
ಹಳಿಯಾಳ: ಕಾರವಾರ ಜಿಲ್ಲಾ ಪಂಚಾಯತ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಕಾರವಾರ ಹಾಗೂ ಗ್ರಾಮೋದಯ ಬೈಲಹೊಂಗಲ ಸಂಸ್ಥೆಯ ಆಶ್ರಯದಲ್ಲಿ ರಾಷ್ಟ್ರೀಯ ಕುಡಿಯುವ ನೀರು ಮತ್ತು ನೈರ್ಮಲ್ಯ ಹಾಗೂ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಕುರಿತು ಶಾಲಾ ಮಕ್ಕಳ ಜಾಥಾ ಕಾರ್ಯಕ್ರಮ ಕೆಸರೊಳ್ಳಿ ಗ್ರಾಮದಲ್ಲಿ ನಡೆಯಿತು. ಗ್ರಾಮೋದಯ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ಸರೀತಾ ಬಡಿಗೇರ, ರುಕ್ಮಿಣಿ ಹರಿಜನ ಕೆಸರೊಳ್ಳಿ ಶಾಲಾ ಶೀಕ್ಷಕರು, ಕೆಸರೊಳ್ಳಿ ಗ್ರಾಪಂ ಪಿಡಿಓ ಇತರರು ಇದ್ದರು.
Leave a Comment