
ಹಳಿಯಾಳ:- ಪಟ್ಟಣದಲ್ಲಿ ದುರ್ಗಾದೌಡ ವೀರಕ್ತ ಮಠಕ್ಕೆ ತಲುಪುವ ಮೂಲಕ 5 ನೇ ದಿನದ ದುರ್ಗಾದೌಡ ಯಶಸ್ವಿಯಾಗಿದೆ.
ದುರ್ಗಾದೌಡನಲ್ಲಿ ಗಾಂಧಿ ಜಯಂತಿ ಅಂಗವಾಗಿ ಹೆಚ್ಚಿನ ಮಕ್ಕಳು ಮಾಹಾತ್ಮಾ ಗಾಂಧೀಜಿಯವರ ಛದ್ಮವೇಷದಲ್ಲಿ ಕಂಡಿದ್ದು ವಿಶೇಷವಾಗಿತ್ತು. ಅಲ್ಲದೇ ಮಿಕ್ಸರ್, ಗ್ರಾಂಡರ್ ಯಾಂತ್ರಿಕೃತ ಮಶೀನರಿಗಳ ಈ ಕಾಲದಲ್ಲಿ ಮಹಿಳೆಯರು ಸಾಂಪ್ರದಾಯಿಕ ಉಡುಗೆಯಲ್ಲಿ ಮನೆಯಲ್ಲಿ ಒಟ್ಟೂಗೂಡಿ ಅಕ್ಕಿ ಹಿಟ್ಟು ಮಾಡುವುದು, ಭತ್ತ ಕುಟ್ಟುವ ಛದ್ಮವೇಷಗಳಲ್ಲಿ ಮಕ್ಕಳು ಹಳೆ ಸಂಪ್ರದಾಯ(ಶೈಲಿ)ವನ್ನು ನೆನಪಿಸಿಕೊಟ್ಟರು.
ಇನ್ನೂ 70ಕ್ಕೂ ಅಧಿಕ ಮಕ್ಕಳು ವಿವಿಧ ವೇಷಭೂಷಣಗಳು, ಛದ್ಮವೇಷಗಳಲ್ಲಿ ಕಂಗೋಳಿಸಿದರು. ಕಸಬಾಗಲ್ಲಿಯಲ್ಲಿ ಬೆಟ್ಟದಂತೆ ಸ್ತಬ್ದ ಚಿತ್ರ ರಚಿಸಿ ಲಕ್ಷ್ಮಣನ ಪ್ರಾಣ ಉಳಿಸಲು ಶ್ರೀರಾಮಭಕ್ತ ಆಂಜನೇಯ ಸಂಜೀವಿನಿ ಬೆಟ್ಟವನ್ನೇ ಎತ್ತುಕೊಂಡು ಬರುತ್ತಿರುವ ಬಾಣದಿಂದ ಘಾಸಿಕೊಂಡಿರುವ ಲಕ್ಷ್ಮಣ ತನ್ನ ಅಣ್ಣ ಶ್ರೀರಾಮನ ತೊಡೆಯ ಮೇಲೆ ಮಲಗಿರುವ ರೂಪಕ 4 ನೇ ದಿನದ ದುರ್ಗಾದೌಡನ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.


Leave a Comment