ಹಳಿಯಾಳ :- ಕರ್ನಾಟಕದ ಮರಾಠಿ ಭಾಷಿಗರ ಪ್ರದೇಶವನ್ನು ಕರ್ನಾಟಕ ರಾಜ್ಯದವರು ಅತಿಕ್ರಮಣ ಮಾಡಿದ್ದಾರೆಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೀಡಿರುವ ಹೇಳಕೆಯನ್ನು ಖಂಡಿಸಿರುವ ಹಳಿಯಾಳ ತಾಲೂಕಾ ಕ್ಷತ್ರೀಯ ಮರಾಠಾ ಪರಿಷತ್ನವರು ಠಾಕ್ರೆ ಹೇಳಿಕೆ ಶುದ್ಧ ಬಾಲಿಷ ತನದದಿಂದ ಕೂಡಿದೆ ಎಂದು ಕಿಡಿ ಕಾರಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಪರಿಷತ್ನವರು ಕರ್ನಾಟಕ ರಾಜ್ಯದಲ್ಲಿ ವಾಸಮಾಡುವಂತ ಮರಾಠರು ಅಖಂಡ ಕರ್ನಾಟಕ ರಾಜ್ಯದ ಮರಾಠರು ಆಗಿರುತ್ತೇವೆ. ನಾವು ಯಾವ ಕಾರಣಕ್ಕೂ ಕರ್ನಾಟಕದ ನೆಲ,ಜಲ,ಸಂಸ್ಕøತಿ ಪರಂಪರೆಗಳನ್ನು ಅನುಸರಿಸುತ್ತಾ ಬಂದಿದ್ದು ಮುಂದೆಯು ಇದಕ್ಕೆ ಬದ್ಧರಾಗಿರುತ್ತೇವೆ. ನಮ್ಮ ಮುಂದಿನ ಪಿಳಿಗೆಯು ಸಹ ಇದನ್ನೇ ಅನುಸರಿಸುತ್ತಾರೆ ಎಂಬ ದೃಢ ವಿಶ್ವಾಸವಿದೆ. ಆದ್ದರಿಂದ ಉದ್ಧವ್ ಠಾಕ್ರೆ ಯವರು ಇಂತಹ ಬಾಲಿಷ ಹೇಳಿಕೆಯನ್ನು ನೀಡುವುದನ್ನು ಬಿಟ್ಟು ತಮ್ಮ ರಾಜ್ಯವನ್ನು ಸುಧಾರಿಸುವಲ್ಲಿ ಮುತುವರ್ಜಿ ವಹಿಸಲಿ ಎಂದಿದ್ದಾರೆ.

ರಾಜ್ಯದ ಮರಾಠಾ ಸಮಾಜವು ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಬಹಳ ಹಿಂದುಳಿದ ವರ್ಗವಾಗಿರುತ್ತದೆ. ಆ ಕಾರಣದಿಂದ ನಾವು ಅನೇಕ ವರ್ಷಗಳಿಂದ ಸಮಾಜವನ್ನು 3 ಬಿ ಪ್ರವರ್ಗದಿಂದ 2 ಎ ಪ್ರವರ್ಗಕ್ಕೆ ಸೇರಿಸಬೇಕೆಂದು ಹೊರಾಟವನ್ನು ಮಾಡುತ್ತ ಬರಲಾಗಿದೆ ಎಂದಿರುವ ಅವರು ರಾಜ್ಯ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಾವು ಹೇಳಿದಂತೆ ಮುಖ್ಯಮಂತ್ರಿಯಾದ 24 ತಾಸಿನಲ್ಲಿ ಮರಾಠಾ ಸಮಾಜವನ್ನು 2 ಎ ಗೆ ಸೇರಿಸುತ್ತೇನೆ ಎಂಬ ಹೇಳಿಕೆಯಂತೆ ತಾವು ನಡೆದುಕೊಂಡು ನಮ್ಮ ಸಮಾಜವನ್ನು ಅಭಿವೃದ್ಧಿ ಪತದತ್ತ ಕೊಂಡೊಯ್ಯಲು ಮುನ್ನುಡಿ ಬರೆಯಬೇಕೆಂದು ಆಗ್ರಹಿಸಿದ್ದಾರೆ.
ಪತ್ರಿಕಾ ಹೇಳಿಕೆಯಲ್ಲಿ ಪರಿಷತ್ನ ಬಾಳಕೃಷ್ಣಾ ಶಹಾಪೂರಕರ, ಉಡಚಪ್ಪಾ ಬೋಬಾಟಿ, ಎಲ್.ಎಸ್.ಅರಶಿಣಗೇರಿ, ಅಪ್ಪಾರಾವ ಪೂಜಾರಿ,ಅನಿಲ ಚವ್ಹಾಣ, ತುಕಾರಾಮ ಗೌಡಾ, ಶ್ರೀನಿವಾಸ ಘೋಟ್ನೆಕರ, ಮಂಜು ಅಳ್ನಾವರಕರ, ಯಲ್ಲಪ್ಪಾ ಮಾಲವನಕರ, ಸುಂದರ ಕಾನಕತ್ರಿ, ಗಣಪತಿ ಬೇಕನಿ, ಆರ್.ಎಸ್ ಅರಶಿಣಗೇರಿ, ಗಣಪತಿ ಕರಂಜೇಕರ, ರವಿ ಸುಂಟಕಾರ, ಚಂದ್ರಕಾಂತ ಕಮ್ಮಾರ, ಶಂಕರ ಬೆಳಗಾಂವಕರ, ಜೀವಪ್ಪಾ ಭಂಡಾರಿ, ಬಿ.ಡಿ ಚೌಗಲೆ ಇದ್ದರು.
Leave a Comment