
ಜೋಯಿಡಾ –
ಜೋಯಿಡಾ ತಾಲೂಕಿನ ಗಾಂಗೋಡಾ ಗ್ರಾ.ಪಂ.ಗೆ ಸಾಗಲು ಸೋಮವಾರ ಹಾಕಿದ್ದ ಹೊಸ ಬೋರ್ಡ್ ಅನ್ನು ಯಾರೋ ಕಿಡಿಗೆಡಿಗಳು ಕಿತ್ತು ಗಟಾರ ಅಲ್ಲಿ ಹಾಕಿದ ಘಟನೆ ಇಂದು ಮಂಗಳವಾರ ನಡೆದಿದೆ.
ಜೋಯಿಡಾ ತಾಲೂಕಿನಲ್ಲಿ ನೂತನವಾಗಿ ಆಗಿದ್ದ ಗಾಂಗೋಡಾ ಗ್ರಾಮ ಪಂಚಾಯತಗೆ ಹೋಗಲು ರಸ್ತೆಯ ಪಕ್ಕದಲ್ಲೇ ಹಾಕಿದ್ದ ಸೂಚನಾ ಫಲಕವನ್ನು ಯಾರೋ ಕಿತ್ತೆಸೆದು ಗಟಾರಗೆ ಹಾಕಿ ಬೋರ್ಡ್ ಅನ್ನು ನಾಶ ಪಡಿಸಿದ್ದಾರೆ.
ಈ ಬಗ್ಗೆ ಗ್ರಾ.ಪಂ. ಪಿಡಿಓ ನದಿಲಾಲ್ ಇನಾಮದಾರ ಅವರಿಗೆ ಇಲ್ಲಿನ ಸ್ಥಳೀಯರು ತಿಳಿಸಿ ಬೋರ್ಡ್ ಮೊದಲಿನ ಜಾಗಕ್ಕೆ ಹಾಕಿ ಕೊಡಿ ಎಂದು ತಿಳಿಸಿದ್ದಾರೆ. ಈ ಬಗ್ಗೆ ಪಿಡಿಓ ನದಿಲಾಲ ಇನಾಮದಾರ ಮಾತನಾಡಿ ಯಾರಿಗೂ ತೊಂದರೆ ಕೊಡದ ಬೋರ್ಡ್ ಅನ್ನು ಈ ರೀತಿ ಕಿತ್ತು ಎಸೆದಿರುವುದು ಬೇಸರದ ಸಂಘತಿ . ಇದನ್ನು ಸೋಮವಾರ ದಿನಾಂಕ ೬ ಜನವರಿ ಯಂದು ಹಾಕಲಾಗಿತ್ತು. ಬೋರ್ಡ್ ಹಾಕಿ ಒಂದೇ ದಿನದಲ್ಲಿ ಕಿಡಿಗೆಡಿಗಳು ಈ ರೀತಿ ಮಾಡಿದ್ದಾರೆ. ಈ ಬಗ್ಗೆ ಪೋಲಿಸ್ ಠಾಣೆಗೂ ತಿಳಿಸುತ್ತೇವೆ ಎಂದರು.


Leave a Comment