
ಹಳಿಯಾಳ:- ಧರ್ಮ ರಕ್ಷಣೆ ಮತ್ತು ರಾಷ್ಟ್ರ ಪ್ರೇಮದ ಜಾಗರಣೆಯ ಸಲುವಾಗಿ ನವರಾತ್ರಿ(ದಸರಾ) ಹಬ್ಬದ ಪ್ರಯುಕ್ತ 9 ದಿನಗಳ ಕಾಲ ಹಳಿಯಾಳ ಪಟ್ಟಣ ಮತ್ತು ಗ್ರಾಮಾಂತರ ಭಾಗದಲ್ಲಿ ನಡೆಯುವ “ದುರ್ಗಾದೌಡ” ಧಾರ್ಮಿಕ ನಡಿಗೆ ಕಾರ್ಯಕ್ರಮ ಅಂಗವಾಗಿ ಹಳಿಯಾಳದಲ್ಲಿ ಶನಿವಾರ ಬೃಹತ್ ಬೈಕ್ ಜಾಥಾ ಯಶಸ್ವಿಯಾಗಿ ನಡೆಯಿತು.
ಶ್ರೀ ಶಿವ ಪ್ರತಿಷ್ಠಾನ, ದುರ್ಗಾದೌಡ ಸಮೀತಿ ಹಾಗೂ ವಿವಿಧ ಹಿಂದೂ ಸಂಘಟನೆಯವರ ಸಂಯುಕ್ತಾಶ್ರಯದಲ್ಲಿ ವಿಜೃಂಭಣೆಯಿಂದ ನಡೆಯಲಿರುವ ದುರ್ಗಾದೌಡ ಅಂಗವಾಗಿ ಹಿಂದೂ ಸಮಾಜ ಬಾಂಧವರು, ವಿವಿಧ ಹಿಂದೂ ಸಂಘಟನೆಯವರು ನೂರಾರು ಸಂಖ್ಯೆಯ ಬೈಕ್ಗಳಲ್ಲಿ ಆಗಮಿಸಿದ ಮಹಿಳೆಯರು, ಯುವತಿಯರು ಹಾಗೂ ಯುವಕರು ಭಗವಾ ಧ್ವಜಗಳೊಂದಿಗೆ ಶ್ರೀ ಗಣೇಶ ದೇವಸ್ಥಾನದ ಎದುರು ಸೇರಿ ಶ್ರೀ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ ಬೈಕ್ ರ್ಯಾಲಿ(ಜಾಥಾ) ಪ್ರಾರಂಭಿಸಿ ಪಟ್ಟಣದ ಪ್ರಮುಖ ಎಲ್ಲಾ ಬೀದಿಗಳಲ್ಲಿ ಸಂಚರಿಸಿದರು.

ದುರ್ಗಾಮಾತಾ ಕೀ ಜೈ, ಶಿವಾಜಿ ಮಹಾರಾಜ ಕೀ ಜೈ, ಜೀಜಾಮಾತಾ ಕೀ ಜೈ ಸೇರಿದಂತೆ ವಿವಿಧ ಘೊಷಣೆಗಳನ್ನು ಮೊಳಗಿಸಿದ ರ್ಯಾಲಿಯಲ್ಲಿ ಭಾಗವಹಿಸಿದರು ದಿ.29 ಭಾನುವಾರದಿಂದ ಆರಂಭವಾಗುವ ದುರ್ಗಾದೌಡ ಕುರಿತು ಜಾಗೃತಿ ಮೂಡಿಸಿದರು. ವಿಶೇಷ ಪೋಲಿಸ್ ಬಂದೋಬಸ್ತನಲ್ಲಿ ಯಾವುದೇ ಅವಘಡಗಳು ನಡೆಯದಂತೆ ಬೈಕ್ ರ್ಯಾಲಿ ಯಶಸ್ವಿಯಾಗಿ ಸಂಪನ್ನಗೊಂಡಿತು.
ಪ್ರಮುಖರಾದ ರಾಜು ಧೂಳಿ, ಪ್ರಸಾದ ಹುನ್ಸವಾಡಕರ, ಸಂತೋಷ ಘಟಕಾಂಬಳೆ, ಮಂಗಲಾ ಕಶೀಲಕರ, ಶಾಂತಾ ಹಿರೇಕರ, ಅನಿಲ ಮುತ್ನಾಳ್, ಮಂಜು ಪಂಡಿತ, ಶ್ರೀನಿವಾಸ ದೊಡ್ಮನಿ, ವಿಜಯ ಬೋಬಾಟಿ, ತಾನಾಜಿ ಪಟ್ಟೇಕರ, ಚೂಡಪ್ಪಾ ಬೋಬಾಟಿ, ವಿಲಾಸ ಯಡವಿ, ತುಕಾರಾಮ ಪಟ್ಟೇಕರ, ಗಣಪತಿ ಶಿಂಧೆ, ವಿಲಾಸ ಕಣಗಲಿ, ಬಸರಾಜ ಬೆಂಡಿಗೇರಿಮಠ ಮೊದಲಾದವರು ಇದ್ದರು.
Leave a Comment