
ಹೊನ್ನಾವರ ಪಟ್ಟಣ ವ್ಯಾಪ್ತಿಯ ಸಮಸ್ಯೆಗೆ ಸ್ಪಂದಿಸಿದ ಶಾಸಕ ದಿನಕರ ಶೆಟ್ಟಿ. 24 ಗಂಟೆಯಲ್ಲಿ ಸಮಸ್ಯೆ ಬಗೆಹರಿಸಿರುವುದಕ್ಕೆ ಪಟ್ಟಣ ನಿವಾಸಿಗಳಿಂದ ಅಭಿನಂದನೆ ಮಹಾಪೂರ
ಹೊನ್ನಾವರ ಪಟ್ಟಣ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇಂದು ನಿನ್ನೆಯದಲ್ಲ ಪ್ರತಿ ಬಾರಿ ಪೈಪ್ ಒಡೆಯುವುದು ಟಿಸಿ ಕೆಟ್ಟು ವಾರನುಗಟ್ಟಲೇ ನೀರು ಇಲ್ಲದೇ ಹಿಡಿಶಾಪ ಹಾಕುವುದು ಪಟ್ಟಣ ನಿವಾಸಿಗಳಿಗೆ ಈ ಹಿಂದಿನಿಂದಲೂ ಮಾಮೂಲಿಯಾಗಿ ರೋಸಿ ಹೋಗಿದ್ದರು. ಸೋಮವಾರ ಟಿಸಿ ಕೆಟ್ಟಿದೆ ಇನ್ನು ಒಂದು ವಾರ ಪಟ್ಟಣ ನಿವಾಸಿಗಳಿಗೆ ನೀರಿನ ಪೂರೈಕೆಯಲ್ಲಿ ವ್ಯತಯವಾಗಲಿದೆ ಎಂದು ಮೈಕ್ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿತ್ತು. ಈ ವಿಷಯ ಮಾಧ್ಯಮದವರಿಗೆ ತಿಳಿದ ತಕ್ಷಣ ಕೂಡಲೇ ಪಟ್ಟಣ ಪಂಚಾಯತಿ ಸದಸ್ಯರಿಗೆ ಕರೆ ಮಾಡಿ ವಿಷಯದ ಬಗ್ಗೆ ಚರ್ಚಿಸಿದರೂ ಅಸಾಹಯಕತೆ ತೋರಿದರು. ಕೂಡಲೇ ಶಾಸಕರಿಗೆ ಕರೆ ಮಾಡಿ ಸಮಸ್ಯೆ ಬಗ್ಗೆ ತಿಳಿಸಿ ಟಿಸಿ ಬದಲಾವಣೆ ಮಾಡಿಸಿ ಆದಷ್ಟು ಬೇಗನೇ ಸಮಸ್ಯೆ ಬಗೆಹರಿಸುವಂತೆ ಕೇಳಿಕೊಳ್ಳಲಾಯಿತು ತಕ್ಷಣ ವಿಷಯಕ್ಕೆ ಸ್ಪಂದಿಸಿದ ಶಾಸಕ ದಿನಕರ ಶೆಟ್ಟಿ ಎರಡು ದಿನ ಸಮಯ ಕೊಡಿ ಅದರೊಳಗೆ ನೀರಿನ ಪೂರೈಕೆ ಆಗುವಂತೆ ವ್ಯವಸ್ಥೆ ಮಾಡುತ್ತೇನೆ ಅಲ್ಲಿಯವರೆಗೆ ತುರ್ತಾಗಿ ಟ್ಯಾಂಕರ್ ಮೂಲಕ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ್ದರು.

ಸೋಮವಾರ ರಾತ್ರಿಯಿಂದಲೇ ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿದ ಶಾಸಕರು ಟಿಸಿ ಬದಲಾವಣೆಗೆ ಇರುವ ಅವಕಾಶದ ಬಗ್ಗೆ ಅಧಿಕಾರಿಯೊಂದಿಗೆ ಚರ್ಚಿಸಿ ಮಂಗಳೂರಿನಿಂದ ಬಾಡಿಗೆ ದರದಲ್ಲಿ ಟಿಸಿ ತರಲು ವ್ಯವಸ್ಥೆ ಕಲ್ಪಿಸಿ ಮಂಗಳವಾರ ಬೆಳಿಗ್ಗೆಯಿಂದಲೇ ಕೆ.ಇಬಿ. ಅಧಿಕಾರಿಗಳು ಪಟ್ಟಣ ಪಂಚಾಯತಿ ಸಿಬ್ಬಂದಿಗಳನ್ನು ಕರ್ಕಿನಾಕ ಬಳಿ ಇರುವ ಪಂಪ್ ಹೌಸ ಕಳುಹಿಸಿ ಸಿದ್ದಪಡಿಸಲು ಸೂಚಿಸಿದ್ದಲ್ಲದೇ ಸ್ಥಳಕ್ಕೆ ಭೇಟಿ ನೀಡಿ ಟಿಸಿ ಬದಲಾವಣೆ ಆಗುವವರೆಗೂ ಸ್ಥಳದಲ್ಲೆ ಇದ್ದು ಕಾಮಗಾರಿ ವಿಕ್ಷಿಸಿದರು,
ನಂತರ ಮಾಧ್ಯಮದವರೊಂದಿಗೆ ಮಾತನಾಡಿ ಹೊನ್ನಾವರ ಪಟ್ಟಣದಲ್ಲಿ ನೀರಿನ ಸಮಸ್ಯೆ ಉಂಟಾಗುತ್ತಿದೆ. ಮಾಧ್ಯಮದವರು ದೂರವಾಣಿ ಮೂಲಕ ಸಂಪರ್ಕಿಸಿದಾಗ ವಿಷಯ ತಿಳಿದು ಅಧಿಕಾರಿಗಳೊಂದಿಗೆ ಚರ್ಚಿಸಿದಾಗ ಬಾಡಿಗೆ ಟಿಸಿ ತರಲು ಇರುವ ಅವಕಾಶದ ಬಗ್ಗೆ ತಿಳಿಸಿದಾಗ ಮಂಗಳೂರಿನಿಂದ 200 ಕೆ.ವಿ. ಟಿಸಿ ಬಾಡಿಗೆ ದರದಲ್ಲಿ ತರುವುದಲ್ಲದೇ ಕ್ರೇನ್ ಮೂಲಕ ಬೇಗನೇ ಕೆಲಸ ವಾಗುವಂತೆ ನೋಡಿಕೊಂಡಿದ್ದೇವೆ ಮಂಗಳವಾರ ಸಂಜೆ ಒಳಗೆ ನೀರು ಪಟ್ಟಣ ನಿವಾಸಿಗಳಿಗೆ ಕೊಡುವ ಪ್ರಯತ್ನ ಮಾಡಲಾಗಿದೆ ಅದರೊಳಗೆ ಈಗಾಗಲೇ 4 ಟ್ಯಾಂಕರ್ ಕುಡಿಯುವ ನೀರು ಅಗತ್ಯವಿರುವ ಕಡೆ ಮನೆಮನೆಗೆ ತಲುಪಿಸಲಾಗಿದೆ ಎಂದರು.
ಈ ಸಂದರ್ಭಧಲ್ಲಿ ಪಟ್ಟಣ ಮುಖ್ಯಾಧಿಕಾರಿ ಎನ್.ಎಮ್.ಮೇಸ್ತ, ಪಟ್ಟಣ ಪಂಚಾಯತ ಸದಸ್ಯರಾದ ವಿಜು ಕಾಮತ್, ಮಹೇಶ ಮೇಸ್ತ, ಬಿಜೆಪಿ ಮುಖಂಡರಾದ ಎಂ.ಜಿ.ನಾಯ್ಕ, ಲೋಕೇಶ ಮೇಸ್ತ, ಕುಮಾರ ಮಾಂರ್ಕಾಡೇಯ, ಇಂಜನಿಯರ್ ಸದಾನಂದ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು



Leave a Comment