡೆಯಿತು.

ಬಳಿಕ ಕಾಲೇಜಿನಲ್ಲಿ ನಡೆದ ಬಹುಮಾನ ವಿತರಣೆ ಹಾಗೂ ಸ್ಪರ್ದೆಯ ಸಮಾರೋಪ ಸಮಾರಂಭವನ್ನು ಹಳಿಯಾಳ ಪಿಎಸ್ಐ ಆನಂದಮೂರ್ತಿ ಅವರು ಸಸಿಗೆ ನಿರೆರೆಯುವುದರ ಮೂಲಕ ಚಾಲನೆ ನೀಡಿದರು ಹಾಗೂ ವಿಜೇತರಿಗೆ ಬಹುಮಾನಗಳನ್ನು ವಿತರಿಸಿ ಮಾತನಾಡಿ ಶುಭ ಕೊರಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಚಂದ್ರಶೇಖರ ಲಮಾಣಿ, ದೈಹಿಕ ನಿರ್ದೇಶಕರಾದ ಡಾ.ರೇಖಾ ಎಂ.ಆರ್, ಆಯ್ಕೆ ಸಮೀತಿಯ ಕಮಲಾ ಜಂಬಗಿ, ವಿನಾಯಕ ದವನೆ ಮೊದಲಾದವರು ಉಪಸ್ಥಿತರಿದ್ದರು.
ಮಂಗಳವಾರ ನಡೆದ ಸ್ಪರ್ದೆಯಲ್ಲಿ 6 ಮಹಿಳಾ ಹಾಗೂ 6 ಪುರುಷರು ಅಖೀಲ ಭಾರತ ವಿಶ್ವ ವಿದ್ಯಾಲಯ ಮಟ್ಟದ ಏಕವಲಯ ಗುಡ್ಡಗಾಡು ಓಟಕ್ಕೆ ಆಯ್ಕೆಯಾಗಿದ್ದಾರೆ. ಅಕ್ಟೋಬರ್ ತಿಂಗಳ 13-14-15ರಂದು ಮಂಗಳೂರಿನ ವಿಶ್ವ ವಿದ್ಯಾಲಯ ಮೂಡಬಿದ್ರೆಯಲ್ಲಿ ನಡೆಯುವ ಸ್ಪರ್ದೆಯಲ್ಲಿ ಪುರುಷರು ಹಾಗೂ ಆಂಧ್ರಪ್ರದೇಶದ ವಿಶ್ವವಿದ್ಯಾಲಯ ವಿಶಾಖ ಪಟ್ಟಣದಲ್ಲಿ ನಡೆಯುವ ಸ್ಪರ್ದೆಯಲ್ಲಿ ಮಹಿಳಾ ಸ್ಪರ್ದಿಗಳು ಭಾಗವಹಿಸುತ್ತಾರೆಂದು ದೈಹಿಕ ಶಿಕ್ಷಣ ಹಾಗೂ ಕ್ರೀಡಾ ವಿಭಾಗದ ನಿರ್ದೇಶಕರಾದ ಡಾ.ರೇಖಾ ಎಂ.ಆರ್. ಮಾಧ್ಯಮಗಳಿಗೆ ಮಾಹಿತಿ ನೀಡಿದರು.

Leave a Comment