ಜೋಯಿಡಾ –
ಜೋಯಿಡಾ ತಾಲೂಕಿನ ಅತೀ ಉತ್ತಮ ಸೇವಾ ಸಹಕಾರಿ ಸಂಘ ಎಂಬ ಖ್ಯಾತಿಯನ್ನು ಪಡೆದ ನಂದಿಗದ್ದಾ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸಪ್ಟೆಂಬರ 24 ರಂದು ನಡೆಯಲಿದ್ದು , ಈ ಸಭೆಗೆ ಸಂಘದ ಎಲ್ಲಾ ಸದಸ್ಯರು ಹಾಜರಿರಬೇಕು ಎಂದು ನಂದಿಗದ್ದಾ ಸೇವಾ ಸಹಕಾರಿ ಸಂಘ ವಿನಂತಿಸಿಕೊಂಡಿದೆ.
ಈ ವರ್ಷ 19 ಲಕ್ಷ ಲಾಭವನ್ನು ಸಂಘ ಮಾಡಿದ್ದು, ಇನ್ನೂಳಿದ ಜಮಾ ಖರ್ಚಿನ ಬಗ್ಗೆ ಮತ್ತು ಜನರಿಗೆ ಬೆಳೆಸಾಲದ ಮಾಹಿತಿಯನ್ನು ಕೂಡಾ ಈ ವಾರ್ಷಿಕ ಸಭೆಯಲ್ಲಿ ನೀಡಲಾಗುವುದು, ಈ ಸಭೆಯು ಯರಮುಖದ ಸೋಮೆಶ್ವರ ಸಭಾಭವನದಲ್ಲಿ ದಿ, 24 ಸಪ್ಟೆಂಬರ ಮಂಗಳವಾರದಂದು 10 ಘಂಟೆಗೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎನ್,ವಿ,ಹೆಗಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment