ಹಳಿಯಾಳ:- ನನಗೂ ಯಾರಾದ್ರೂ ನೋಡ್ರಪ್ಪಾ, ಕೈಗೆ ನೋವಾಗಿದೆ, ತಿನ್ನೋಕೆ ಸೇರ್ತಾ ಇಲ್ಲಾ, ಯಾಕೋ ಸ್ವಲ್ಪ ಅಶಕ್ತಿ. ಎಲ್ಲಯ್ಯಾ ನನಗೆ ಚಿಕಿತ್ಸೆ ಕೊಡುವವರು ಎಂದು ಶನಿವಾರ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಆಗಮಿಸಿದ ವಿಶೇಷ ಅತಿಥಿಯೊಬ್ಬರು ಕಣ್ಣ ಸಣ್ಣೆಯಲ್ಲಿಯೇ ಇಷ್ಟೇಲ್ಲಾ ಕೇಳುತ್ತಿದ್ದರೆನೋ ಎನ್ನುವಂತೆ ಜನರು ಅಂದುಕೊಳ್ಳುತ್ತಿದ್ದರು.
ಯಾರಿದೂ ? ಕಣ್ಣ ಸಣ್ಣೆಯಲ್ಲಿ ಕೆಳೊದ್ಯಾಕೆ ನೇರವಾಗಿ ವೈದ್ಯರ ಬಳಿ ಹೊಗಬಹುದಿತ್ತಲ್ಲ ಇನ್ನೂ ಹಲವು ಪ್ರಶ್ನೇಗಳು ಓದುಗರ ಮನಸ್ಸಿನಲ್ಲಿ ಮೂಡಬಹುದು ಅಲ್ಲವೇ ? ಅಂದ ಹಾಗೆ ನಾವು ಹೇಳಲು ಹೊರಟಿರುವುದು ಯಾವುದೇ ಮನುಷ್ಯನ ಬಗ್ಗೆ ಅಲ್ಲ ಹೊರತು ಕಪಿರಾಯ(ಮಂಗ)ನ ಕುರಿತು.

ಹೌದು ಶನಿವಾರ ಶ್ರೀ ರಾಮಭಕ್ತ ಆಂಜನೇಯ(ಮಾರುತಿ) ವಾರ ಎಂಬುದು ವಾಡಿಕೆ ಇನ್ನೂ ಶನಿವಾರದ ದಿನವೇ ಈ ಮಂಗ ಕೂಡ ಸರ್ಕಾರಿ ಆಸ್ಪತ್ರೆಗೆ ಆಗಮಿಸಿ ತನ್ನ ಚೇಷ್ಟೇಗಳ ಮೂಲಕ ಯಾರಿಗೂ ತೊಂದರೇ ನೀಡದೆ ಜನರ ಮನಸ್ಸು ಗೆದ್ದು ಮುಂದೆ ನಡೆದಿದ್ದು ನಿಜಕ್ಕೂ ಅಚ್ಚರಿಯ ಸಂಗತಿಯೇ ಸರಿ.
ಶನಿವಾರ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಮಂಗವೊಂದು ಆಗಮಿಸಿ ಆಸ್ಪತ್ರೆಗೆ ಬಂದ ಹತ್ತಾರು ರೋಗಿಗಳು, ಜನಗಳ ಮಧ್ಯೆ ಹಾಯಾಗಿ ಸುತ್ತಾಡಿತು. ಅಲ್ಲಲ್ಲಿ ವೈದ್ಯರ ಕೊಠಡಿಯ ಎದುರಿಗೆ ಕುತು ಇಣುಕಿ ನೋಡುತ್ತಿತ್ತು ಈ ಸಂದರ್ಭದಲ್ಲಿ ಜನರು ಅದರ ಪೊಟೊ ತೆಗೆಯುವುದು ಹಾಗೂ ವಿಡಿಯೋ ಮಾಡುವುದರಲ್ಲಿ ತಲ್ಲಿನರಾಗಿದ್ದು ಕಂಡು ಬಂದಿತು.
ಬಳಿಕ ಮಂಗವು ರೋಗಿಗಳು ಚೀಟಿ ಪಡೆಯುವ ಸ್ಥಳಕ್ಕೆ ತೆರಳಿ ಕೌಂಟರಿನ ಮೆಲೆ ಕೂಳಿತುಕೊಂಡಿತು ಹಾಗೆಯೇ ಜನರನ್ನು ನೋಡಿ ಚೀಟಿ ಬರೆಯುವಾತನನ್ನು ತದೇಕ ಚಿತ್ತದಿಂದ ನೋಡಿದ ಮಂಗ ಸ್ವಲ್ಪ ಸಮಯದ ಬಳಿಕ ಆತನ ಟೇಬಲ್ ಮೇಲೆ ಜಿಗಿದು ಕೂತು ರಜಿಸ್ಟರ್ ಹಾಗೂ ಪೆನ್ನನ್ನು ತೆಗೆದುಕೊಂಡಿತು.

ಜನರು ಮಂಗನ ಚೇಷ್ಟೇಯನ್ನು ಕಣ್ತುಂಬಿಕೊಳ್ಳುತ್ತಿದ್ದರೇ ಸುಮಾರು 15 ನಿಮಿಷಗಳ ಕಾಲ ಅಲ್ಲಿಯೇ ಕುಳಿತ ಮಂಗ ಬಳಿಕ ಜನರು ತಂದ ಬಾಳೆ ಹಣ್ಣನ್ನು ಸ್ವಲ್ಪವೇ ತಿಂದು ಕಟ್ಟೆಯ ಹೊರಗೆ ಬಂದು ಕುಳಿತುಕೊಂಡಿತು.
ಈ ಸಂದರ್ಭದಲ್ಲಿ ಅದನ್ನು ಹಲವರು ಮುಟ್ಟಿ ಏನಾಗಿದೆ ಎಂದು ನೋಡುತ್ತಿದ್ದರೇ ಮಂಗ ತನ್ನ ಕೈಗಾದ ನೋವನ್ನು ತೊರಿಸಿದ್ದು ಹಾಗೆಯೇ ಅಲ್ಲೇ ಮಲಗಿ ತನ್ನ ನೋವನ್ನು ಹಾವಭಾವಗಳ ಮೂಲಕ ಹೇಳಿದ್ದು ನೀಜಕ್ಕೂ ನೆರೆದಿದ್ದ ಜನರಲ್ಲಿ ಅಚ್ಚರಿಗೆ ಕಾರಣವಾಯಿತು.
ವಯಸ್ಸಾಗಿರುವ ಈ ಮಂಗ ಸ್ವಲ್ಪ ಮಟ್ಟಿಗೆ ಶಕ್ತಿ ಹಿನವಾಗಿದ್ದು ಆಸ್ಪತ್ರೆಗೆ ಬಂದು ಸುಮಾರು ಅರ್ಧ ಗಂಟೆಗಳ ಕಾಲ ಯಾರಿಗೂ ತೊಂದರೇ ನೀಡದೆ ಬಳಿಕ ಹೊರಗೆ ತೆರಳಿದ್ದು ತನಗೂ ಚಿಕಿತ್ಸೆ ಬೇಕಿದೆ ಎಂದು ಬಂದಂತೆ ಭಾಸವಾಗುತ್ತಿತ್ತು.

ಜನಸ್ನೇಹಿ ಮಂಗನ ಸ್ಥಿತಿ ಕಂಡು ಹಲವರು ಕಣಿಕರ ಪಟ್ಟಿದ್ದು ಕಂಡು ಬಂದಿತು. ಇದನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳ ಮೂಲಕ ಪಶು ಚಿಕಿತ್ಸಾಲಯಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಬೇಕು ಎಂದು ಪ್ರಯತ್ನ ಪಡುವಷ್ಟರಲ್ಲಿ ಮಂಗ ಮರದ ಮೇಲೆ ಏರಿ ಮತ್ತೇ ಬೆರೆಡೆ ಸಾಗಿತು. ಶನಿವಾರ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಈ ಅರಪೂಪದ ವಿದ್ಯಾಮಾನ ಜನರ ಮನಸ್ಸಲ್ಲಿ ಹಲವು ಪ್ರಶ್ನೇಗಳನ್ನು ಹುಟ್ಟು ಹಾಕಿತು.
ಇನ್ನೂ ಆಸ್ಪತ್ರೆಯಿಂದ ತೆರಳಿದ ಮಂಗ ಪಟ್ಟಣದಲ್ಲಿ ಸುತ್ತಾಡುತ್ತಿದ್ದು ಜನರೊಂದಿಗೆ ಬೆರೆಯುತ್ತಿದೆ. ಯಾರಿಗೂ ತೊಂದರೆ ನೀಡದ ಈ ಮಂಗ ಸದ್ಯ ಪಟ್ಟಣದ ಜನರ ಮನಸ್ಸನ್ನು ಗೆಲ್ಲುತ್ತಿದೆ. ಆದರೇ ರಸ್ತೆ ದಾಟುವಾಗ, ಅಲ್ಲಲ್ಲಿ ಕುಳಿತುಕೊಳ್ಳುವಾಗ ಬಿದಿ ನಾಯಿಯ ದಾಳಿಗೆ ತುತ್ತಾಗದಿರಲಿ ಹಾಗೂ ಅರಣ್ಯ ಇಲಾಖೆಯವರು ಮತ್ತು ಪ್ರಾಣಿ ಪ್ರೀಯರು ಇದಕ್ಕೆ ಉಪಚರಿಸಿ ಸುರಕ್ಷಿತ ಸ್ಥಳಕ್ಕೆ ರವಾನಿಸಲಿ ಎಂಬುದು ಜನರ ಮನದಾಳದ ಆಶಯವಾಗಿದೆ.


Leave a Comment