
ಹೊನ್ನಾವರ ತಾಲೂಕಿನ ಮಂಕಿಯ ಪ್ರಸನ್ನ ಜ್ಯುವೆಲರಿಯ ದಿನೇಶ ಮರ್ತು ಶೇಟ್ ಅವರು 480 ಮಿಲಿಗ್ರಾಮ್ (0.5 ಗ್ರಾಂ ಗಿಂತಲೂ ಕಡಿಮೆ) ಬಂಗಾರದಿಂದ ಮಾಡಿದ ಚೈನ್ ಇಂಡಿಯಾ ಬುಕ್ ಆಪ್ ರೆಕಾರ್ಡ ಸೇರಿದೆ. ಸಚಿನ್ ತೆಂಡೂಲ್ಕರ್ ಮಾಡೆಲ್ ಚೈನ್ ಇದಾಗಿದ್ದು ಅಪರೂಪದ ದಾಖಲೆ ಮಾಡಿದ ದಿನೇಶ್ ಶೇಟ್ ಅವರಿಗೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರು ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಿದ್ದಾರೆ. ಇದೇ ಸಂದರ್ಭದಲ್ಲಿ ಧರ್ಮಸ್ಥಳ ಮ್ಯೂಸಿಯಂನಲ್ಲಿಡಲು ಕಡಿಮೆ ಬಂಗಾರದಿಂದ ಮಾಡಿದ ಕರಿಮಣಿಯೊಂದನ್ನು ಹೆಗ್ಗಡೆಯವರಿಗೆ ಹಸ್ತಾಂತರಿಸಿರುತ್ತಾರೆ. ಈ ಸಂದರ್ಭದಲ್ಲಿ ಹೊಸಾಕುಳಿ ಗ್ರಾಮಪಂಚಾಯತ ಅಧ್ಯಕ್ಷರಾದ ಸುರೇಶ ಶೆಟ್ಟಿ, ಚಂದ್ರಶೇಖರ ಜಿನದತ್ತ ಗೌಡ, ಕೆ.ಆರ್.ಶೆಟ್ಟಿ ಜೊತೆಯಾಗಿದ್ದರು.



Leave a Comment