
ಹೊನ್ನಾವರ ಪ್ರಭಾತನಗರದ ಉಮ್ಮೆ ಹಬೀಬಾ ಎನ್ನುವ ಮಹಿಳೆಯು ಮಾರುಕಟ್ಟೆಯಿಂದ ಮನೆಗೆ ತೆರಳುವ ಮಾರ್ಗ ಮಧ್ಯೆ ಪರ್ಸ ಗುರುವಾರ ಕಳೆದುಕೊಂಡಿದ್ದರು. ಶುಕ್ರವಾರ ತನ್ನ ಆಟೋ ಮೂಲಕ ಸಾಗುವಾಗ ದೊರೆತ ಪರ್ಸ ಗಮನಿಸಿದ ಆಟೋ ಚಾಲಕ ರಾಜೇಶ ವೆಂಕಟೇಶ ಮೇಸ್ತ ಪರ್ಸನ್ನು ಠಾಣೆಗೆ ತಂದಾಗ ಮಾಲೀಕರನ್ನು ಪತ್ತೆ ಹಚ್ಚಿ ಪೋಲಿಸರ ಸಮ್ಮುಖದಲ್ಲಿ ಹಸ್ತಾಂತರಿಸಿದ್ದಾರೆ. ಪರ್ಸನಲ್ಲಿ 18ಸಾವಿರ ನಗದು ಹಾಗೂ ಅತಿ ಅಮೂಲ್ಯ ಕಾಗದಪತ್ರಗಳಿದ್ದವು. ಆಟೋ ಚಾಲಕನ ಪ್ರಾಮಾಣಿಕತೆಗೆ ಹೊನ್ನಾವರ ಸಿಪಿಐ ವಸಂತ ಆಚಾರಿ, ಕೈ ಪಿಎಸೈ ಸಾವಿತ್ರಿ ನಾಯಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Leave a Comment