
ಹಳಿಯಾಳ:- ಕಾರವಾರ ಜಿಲ್ಲಾ ಪಂಚಾಯತ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಕಾರವಾರ ಹಾಗೂ ಗ್ರಾಮೋದಯ ಬೈಲಹೊಂಗಲ ಸಂಸ್ಥೆಯ ಆಶ್ರಯದಲ್ಲಿ ತೆರಗಾಂವ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಕುಡಿಯುವ ನೀರು ಮತ್ತು ನೈರ್ಮಲ್ಯ ಹಾಗೂ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಕುರಿತು ಶಾಲಾ ಮಕ್ಕಳಿಗೆ ಪ್ರಭಂದ, ಚಿತ್ರಕಲೆ ಹಾಗೂ ಭಾಷಣ ಸ್ಪರ್ಧೆ ನಡೆಯಿತು.
ಇಂದಿನ ಮಕ್ಕಳೇ ನಾಡಿನ ಹಿರಿಯರು ಎನ್ನುವ ಧ್ಯೇಯ ವಾಕ್ಯದೊಂದಿಗೆ ಶುದ್ದ ಕುಡಿಯುವ ನೀರು, ನೀರಿನ ಬಳಕೆ, ಜಲಮೂಲಗಳ ರಕ್ಷಣೆ, ಪರಿಸರ ರಕ್ಷಣೆ, ಘನ ತ್ಯಾಜ್ಯ ವಿಲೆವಾರಿ ಕಸವನ್ನು ಮೂ¯ದಲ್ಲಿ ಬೆರ್ಪಡಿಸುವುದರ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು.
ಗ್ರಾಮೋದಯ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ಸರಿತಾ ಬಡಿಗೆರ ಮತ್ತು ರುಕ್ಮೀಣಿ ಹರಿಜನ ಮಾತನಾಡಿ ನೀರಿನ ಸಂರಕ್ಷಣೆ, ನೀರಿನ ಬಳಕೆ, ಜಲಮೂಲಗಳ ರಕ್ಷಣೆ, ಪರಿಸರ ರಕ್ಷಣೆ, ಘನ ತ್ಯಾಜ್ಯ ವಿಲೆವಾರಿ ಕಸವನ್ನು ಮೂಲದಲ್ಲಿ ಬೆರ್ಪಡಿಸುವುದು ಹಾಗೂ ಪ್ಲಾಷ್ಟಿಕನಿಂದ ಉಂಟಾಗಿರುವ ಹಾನಿ ಕುರಿತು ವಿದ್ಯಾರ್ಥಿಗಳಿಗೆ ಸಮಗ್ರವಾದ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಶಾಲೆಯ ಮುಖ್ಯಾಧ್ಯಾಪಕರು, ಸಹ ಶಿಕ್ಷಕರು ಹಾಗೂ ಗ್ರಾಮೋದಯ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ನಂತರ ಸ್ಫರ್ಧಾ ಕಾರ್ಯಕ್ರಮಗಳಿಗೆ ಆಶಕ್ತಿ ಹೊಂದಿದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಸ್ಪರ್ಧೆಗಳನ್ನು ಎರ್ಪಡಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಕುಡಿಯುವ ನೀರು ಮತ್ತು ನೈರ್ಮಲ್ಯ ಹಾಗೂ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ವಿಷಯದ ಕುರಿತು ಪ್ರಭಂದ, ಚಿತ್ರಕಲೆ ಹಾಗೂ ಭಾಷಣ ಸ್ಫರ್ದೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
Leave a Comment