
ಹಳಿಯಾಳ:- ಪಟ್ಟಣದಲ್ಲಿ ಪರವಾನಿಗೆ ಹೊಂದಿರುವ ಮಧ್ಯದಂಗಡಿಗಳನ್ನು ಹೊರತು ಪಡಿಸಿ ತಾಲೂಕಿನ ಗ್ರಾಮಾಂತರ ಭಾಗದಲ್ಲಿ ಸಾರ್ವಜನೀಕ ಸ್ಥಳಗಳಲ್ಲಿಯೂ ಎಗ್ಗಿಲ್ಲದೇ ಅಕ್ರಮ ಸರಾಯಿ ಮಾರಾಟ ಮೀತಿ ಮೀರಿ ನಡೆದಿದೆ ಎಂಬ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬರುತ್ತಿವೆ.
ಪಟ್ಟಣದಲ್ಲಿ ಸತ್ಯನಾರಾಯಣ, ಶ್ರೀದೇವಿ, ಸುಚಿತ್ರಾ, ವೈಶಾಲಿ-ರಾಘವೇಂದ್ರ, ಶ್ರೀ ರೇಣುಕಾ, ಶ್ರೀ ಬಾಲಾಜಿ, ಮರ್ಯ, ಫ್ರೇಂಡ್ಸ್, ಬಾಬುರಾವ್, ಲಕ್ಷö್ಮಣ ಪ್ಯಾಲೇಸ್ ಬಾರ್ ಮತ್ತು ರೆಸ್ಟೋರೆಂಟಗಳು, ರಾಜಶೇಖರ ರೇಸಾರ್ಟ ಹಾಗೂ ಮುರ್ಕವಾಡ ಗ್ರಾಮದಲ್ಲೊಂದು ದುರ್ಗಾ ಬಾರ್ ಎಂಬ ಪರವಾನಿಗೆ ಹೊಂದಿರುವ ೧೨ ಮಧ್ಯದಂಗಡಿಗಳು ಇವೆ.
ಆದರೇ ಇವುಗಳನ್ನು ಹೊರತು ಪಡಿಸಿ ಗ್ರಾಮಾಂತರ ಭಾಗದಲ್ಲಿ ಕೆಲವು ಕಡೆಗಳಲ್ಲಿ ಕಿರಾಣಿ ಅಂಗಡಿ, ಸಣ್ಣ ಬಿಡಾ ಅಂಗಡಿಗಳು, ಚಹಾ ಅಂಗಡಿಗಳಲ್ಲಿ ಹಾಗೂ ಹಲವು ಮನೆಗಳಲ್ಲಿ ಕೂಡ ಅಕ್ರಮ ಸರಾಯಿ ಮಾರಾಟವು ನಡೆಯುತ್ತಿದೆ ಅಲ್ಲದೇ ಎಮ್.ಆರ್.ಪಿ ದರಕ್ಕಿಂತ ಎರಡೂ ಪಟ್ಟು(ಡಬಲ್) ಹೆಚ್ಚಿನ ಬೆಲೆಯಲ್ಲಿ ಮದ್ಯವನ್ನು ಮರಾಟ ಮಾಡುತ್ತಿರುವುದು ಹೆಚ್ಚಿನ ಬೆಲೆಗೆ ಮಧ್ಯ ಕೊಳ್ಳುತ್ತಿರುವ ಕೆಲವರಿಂದ ಈಗ ಈ ಎಲ್ಲ ವ್ಯವಹಾರಗಳು ಬಹಿರಂಗಗೊಳ್ಳುತ್ತಿದ್ದು ಕ್ರಮ ಕೈಗೊಳ್ಳಬೇಕಾದ ಅಬಕಾರಿ ಇಲಾಖೆಯವರು ಮಾತ್ರ ಕಣ್ಣು ಮುಚ್ಚಿ ಕುಳಿತಿರುವುದು ವ್ಯಾಪಕ ಟೀಕೆಗಳಿಗೆ ಗುರಿಯಾಗಿದೆ.
ತಾಲೂಕಿನ ಬೊಮ್ಮನಳ್ಳಿ ಗ್ರಾಮದಲ್ಲಿ ಬಸ್ ನಿಲ್ದಾಣದ ಸಮೀಪದಲ್ಲಿ, ಶಾಲೆಯ ಸನಿಹದ ಹಲವಾರು ಅಂಗಡಿಗಳಲ್ಲಿ ಪ್ರತಿನಿತ್ಯ ಅಕ್ರಮ ಸರಾಯಿ ಮಾರಾಟ ನಡೆಸಲಾಗುತ್ತಿದೆ ಎಂಬ ಬಗ್ಗೆ ಜನಪ್ರತಿನಿಧಿಗಳು ಹಾಗೂ ಇಲಾಖೆಗೂ ಮೌಖಿಕವಾಗಿ ದೂರು ನೀಡಿದರು ಕೂಡ ಈವರೆಗೆ ಯಾವುದೇ ಕ್ರಮ ಜರುಗಿಸದೆ ಇರುವುದು ಸಂಶಯಕ್ಕೆ ಎಡೆಮಾಡಿದೆ.

ತಾಲೂಕಿನ ಗಡಿಗ್ರಾಮವಾದ ಭಾಗವತಿ ಗ್ರಾಮದಲ್ಲಿಯೂ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೇ ನಡೆದಿದೆ ಎಂಬ ಹೆಸರು ಹೇಳಲು ಇಚ್ಚಿಸದ ಗ್ರಾಮದ ಕೆಲವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಇನ್ನೂ ಬೊಮ್ಮನಳ್ಳಿ ಗ್ರಾಮದಲ್ಲಿ ಅಕ್ರಮ ಸರಾಯಿ ಮರಾಟದ ಬಗ್ಗೆ ಕಳೆದ ೨ ವರ್ಷಗಳಿಂದ ಗ್ರಾಮಸ್ಥರು ಶಾಸಕ ಆರ್.ವಿ.ದೇಶಪಾಂಡೆ, ಮಾಜಿ ಶಾಸಕರಿಗೆ, ವಿಧಾನ ಪರಿಷತ್ ಸದಸ್ಯರ ಹಾಗೂ ಸಂಬAಧಪಟ್ಟ ಇಲಾಖೆಯವರ ಗಮನಕ್ಕೆ ತಂದರೂ ಕೂಡ ಈವರೆಗೆ ಅಕ್ರಮ ಚಟುವಟಿಕೆ ನಡೆಸುವವರ ಮೇಲೆ ಕ್ರಮ ಜರುಗಿಸದೆ ಇರುವುದು ದುರ್ದೈವವಾಗಿದೆ.
ಇನ್ನೂ ಈ ಕುರಿತು “ಕಡಲವಾಣಿ” ಪ್ರತಿನಿಧಿಯೊಂದಿಗೆ ಮಾತನಾಡಿದ ಅಬಕಾರಿ ಇಲಾಖೆ ದಾಂಡೇಲಿ ವಿಭಾಗದ ಪಿಎಸ್ಐ ವೈದ್ಯ ಅವರು ಅಕ್ರಮ ಸರಾಯಿ ಮಾರಾಟ ಮಾಡುವವರ ಕುರಿತು ಮಾಹಿತಿ ನೀಡಿದರೇ ಕ್ರಮ ಜರುಗಿಸಲಾಗುವುದು. ಬೊಮ್ಮನಳ್ಳಿ ಹಾಗೂ ಭಾಗವತಿ ಬಗ್ಗೆ ಪರಿಶೀಲಿಸಲಾಗುವುದು ಎಂದರು.
ಏನೇ ಆಗಲಿ ಸಂಬAಧಪಟ್ಟ ಇಲಾಖೆಯವರು ಗ್ರಾಮಗಳಲ್ಲಿ ನಡೆಯುತ್ತಿದೆ ಎನ್ನಲಾಗುತ್ತಿರುವ ಈ ಅಕ್ರಮ ಸರಾಯಿ ಮರಾಟಾದ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ಕುರಿತು ಕಠಿಣ ಕ್ರಮ ಜರುಗಿಸಬೇಕೆಂಬುದು ಜನರ ಆಶಯವಾಗಿದೆ.

Leave a Comment