
ಜೋಯಿಡಾ –
ಯಕ್ಷಗಾನ ಪ್ರಸಿದ್ದ ಸಾಂಸ್ಕ್ರತಿಕ ಕಲೆ , ಇಂತ ಕಲೆಗಳಿಗೆ ಟಿ,ವಿ,ಮಾಧ್ಯಮಗಳಿಂದ ಧಕ್ಕೆ ಬಂದಿದೆ ಎಂದು ಮಾಜಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.
ಅವರು ಶನಿವಾರ ಜೋಯಿಡಾ ತಾಲೂಕಿನ ಯರಮುಖದ ಸೋಮೇಶ್ವರ ಸಭಾ ಭವನದಲ್ಲಿ ಗಡಿನಾಡು ಅಭಿವೃದ್ದಿ, ಕನ್ನಡ ಸಂಸ್ಕ್ರತಿ ಇಲಾಕೆ, ಸಪ್ತಸ್ವರ ಸೇವಾ ಸಂಸ್ಥೆ,ಶೇಯಾ ಅಭೀವೃದ್ದಿ ಟ್ರಸ್ಟ ದಾಂಡೇಲಿ,ಕೀರ್ತಿ ತಾಳಮದ್ದಳೆಕೂಟ ಇವರ ಸಹಯೋಗದಲ್ಲಿ ಯಕ್ಷಗಾನ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕಲೆಗಳು ಸೊರಗುತ್ತಿರುವುದನ್ನು ಕಂಡು ಸರ್ಕಾರ , ಕಲೆ ಸಂಸ್ಕ್ರತಿಗಳು ಉಳಿಯಲಿ ಎಂದು ಆರ್ಥಿಕ ಸಹಕಾರ ನೀಡುತ್ತಿವೆ, ಜೊಯಿಡಾದಲ್ಲಿ ಈ ಮಹಿಳಾ ಸಂಘಟನೆಗಳು ಉತ್ತಮ ಕಾರ್ಯ ಮಾಡುತ್ತಿವೆ,ಬಯಲು ಸೀಮೆಯಲ್ಲಿ ಬಯಲಾಟ, ಸಣ್ಣಾಟಗಳಗಳು ಪ್ರಸಿದ್ದ, ಉತ್ತರಕನ್ನಡದಲ್ಲಿ ಯಕ್ಷಗಾನ ಪ್ರಸಿದ್ದ, ಯಕ್ಷಗಾನದಂತ ಕಲೆಗಳನ್ನು ಮುಂದಿನ ಪೀಳಿಗೆಯವರು ಉಳಿಸಿಕೊಂಡು ಹೋಗುವಂತೆ ಮಾಡಬೇಕು ಎಂದರು.
ಖ್ಯಾತ ಸಾಹಿತಿ ಖಾದರ ಮೈನುದ್ದೀನ ಶೇಖ್ ಮಾತನಾಡಿ ಸುಖ , ಸಂತೋಷಗಳು ನಮ್ಮಲ್ಲಿಯೇ ಇರುತ್ತವೆ , ಆದರೆ ಅದನ್ನು ಅನುಭವಿಸುವ ಮನಸ್ಸು ನಮಗಿರಬೇಕು, ಸಂಘಟನೆಯನ್ನು ಯಾರೇ ಮಾಡಲಿ ಅವರು ನಮ್ಮವರು ಎಂದು ತಿಳಿದು ಕನ್ನಡ ಸಂಸ್ಕ್ರತಿ ಉಳಿಯಲು ಸಹಕಾರ ನೀಡಬೇಕು ,ಕಳೆದ 14 ವರ್ಷಗಳಿಂದ ಕಲೆ, ಸಂಸ್ಕ್ರತಿಗಳನ್ನು ಉಳಿಸಲು ಇಲ್ಲಿಯ ಹೆಣ್ಣುಮಕ್ಕಳು ಶ್ರಮಿಸುತ್ತಿರುವುದು ನಿಜವಾಗಿಯೂ ಹೆಮ್ಮೆಯ ಸಂಘತಿ ಎಂದು ಹೆಣ್ಣಿನ ಮಹಿಮೆಯ ಕುರಿತು ಸುಂದರವಾಗಿ ಮಾತನಾಡಿದರು.
ಸೋಮೆಶ್ವರ ದೇವಸ್ಥಾನದ ಅಧ್ಯಕ್ಷ ಪ್ರಸನ್ನ ಭಟ್ಟ ಸ್ಥಳೀಯ ವ್ಯವಸ್ಥೆ ಮತ್ತು ಕಲೆಗಳು ಮುಂದಿನ ಪೀಳಿಗೆಗೆ ಹೇಗೆ ಅವಶ್ಯ ಎನ್ನುವ ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಹಾವೇರಿಯ ಮನೋಹರ ತಹಶೀಲ್ದಾರ ಮಾತನಾಡಿ ಬಹಳ ವರ್ಷಗಳಿಂದ ಹಲವಾರು ಕಾರ್ಯಕ್ರಮ ನೀಡುತ್ತಾ ಕಳೆದ 5 ವರ್ಷಗಳಿಂದ ಯಕ್ಷಗಾನ ಸಪ್ತಾಹ ಆಚರಿಸುವ ಮೂಲಕ ಕಲಿಯುವ ಆಸಕ್ತಿ ಇರುವವರಿಗೆ ವೇದಿಕೆ ಕಲ್ಪಿಸಿದ್ದಿರಿ, ಯಕ್ಷಗಾನ ದೈವದತ್ತವಾದ ಕಲೆ, ಅದು ಎಲ್ಲರಿಂದ ಸಾಧ್ಯವಿಲ್ಲ, ಕಲಾವಿದರನ್ನು ಪ್ರೋತ್ಸಾಹಿಸುವ ಜನ ಬೇಕು.ಪುರಾತನ ಸನಾತನ ಕಲೆಗಳನ್ನು ಉಳಿಸಿ ಬೆಳೆಸಿದರೆನೇ ಮುಂದಿನ ಪೀಳಿಗೆಗೆ ಅದು ಉಳಿಯಲು ಸಾದ್ಯ ಎಂದರು.
ವೇದಿಕೆಯಲ್ಲಿ ಗ್ರಾ.ಪಂ,ಸದಸ್ಯ ರಾಮಕೃಷ್ಣ ದಾನಗೇರಿ, ಮಂಜುನಾಥ ಸುಣಗಾರ, ನಿರ್ಮಲಾ ಹೆಗಡೆ ಶಿರಸಿ, ಗೀತಾ ದಾಂಡೇಲಿ, ಪೋಲಿಸ್ ಇಲಾಕೆಯ ಜೋಕಳೆಕರ ಉಪಸ್ಥಿರಿದ್ದರು.ಹಲವಾರು ಜನಪ್ರತಿನಿಧಿಗಳ ಗೈರು ಹಾಜರಿ ಎದ್ದು ಕಾಣುವಂತಾಗಿತ್ತು.
ಆರಂಭದಲ್ಲಿ ಕುಮಾರಿ ರಕ್ಷಿತ್ರಾ ಮತ್ತು ಮಾನ್ಯಾ ಇವರಿಂದ ಸ್ವಾಗತ ನೃತ್ಯ, ಸಂಸ್ಥೆಯ ಅಧ್ಯಕ್ಷೆ ಸುಮಂಗಲಾ ದೇಸಾಯಿ ಅವರ ಪ್ರಾಸ್ತಾವಿಕ ಮಾತುಗಳು ನಡೆದವು, ಕಾರ್ಯಕ್ರಮವನ್ನು ಸಂದ್ಯಾ ದೇಸಾಯಿ ನಿರ್ವಹಿಸಿದರು.
ನಂತರ ಮಕ್ಕಳಿಂದ ಬಾಲ ಕಲಾವಿದರಿಂದ ಯಕ್ಷಗಾನ ನಡೆಯಿತು.

Leave a Comment