
ಹಳಿಯಾಳ:- ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್ವೊಂದರ ಇಂಜೀನ್ನಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ಕೆಲವು ಕಾಲ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ಸೋಮವಾರ ಹಳಿಯಾಳ-ಕಲಘಟಗಿ ರಸ್ತೆಯಲ್ಲಿ ನಡೆದಿದೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಹಳಿಯಾಳ ಘಟಕಕ್ಕೆ ಸೇರಿದ ಬಸ್ ನಂ ಕೆಎ-25, ಎಫ್-2290 ಸೋಮವಾರ ಬೆಳಿಗ್ಗೆ ಹಳಿಯಾಳದಿಂದ ಪ್ರಯಾಣಿಕರನ್ನು ಹೊತ್ತು ಕಲಘಟಗಿ ಎಡೆಗೆ ಸಾಗುತ್ತಿದ್ದು ಮಾರ್ಗ ಮಧ್ಯೆ ಇಂಜಿನ್ನಿಂದ ಹೊಗೆ ಬರಲು ಆರಂಭಿಸಿದಾಗ ಕೆಳಗೆ ಇಳಿದು ನೋಡಿದರೇ ಒಳಗೆ ಬೆಂಕಿ ಹತ್ತಿ ಉರಿಯುತ್ತಿತ್ತು. ತಕ್ಷಣ ಪ್ರಯಾಣಿಕರನ್ನು ಕೆಳಗೆ ಇಳಿಸಿ ಇಂಜೀನ್ನಲ್ಲಿ ಹತ್ತಿದ್ದ ಬೆಂಕಿಯನ್ನು ನಂದಿಸಿ ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಅಜಯ ಸನದಿ ಎನ್ನುವ ಪ್ರಯಾಣಿಕ ಬೆಳಿಗ್ಗೆ 10.30 ರ ಸುಮಾರಿಗೆ ಈ ಘಟನೆ ನಡೆದಿದ್ದು ಅತ್ಯಂತ ಹಳೆಯ ಬಸ್ ಇದಾಗಿದ್ದು ರಸ್ತೆ ಸಾರಿಗೆ ಸಂಸ್ಥೆಯವರು ಮಾತ್ರ ಇಂತಹ ಬಸ್ಗಳನ್ನು ಬಳಸಿ ಪ್ರಯಾಣಿಕರ ಜೀವದೊಂದಿಗೆ ಚೆಲ್ಲಾಟವಾಡುತ್ತಾರೆ ಎಂದು ಆರೋಪಿಸಿದರು.




Leave a Comment