
ಜೋಯಿಡಾ –
ಜೋಯಿಡಾ ತಾಲೂಕಿನ ಪ್ರಸಿದ್ದ ಮತ್ತು ಉತ್ತರ ಕರ್ನಾಟಕದ ಪ್ರಸಿದ್ದ ಜಾತ್ರೆಯಾದ ಉಳವಿ ಜಾತ್ರಾ ಪೂರ್ವಭಾವಿ ಸಭೆಯು ಇಂದು ಗುರುವಾರ ಮದ್ಯಾಹ್ನ ಉತ್ತರಕನ್ನಡ ಜಿಲ್ಲಾ ಸಹಾಯಕ ಕಮೀಷನರ(ಎ.ಸಿ.) ಪ್ರಿಯಾಂಕ ಎಂ .ಅದ್ಯಕ್ಷತೆಯಲ್ಲಿ ಉಳವಿಯ ಚನ್ನಬಸವೇಶ್ವರ ಟ್ರಸ್ಟ ಕಮಿಟಿಯ ಸಭಾ ಭವನದಲ್ಲಿ ನಡೆಯಿತು.
ಫೆಬ್ರವರಿ ೧ರಿಂದ ಆರಂಭವಾಗಲಿರುವ ಜಾತ್ರೆ ,ಫೆ ೧೦ ಕ್ಕೆ ರಥೋತ್ಸವ ನಡೆಯಲಿದ್ದು ಇದಕ್ಕೆ ಬೇಕಾದ ಸಂಪೂರ್ಣ ಸಿದ್ದತೆಗಾಗಿ ಉಳವಿ ಜಾತ್ರಗೆ ಸಂಭಂಧ ಪಡುವ ತಾಲೂಕಿನ ಎಲ್ಲಾ ಸರ್ಕಾರಿ ಇಲಾಕೆ ಅಧಿಕಾರಿಗಳನ್ನು ಕರೆಯಲಾಗಿತ್ತು.
ಸಭೆಯ ಆರಂಭದಲ್ಲಿ ಜಾತ್ರೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಕುಡಿಯುವ ನೀರು ಸರಬರಾಜು ಇಲಾಕೆಗೆ ತಿಳಿಸಲಾಯಿತು. ಹೆಚ್ಚುವರಿ ನೀರಿಗಾಗಿ ಕೊಡತ್ತಳ್ಳಿ ಹಳ್ಳದಿಂದ ಹೊಸ ಪೈಪ್ ಲೈನ ಮಾಡಿ ಕೊಡಿ ಎಂದು ಜಿ.ಪಂ ಸದಸ್ಯ ರಮೇಶ ನಾಯ್ಕ ಅವರ ಹತ್ತಿರ ಸಾರ್ವಜನಿಕರು ಮನವಿ ಮಾಡಿದರು.
ಜಾತ್ರೆಯಲ್ಲಿ ಸಂಪೂರ್ಣ ಮದ್ಯಪಾನ ನಿಷೇದ ಮಾಡಿ ಮದ್ಯ ಮಾರಾಟ ಕಂಡು ಬಂದಲ್ಲಿ ಕೂಡಲೇ ಕ್ರಮ ಕೈಗೊಳ್ಳುವಂತೆ ಅಬಕಾರಿ ಮತ್ತು ಪೋಲಿಸ್ ಇಲಾಕೆಯ ಅಧಿಕಾರಿಗಳಿಗೆ ತಿಳಿಸಲಾಯಿತು. ಅಲ್ಲದೇ ಹೆಚ್ಚಿನ ಪೋಲಿಸ್ ಸಿಬ್ಬಂದಿಗಳು ರಥೋತ್ಸವದ ಸಮಯದಲ್ಲಿ ರಥಕ್ಕೆ ಕಾವಲು ನೀಡಬೇಕು ಹಾಗೂ ಲೇಡಿ ಪೋಲಿಸ್ ಅಧಿಕಾರಿಗಳು ಅವಶ್ಯವಾಗಿ ಇರಬೇಕು ಎಂದು ಸಭೆಯಲ್ಲಿ ತಿಳಿಸಲಾಯಿತು.
ತಾಲೂಕಿನ ಪೋಟೋಲಿ – ಉಳವಿ ,ಕುಂಬಾರವಾಡಾ ರಸ್ತೆ ತೀರಾ ಹಾಳಾಗಿದ್ದು ಕೂಡಲೇ ರಿಪೇರಿ ಕಾಮಗಾರಿ ಕೈಗೊಳ್ಳಬೇಕು ಅಲ್ಲದೇ ಶಿವಪುರ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಕೂಡಲೇ ಅಗತ್ಯ ವ್ಯವಸ್ಥೆ ಮಾಡಬೇಕು ಎಂದು ಸಭೆಯಲ್ಲಿ ಲೋಕೋಪಯೋಗಿ ಇಲಾಕೆ ಅಧಿಕಾರಿಗಳಿಗೆ ತಿಳಿಸಲಾಯಿತು.

ಆರೋಗ್ಯ ಇಲಾಖೆಯವರು ಜಾತ್ರೆಯ ಮೊದಲಿನ ದಿನದಿಂದಲೇ ಇಲ್ಲಿ ಇರಬೇಕು, ಹಾಗೂ ಬೇರೆ ತಾಲೂಕಿನ ವೈದ್ಯರ ಅವಶ್ಯಕತೆ ಇದ್ದು ಕೆಲ ವೈದ್ಯರನ್ನು ತರಸಿಕೊಳ್ಳಿ ಎಂದು ಸಭೆಯಲ್ಲಿ ತಿಳಿಸಲಾಯಿತು.
ಅರಣ್ಯ ಇಲಾಕೆ ವತಿಯಿಂದ ಭಕ್ತಾಧಿಗಳಿಗೆ ದಾರಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಹಾಗೂ ಜಾತ್ರೆಯಲ್ಲಿ ಬೆತ್ತ,ಹಾಗೂ ಬಿದಿರು ತರಿಸಿಕೊಡುವಂತೆ ಸೂಚಿಸಲಾಯಿತು.
ಹೆಸ್ಕಾಂ ಇಲಾಕೆಯವರು ಜಾತ್ರೆಯ ೩೪ ಘಂಟೆ ವಿದ್ಯುತ್ ವ್ಯವಸ್ಥೆ ಕಲ್ಪಿಸಬೇಕು ಮತ್ತು ಕರೆಂಟ್ ಹೋಗದೆ ಇರುವ ತರ ನೋಡಿಕೊಳ್ಳಲು ತಿಳಿಸಲಾಯಿತು.
ಇನ್ನೂಳಿದಂತೆ ಪಶು ಇಲಾಕೆ, ಕೆ.ಎಸ್.ಆರ್.ಟಿ.ಸಿ. ಕೃಷಿ ಇಲಾಖೆ ಹಾಗೂ ಇನ್ನೂಳಿದ ಇಲಾಕೆಗಳಿಗೆ ಜಾತ್ರೆಯಲ್ಲಿ ತಮ್ಮ ಕರ್ತವ್ಯದ ಬಗ್ಗೆ ನೆನಪಿಸಲಾಯಿತು.
ಈ ಬಾರಿ ಜಾತ್ರೆಗೆ ಮುಖ್ಯ ಮಂತ್ರಿಗಳು ಆಗಮಿಸುವ ಸಾಧ್ಯತೆ ಇದ್ದು ಹೆಲಿಪ್ಯಾಡ್ ವ್ಯವಸ್ಥೆ ಮಾಡುವಂತೆ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಜೋಯಿಡಾದ ತಹಶಿಲ್ದಾರರ ಸಂಜಯ ಕಾಂಬಳೆ, ಉಳವಿ ಚನ್ನಬಸವೇಶ್ವರ ಕಮಿಟಿ ಅಧ್ಯಕ್ಷ ಗಂಗಾಧರ ಕಿತ್ತೂರ,ಉಪಾಧ್ಯಕ್ಷ ಸಂಜಯ ಕಿತ್ತೂರ,ಜಿ.ಪಂ.ಸದಸ್ಯ ರಮೇಶ ನಾಯ್ಕ, ಉಳವಿ ಗ್ರಾ.ಪಂ.ಅದ್ಯಕ್ಷ ಮಂಜುನಾಥ ಮೊಕಾಶಿ ತಾ.ಪಂ.ಅದ್ಯಕ್ಷೆ ನರ್ಮದಾ ಪಾಟ್ನೇಕರ, ತಾಲೂಕಾ ಕಾರ್ಯನಿರ್ವಣಾಧಿಕಾರಿ ಆನಂದ.ಬಿ. ಜೋಯಿಡಾ ಸಿ.ಪಿ.ಐ ಬಾಬಾಸಾಬ ಹುಲ್ಲಣ್ಣನವರ, ಬಸವರಾಜ ಬಿಕ್ಕಣ್ಣವರ,ಉಳವಿ ಪಿಡಿಓ ಮಹಮದ್ ಹನೀಪ್ ಇತರರು ಉಪಸ್ಥಿತರಿದ್ದರು .

Leave a Comment