
ರಾಮ ಮಂದಿರ ಜನ್ಮಭೂಮಿ ಕುರಿತಂತೆ ಇದ್ದ ವಿವಾದಕ್ಕೆ ದೇಶದ ಪರಮೋಚ್ಚ ನ್ಯಾಯಾಲಯ ತೆರೆ ಎಳೆದಿದ್ದು ಈ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ದೇಶದ ಐಕ್ಯತೆ ಮತ್ತು ಸೌಹಾರ್ದತೆಯನ್ನು ಮತ್ತಷ್ಟು ಗಟ್ಟಿಗೊಳಿಸಿದಂತಾಗಿದೆ. ಸಂವಿಧಾನದ ಆಶಯದಂತೆ ಸುಪ್ರೀಂಕೋರ್ಟ್ ತೀರ್ಪು ಹೊರಬಂದಿರುವುದು ಸಂವಿಧಾನದ ಮೇಲಿನ ಗೌರವ ಹೆಚ್ಚು ಮಾಡಿದಂತಾಗಿದೆ. ಈ ತೀರ್ಪು ವಿವಿಧತೆಯಲ್ಲಿ ಏಕತೆಯನ್ನು ಸಾರುವ ಮೂಲಕ ದೇಶದ ಸಾರ್ವಭೌಮತ್ವವನ್ನು ಎತ್ತಿ ಹಿಡಿದಿದೆ.
ಸುಮಾರು 40 ದಿನಗಳ ಕಾಲ ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ನ ಮುಖ್ಯನ್ಯಾಯಮೂರ್ತಿ ಅವರನ್ನೊಳಗೊಂಡ ಸಾಂವಿಧಾನಿಕ ಪೀಠವು, ವಿವಾದಿತ ಜಮೀನು ತಮಗೆ ಸೇರಿದ್ದು ಎಂದು ರಾಮಲಲ್ಲಾ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಮಾನ್ಯ ಮಾಡಿದೆ. ಇದೆ ಜಾಗೆಯಲ್ಲಿ ರಾಮಮಂದಿರ ನಿರ್ಮಾಣ ಕುರಿತಂತೆ ಸಮಿತಿ ರಚನೆ ಮಾಡಿ, ಯೋಜನೆ ರೂಪಿಸಿಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿರುವುದು ಹಾಗೂ ಇದೆ ವೇಳೆ ಸುನ್ನಿ ಮಂಡಳಿಗೆ ಮಸೀದಿ ಕಟ್ಟಲು ಅನುವು ಆಗುವಂತೆ ಐದು ಎಕರೆ ಜಮೀನು ನೀಡಲು ಆದೇಶಿಸಿರುವುದು ಸ್ವಾಗತಾರ್ಹ.
ಈ ತೀರ್ಪಿಗೆ ಭದ್ದರಾಗುವುದು ನಮ್ಮೆಲ್ಲರ ಕರ್ತವ್ಯ ಸಾಮಾಜದ ಒಗ್ಗಟ್ಟು ಸಹಮತ ಭ್ರಾತೃತ್ವದ ಭಾವನೆಯನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಂಗ ನೀಡಿದ ಈ ತೀರ್ಪನ್ನು ಪರಿಪಾಲಿಸುವುದು ನಮ್ಮೆಲ್ಲರ ಜವಾಬ್ದಾರಿ.


Leave a Comment