
ಬಳ್ಕೂರು ಯುವಕರಿಂದ ರಕ್ತದಾನ ಶಿಬಿರ ಯಶ್ವಸಿ. ಹಲವಾರು ಯುವಕರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ಇತರ ಗ್ರಾಮದ ಯುವಕರಿಗೆ ಪ್ರೇರೆಪಣಿ ನೀಡುವ ಕಾರ್ಯಕ್ರಮ ಬಳ್ಕೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ಕ್ರಾಂತಿರಂಗ ಬಳ್ಕೂರ ಘಟಕ ಗ್ರಾಮ ಪಂಚಾಯತ ಬಳ್ಕೂರ, ಪ್ರಾಥಮಿಕ ಆರೋಗ್ಯ ಕೇಂದ್ರ, ಜಿಲ್ಲಾ ರಕ್ತನಿಧಿ ಕೇಂದ ಮತ್ತ್ರು ಜಿಲ್ಲಾ ಆಸ್ಪತ್ರೆ ಅಜ್ಜರಕಾಡು ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಬಳ್ಕೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು. 29 ಯುವಕರು ಸ್ವಯಂ ಪ್ರೇರಿತವಾಗಿ ಬಂದು ರಕ್ತದಾನ ಮಾಡಿರುವುದು ವಿಶೇಷ ಕೊಡುಗೆಯಾಗಿತ್ತು.
ಈ ಸಂದರ್ಭದಲ್ಲಿ ನಡೆದ ಸಾಂಕೇತಿಕ ಸಭೆಯ ಉದ್ಘಾಟನೆಯನ್ನು ವೇದಿಕೆಯಲ್ಲಿದ್ದ ಗಣ್ಯರು ದೀಪ ಬೆಳಗಿಸಿ ಮೂಲಕ ನೇರವೇರಿಸಿದರು.
ಜಿಲ್ಲಾ ರಕ್ತನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆ ಅಜ್ಜರಕಾಡು ಉಡಪಿಯ ಡಾ. ವೀಣಾ ಮಾತನಾಡಿ, ರಕ್ತವನ್ನು ಇಲ್ಲಿಯವರೆಗೆ ಯಾರಿಂದಲೂ ಕೃತಕವಾಗಿ ಮಾಡಲೂ ಸಾದ್ಯವಾಗಿಲ್ಲಾ, ರಕ್ತವನ್ನು ಒಂದು ವ್ಯಕ್ತಿಯಿಂದ ಪಡೆಯಬೇಕಗಿದೆ, ರಕ್ತವನ್ನು ನಾವು ರಕ್ತದಿಂದಲೆ ಪೂರೈಸಬೇಕಿದೆ. ನಿಮ್ಮಂತ ಸ್ವಯಂ ಪೇರಿತವಾಗಿ ರಕ್ತ ನಿಡುವ ಯುವಕರಿಂದ ಮಾತ್ರ ಬೇರೆಯವರ ಜೀವ ಉಳಿಸಲೂ ಸಾಧ್ಯ. ಒಂದು ಯುನಿಟ್ ರಕ್ತದಿಂದ ಮೊದಲು ಒಂದು ವ್ಯಕ್ತಿಯ ಜೀವ ಉಳಿಸುತ್ತಿದ್ದರು ಆದರೆ ಇಗ ಹಾಗಿಲ್ಲ. ಒಂದು ಯುನಿಟ್ ರಕ್ತದಿಂದ ನಾಲ್ಕೂ ಜೀವವನ್ನು ಉಳಿಸಲಾಗುತ್ತದೆ. ನೀವು ನೀಡುವ ಒಂದು ಯುನಿಟ್ ರಕ್ತವನ್ನು 4ಭಾಗವಾಗಿ ವಿಭಾಗಿಸಿ ನಾಲ್ಕೂ ಜೀವ ಉಳಿಸಬಹುದಾಗಿದೆ.
ಕರ್ನಾಟಕ ಕ್ರಾಂತಿರಂಗದ ತಾಲೂಕಾದ್ಯಕ್ಷ ಡಾ. ಎಸ್.ಡಿ.ಹೆಗಡೆ ಮಾತನಾಡಿ ದಾನಗಳಲ್ಲಿ ಶ್ರೇಷ್ಠವಾದ ಧಾನ ರಕ್ತದಾನ. ಅನ್ನವಿಲ್ಲದೆ ವ್ಯಕ್ತಿಗಳು ಕೆಲವು ದಿನ ಬದುಕಬಹುದು ಆದರೆ ರಕ್ತವಿಲ್ಲದೆ ಬದುಕಲು ಸಾಧ್ಯವಿಲ್ಲ. ನಮ್ಮ ಈ ಘಟಕದ ಸದಸ್ಯರು ರಕ್ತದಾನ ಕಾರ್ಯಕ್ರಮ ಮಾಡಬೇಕು ಎಂದು ಹೇಳಿದಾಗ ನಾನು ಪೋತ್ಸಾಹ ನೀಡಿದೆ. ಗ್ರಾಮಸ್ಥರ ಜೊತೆಗೆ ಸೇರಿ ಇಂದು ರಕ್ತದಾನ ಮಾಡುತ್ತಿರುವುದು ತುಂಬಾ ಒಳ್ಳೆಯ ಕಾರ್ಯ ಇಂತಹ ಸಮಾಜಮುಖಿ ಕಾರ್ಯ ಮುಂದುವರೆಸುವಂತೆ ತಿಲಿಸಿದರು.
ಬಳ್ಕೂರು ಗ್ರಾಮ ಪಂಚಾಯತ ಅಧ್ಯಕ್ಷ ಕೇಶವ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಕ್ರಾಂತಿರಂಗದ ಜಿಲ್ಲಾಧ್ಯಕ್ಷ ಮಂಗಲದಾಸ ನಾಯ್ಕ, ಬಳ್ಕೂರ ಗ್ರಾಮ ಪಂಚಾಯತ ಸದಸ್ಯ ಗಣಪತಿ ನಾಯ್ಕ ಬಿಟಿ, ಕರ್ನಾಟಕ ಕ್ರಾಂತಿರಂಗದ ಬಳ್ಕೂರ ಘಟಕದ ಅಧ್ಯಕ್ಷ ದೇವೆಂದ್ರ ನಾಯ್ಕ, ಬಳ್ಕೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಗೌತಮಿ, ಹಿರಿಯರಾದ ವಿಠ್ಠಲ ನಾಯ್ಕ, ಕರ್ನಾಟಕ ಕ್ರಾಂತಿರಂಗ ಜಿಲ್ಲಾ ಯುವ ಅಧ್ಯಕ್ಷ ಸಚಿನ್ ನಾಯ್ಕ, ಕ್ರಾಂತಿರಂಗದ ಸದಸ್ಯರು ಉಪಸ್ಥಿತರಿದ್ದರು.

Leave a Comment