
ಜೋಯಿಡಾ –
ಜೋಯಿಡಾ ತಾಲೂಕಿನ ನಂದಿಗದ್ದಾ ಗ್ರಾ.ಪಂ.ವ್ಯಾಪ್ತಿಯ ಯರಮುಖದ ಲಲಿತಾ ದೇಸಾಯಿ ಅವರ ಎರಡು ಎಮ್ಮೆ ಹುಲಿ ದಾಳಿಯಿಂದ ಸಾವನ್ನಪ್ಪಿದೆ.
ಕಳೆದ ಎರಡು ದಿನದ ಹಿಂದೆ ಒಂದು ಎಮ್ಮೆ ಹುಲಿ ದಾಳಿಯಿಂದ ಸಾವನ್ನಪ್ಪಿದರೆ ,ಇಂದು ಬುಧವಾರ ಮತ್ತೊಂದು ಎಮ್ಮೆ ಸಾವಿಗಿಡಾಗಿದೆ.
ಎಮ್ಮೆ ಸಾವಿನಿಂದ ಲಕ್ಷಾಂತರ ರೂ ಹಾನಿಯಾಗಿದ್ದು ,ಗುಂದ ಭಾಗದಲ್ಲಿ ಸಾಕು ಪ್ರಾಣಿಗಳನ್ನು ಮತ್ತು ದನ ಕರುಗಳನ್ನು ಸಾಕುವುದೇ ಕಷ್ಟವಾಗಿದೆ.
ತಾಲೂಕಿನ ಗುಂದ ಭಾಗದಲ್ಲಿ ಹುಲಿ ದಾಳಿ ಹೆಚ್ಚಾಗಿದ್ದು ಅರಣ್ಯ ಇಲಾಕೆಯಿಂದ ಯಾವುದೇ ಪರಿಹಾರ ಸಿಗದೇ ಇರುವುದು ರೈತರನ್ನು ಚಿಂತೆಗಿಡು ಮಾಡಿದೆ, ಈ ಹಿಂದೆ ದಯಾನಂದ ಭಟ್ಟ ಕೊಂಬಾ ,ಹಾಗೂ ಇನ್ನೂ ಕೆಲವೂ ರೈತರ ದನಗಳು ಹುಲಿ ದಾಳಿಯಿಂದ ಸಾವನ್ನಪ್ಪಿದೆ .
ಅರಣ್ಯ ಇಲಾಕೆಯ ಹಿರಿಯ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಬೇಟಿ ಕೊಟ್ಟು ರೈತರಿಗೆ ಸೂಕ್ತ ಪರಿಹಾರ ನೀಡಬೇಕಿದೆ.

ಲಲಿತಾ ದೇಸಾಯಿ – ಯರಮುಖ
ಹುಲಿ ದಾಳಿಯಿಂದ ೨ ಎಮ್ಮೆ ಸಾವನ್ನಪ್ಪಿದ್ದು ಬೇಸರವಾಗಿದೆ.ಉಳಿದ ದನಗಳ ಮೇಲು ಮುಂದೆ ಹುಲಿ ದಾಳಿ ಮಾಡಿದರೆ ಯಾರನ್ನು ಕೇಳುವುದು. ಕೂಡಲೇ ಅರಣ್ಯ ಇಲಾಕೆ ಸೂಕ್ತ ಪರಿಹಾರ ನೀಡಬೇಕಿದೆ.
ಕೆ.ಎಸ್.ಗೊರವರ್ – ಎ.ಸಿ.ಎಪ್.ದಾಂಡೇಲಿ ವಲಯ
ಹುಲಿ ದಾಳಿಯಿಂದ ತೊಂದರೆಗೆ ಒಳಗಾದ ರೈತರಿಗೆ ಅರಣ್ಯ ಇಲಾಖೆಯಿಂದ ಪರಿಹಾರ ಧನ ನೀಡಲಿದ್ದೇವೆ.ಕೂಡಲೇ ಈ ಬಗ್ಗೆ ಕಿರಿಯ ಅಧಿಕಾರಿಗಳಿಗೆ ಸ್ಥಳಕ್ಕೆ ಭೇಡಿ ನೀಡಲು ತಿಳಿಸುತ್ತೇನೆ.
Leave a Comment