
ಕರ್ನಾಟಕ ಏಕೀಕರಣಗೊಂಡ ಸವಿನೆನಪಿನೊಂದಿಗೆ ನಾಡು ನುಡಿಯ ಬಗೆಗಿನ ಅಭಿಮಾನ ಸಾರುವ ಕನ್ನಡ ರಾಜ್ಯೋತ್ಸವವನ್ನು ಸರ್ಕಾರದ ವಿವಿಧ ಇಲಾಖೆಗಳು ಸಂಘ ಸಂಸ್ಥೆಯವರು ಶಾಲಾ ಕಾಲೇಜು ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಹೊನ್ನಾವರ ಪೋಲಿಸ್ ಪೇರೆಡ್ ಮೈದಾನದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.
ತಹಶೀಲ್ದಾರ ವಿವೇಕ ಶೇಣ್ವಿ ಅವರು ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ನಡೆಸಿ ಗೌರವ ಸಲ್ಲಿಸಿದರು.
ನಂತರ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ತಹಶೀಲ್ದಾರ್ ವಿವೇಖ ಶೇಣ್ವಿ ಅವರು ನಮಗೆ ನೆಲೆಕೊಟ್ಟ ಕನ್ನಡ ನಾಡಿನಲ್ಲಿ ನಮ್ಮ ಮಾತೃಭಾಷೆಯಾದ ಕನ್ನಡವೇ ಅಪಾಯಕ್ಕೆ ಸಿಲುಕಿದೆ ಹೊರಗಿನವರ ಆಕ್ರಮಣಕ್ಕಿಂತ ನಮ್ಮವರ ನಿರಭಿಮಾನದಿಂದಲೇ ಕನ್ನಡ ಕಳೆಗುಂದುತ್ತಿದೆ ಆದರೆ ಇದು ಆಗಬಾರದು ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮನಾಗಿರಬೇಕು ಕನ್ನಡವೇ ಮೊದಲ ಆಧ್ಯತೆಯಾಗಿರಬೇಕು ಕುವೆಂಪು, ಶಿವರಾಮ ಕಾರಂತ, ದ.ರಾ.ಬೇಂದ್ರೆ, ಮಾಸ್ತಿ, ವಿ.ಕೃ.ಗೋಕಾಕ್, ಅನಂತಮೂರ್ತಿ, ಕಾರ್ನಾಡ್, ಕಂಬಾರ್ ಸೇರಿದಂತೆ ಎಂಟು ಜ್ಞಾನಪೀಠ ಪ್ರಶಸ್ತಿ ಕನ್ನಡಕ್ಕೊಲಿದಿದೆ ಮೇಲಾಗಿ ಶಾಶ್ತಿçÃಯ ಭಾಷೆ ಸ್ಥಾನಮಾನ ದೊರಕಿದೆ ಇನ್ನೂ ಅದೆಷ್ಟೋ ಮಹಾನ್ ಸಂಗತಿಗಳನ್ನು ಕನ್ನಡ ಭಾಷೆ ಸಂಸ್ಕೃತಿ ಒಳಗೊಂಡಿದೆ ನಾವು ನಮ್ಮ ಭಾಷೆಯನ್ನು ಕೀಳಾಗಿ ಕಾಣುವುದನ್ನು ಬಿಟ್ಟು ಹೆಮ್ಮೆಯ ಭಾವ ತಳೆಯುವ ಮೂಲಕ ನಾಡಿನ ಏಕೀಕರಣಕ್ಕೆ ದುಡಿದ ಹಿರಿಯ ಚೇತನಗಳಿಗೆ ಗೌರವ ಸಲ್ಲಿಸಬೇಕು ಎಂದು ಕರೆನೀಡಿ ರಾಜ್ಯೋತ್ಸವದ ಶುಭಾಷಯ ತಿಳಿಸಿದರು.
ಸೇಂಟ್ ಥಾಮಸ್ ಶಾಲೆಯ ವಿದ್ಯಾರ್ಥಿನಿಯರು ರಾಷ್ಟçಗೀತೆಯನ್ನು ಮಾರ್ಥೋಮಾ ವಿದ್ಯಾರ್ಥಿನಿಯರು ನಾಡಗೀತೆಯನ್ನು ನ್ಯೂ ಇಂಗ್ಲಿಷ್ ಶಾಲೆಯ ವಿದ್ಯಾರ್ಥಿನಿಯರು ರೈತಗೀತೆಯನ್ನು ಹಾಡಿದರು. ವೇದಿಕೆಯಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ಅಶೋಕ ಭಜಂತ್ರಿ, ತಾಲೂಕಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ, ಪಟ್ಟಣಪಂಚಾಯತ ಮುಖ್ಯಾಧಿಕಾರಿ ನೀಲಕಂಠ ಮೇಸ್ತ, ವೃತ್ತ ನಿರೀಕ್ಷಕರಾದ ವಸಂತ ಆಚಾರಿ, ಕನ್ನಡ ಅಭಿಮಾನಿ ಸಂಘದ ಅಧ್ಯಕ್ಷರಾದ ಸತ್ಯಾ ಜಾವಗಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿತು.


Leave a Comment