
ಹಳಿಯಾಳ :- ಒಂದೂವರೆ ವರ್ಷಗಳ ಕಾಲ ಹಳಿಯಾಳದಲ್ಲಿ ಉತ್ತಮ ಸೇವೆ ಸಲ್ಲಿಸಿ ಕುಮಟಾ ಠಾಣೆಗೆ ವರ್ಗಾವಣೆ ಆಗಿರುವ ಪಿಎಸ್ಐ ಆನಂದಮೂರ್ತಿ ಸಿ ಅವರನ್ನು ಹಳಿಯಾಳ ಠಾಣೆಯಲ್ಲಿ ಆತ್ಮೀಯವಾಗಿ ಬಿಳ್ಕೋಡಲಾಯಿತು.
ಹಳಿಯಾಳ ಪೋಲಿಸ್ ಇಲಾಖೆ, ತಾಲೂಕಾಡಳಿತ, ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆ, ಜೀಜಾಮಾತಾ ಮಹಿಳಾ ಸಂಘಟನೆ, ಕ್ಷತ್ರೀಯ ಮರಾಠಾ ಪರಿಷತ್, ಹಳಿಯಾಳ ವ್ಯಾಪಾರಸ್ಥರ ಒಕ್ಕೂಟ, ದಲಿತ ಸಂಘರ್ಷ ಸಮೀತಿ, ಬಿಜೆಪಿ ಪಕ್ಷದ ಪುರಸಭೆ ಸದಸ್ಯರು, ಕಾಂಗ್ರೇಸ್ ಸದಸ್ಯರು, ಹೊಟೆಲ್ ಮಾಲಿಕರ ಸಂಘ ಇನ್ನಿತರ ಸಂಘ-ಸಂಸ್ಥೆಯವರು ಹಲವರು ಪಟ್ಟಣದ ಪೋಲಿಸ್ ಠಾಣೆಯಲ್ಲಿ ನಡೆದ ಬಿಳ್ಕೋಡುವ ಸಮಾರಂಭದಲ್ಲಿ ಪಾಲ್ಗೊಂಡು ಆನಂದಮೂರ್ತೀಯವರನ್ನು ಸನ್ಮಾನಿಸಿ, ಗೌರವಿಸಿದರು ಅಲ್ಲದೇ ಅವರ ಸೇವೆಯನ್ನು ಕೊಂಡಾಡಿದರು.
ಇದೇ ಕಾರ್ಯಕ್ರಮದಲ್ಲಿ ಹಳಿಯಾಳ ಪಿಎಸ್ಐ ಆಗಿ ಅಧಿಕಾರ ಸ್ವೀಕರಿಸಿದ ಶಿರಸಿ ಠಾಣೆಯಿಂದ ವರ್ಗವಾಗಿ ಬಂದಿರುವ ಯಲ್ಲಾಲಿಂಗ ಕುನ್ನೂರ ಅವರನ್ನು ಸನ್ಮಾನಿಸಿ ಸ್ವಾಗತ ಕೊರಲಾಯಿತು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ವಿದ್ಯಾಧರ ಗುಳಗುಳಿ, ಡಿವೈಎಸ್ಪಿ ಮೋಹನಪ್ರಸಾದ, ಸಿಪಿಐಗಳಾದ ಲೋಕಾಪುರ ಬಿಎಸ್, ಅನಿಸ ಮುಜಾವರ, ಪಿಎಸ್ಐಗಳಾದ ಮಾದೇವಿ ನಾಯ್ಕೋಡಿ, ಮಂಜುಳಾ ರಾವೊಜಿ, ಸಿಬ್ಬಂದಿಗಳು, ಇತರರು ಇದ್ದರು.



Leave a Comment