ಹಳಿಯಾಳ:- ಶಾಸಕ ಆರ್.ವಿ.ದೇಶಪಾಂಡೆ, ರಾಜಕಾರಣಿಗಳು ಹಾಗೂ ಅಧಿಕಾರಿಗಳ ವಾಹನಗಳು ಪಾರ್ಕಿಂಗ್ ನಿಯಮವನ್ನು ಉಲ್ಲಂಘಿಸಿ ನಿಂತಿದ್ದರು ಕೂಡ ಹಳಿಯಾಳ ಪುರಸಭೆ ಹಾಗೂ ಪೋಲಿಸ್ ಇಲಾಖೆಯವರು ಅವರ ವಾಹನಗಳಿಗೆ ಲಾಕ್ ಅನ್ನು ಹಾಕಿ ದಂಡವನ್ನು ವಿಧಿಸದೆ ಇರುವುದು ಸಾರ್ವಜನೀಕರ ಆಕ್ರೋಶಕ್ಕೆ ಕಾರಣವಾಗಿದೆ.
ಹಳಿಯಾಳ ಪಟ್ಟಣದ ಮಾರುಕಟ್ಟೆ ರಸ್ತೆಯಲ್ಲಿ ಕಳೆದ ಹಲವಾರು ತಿಂಗಳುಗಳಿಂದ ವಾಹನಗಳನ್ನು ವಾರದಲ್ಲಿ ಮೂರು ದಿನ ಒಂದು ಬದಿ ಎಡ ಹಾಗೂ ವಾರದಲ್ಲಿ ಮೂರು ದಿನ ಬಲಬದಿ ನಿಲ್ಲಿಸುವ ನಿಯಮವನ್ನು ಪುರಸಭೆ ಹಾಗೂ ಹಳಿಯಾಳ ಪೋಲಿಸರು ರೂಪಿಸಿ ಜಾರಿಗೆ ತಂದಿದ್ದಾರೆ.

ಆದರೇ ಇದರಲ್ಲಿ ಬಡವರಿಗೊಂದು, ಧನಿಕರಿಗೊಂದು, ಹಾಗೆಯೇ ರಾಜಕಾರಣಿಗಳಿಗೊಂದು ನ್ಯಾಯವನ್ನು ಮಾಡಲಾಗುತ್ತಿದೆ ಎಂಬುದು ಸಾರ್ವಜನೀಕರ ಆರೋಪವಾಗಿದೆ.
ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸುವ ವಾಹನಗಳಿಗೆ ತಲಾ ಒಂದು ಸಾವಿರ ದಂಡವನ್ನು ವಿಧಿಸಲಾಗುತ್ತಿದೆ. ಪುರಸಭೆಯಿಂದ ರೀಕ್ಷಾವೊಂದನ್ನು ಮೈಕ್ ಸೆಟ್ ಅಳವಡಿಸಿ ಅನೌನ್ಸ್ ಮೆಂಟ್ ಮಾಡಲು ನೀಯೋಜಿಸಲಾಗಿದೆ. ಪ್ರತಿದಿನ ರೀಕ್ಷಾಕ್ಕೆ ಪುರಸಭೆಯವರು 2400 ರೂ. ಭಾಡಿಗೆಯನ್ನು ನೀಡುತ್ತಿದ್ದಾರೆ ಆದರೇ ದಂಡವನ್ನು ಮಾತ್ರ ಪೋಲಿಸ್ ಇಲಾಖೆಯವರು ಪಡೆಯುತ್ತಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಇನ್ನೂ ಈ ರೀಕ್ಷಾದಲ್ಲಿ ಇಬ್ಬರು ಗೃಹ ರಕ್ಷಕ ಸಿಬ್ಬಂದಿಗಳು, ಒರ್ವ ಪುರಸಭಾ ಸಿಬ್ಬಂದಿ ಈ ನೂತನ ಸಂಚಾರಿ ನಿಯಮವನ್ನು ಪಾಲಿಸಲು ಪ್ರತಿದಿನ ಮಾರುಕಟ್ಟೆಯಲ್ಲಿ ಧ್ವನಿವರ್ಧಕ ಮೂಲಕ ಅನೌನ್ಸಮೆಂಟ್ ಮಾಡುತ್ತಾ ಸಾಗುವುದು ಜನರಿಗೆ ಪ್ರತಿದಿನದ ತಪ್ಪದ ಕಿರಿಕಿಯಾಗಿ ಪರಿಣಮಿಸಿದೆ. ಅಲ್ಲದೇ ಈ ಗೃಹರಕ್ಷಕ ಸಿಬ್ಬಂದಿಗಳು ವಾಹನ ಸವಾರರೊಂದಿಗೆ ದುರ್ವರ್ತನೆ ತೊರುತ್ತಿದ್ದಾರೆಂದು ಸಾಕಷ್ಟು ಆರೋಪಗಳು ಕೇಳಿ ಬರುತ್ತಿವೆ.

ಸೋಮವಾರ ಶಾಸಕರು, ರಾಜಕಾರಣಿಗಳು ಹಾಗೂ ಇತರ ಅಧಿಕಾರಿಗಳ 5ಕ್ಕೂ ಹೆಚ್ಚು ಕಾರುಗಳು ನೋ ಪಾರ್ಕಿಂಗ್ ನಲ್ಲಿ ತಾಸುಗಟ್ಟಲೆ ನಿಂತಿದ್ದರು ಕೂಡ ಇವರು ಅವರ ವಾಹನಗಳಿಗೆ ಲಾಕ್ ಹಾಕದೆ ದಂಡವನ್ನು ವಿಧಿಸಿದೆ. ಇದೆ ಮಾರ್ಗದಲ್ಲಿ ನಿಂತಿದ್ದ ಓರ್ವ ವಿದ್ಯಾರ್ಥಿಯ ವಾಹನಕ್ಕೆ ಲಾಕ್ ಹಾಕಿ ದಂಡ ವಸೂಲಿ ಮಾಡಿದ್ದಕ್ಕೆ ಸಾರ್ವಜನೀಕರು ತೀವೃ ಅಸಮಾಧಾನವನ್ನು ವ್ಯಕ್ತಪಡಿಸಿದ್ದು ಕಂಡು ಬಂದಿತು.
ಸೋಮವಾರ, ಬುಧವಾರ ಹಾಗೂ ಶುಕ್ರವಾರ ಶಾಸಕ ದೇಶಪಾಂಡೆ ಅವರ ಮನೆಯ ಎದುರಿನ ವಿರುದ್ದದ ಸಾಲಿನಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಲು ನಿಯಮ ಸೂಚಿಸಲಾಗಿದೆ ಆದರೇ ಅದು ಆಗದೆ ನೋ ಪಾರ್ಕಿಂಗ್ನಲ್ಲಿ ವಾಹನಗಳನ್ನು ನಿಲ್ಲಿಸಲಾಗಿತ್ತು.
ಇನ್ನೂ ಮುಂದಾದರು ಪುರಸಭೆ ಹಾಗೂ ಪೋಲಿಸ್ ಇಲಾಖೆಯವರು ಈ ಸಂಚಾರಿ ನಿಯಮದಲ್ಲಿ ಉಳ್ಳವರಿಗೊಂದು ಹಾಗೂ ಬಡವರಿಗೆ ಇನ್ನೊಂದು ನ್ಯಾಯ ಮಾಡದೆ ಎಲ್ಲರಿಗೂ ಸಮಾನ ನ್ಯಾಯ ಕಲ್ಪಿಸುವರೇ ಕಾದು ನೋಡಬೇಕಿದೆ.
Leave a Comment