
ಹೊನ್ನಾವರ: ರಾಮಕ್ಷತ್ರಿಯ ನೌಕರರರು ವೃತ್ತಿಯನ್ನು ಅತ್ಯಂತ ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ನಿರ್ವಹಿಸಿ ವೃತ್ತಿ ಪಾವಿತ್ರತೆಯನ್ನು ಕಾಪಾಡಿಕೊಂಡು ಇತರ ಸಮಾಜ ಗುರುತಿಸುವಂತಹ ಕಾರ್ಯ ಮಾಡಬೇಕು ಎಂದು ಜಿಲ್ಲಾ ಬ್ರಷ್ಟಾಚಾರ ನಿಗ್ರಹದಳದ ಎಸಿಬಿ ಶ್ರೀಕಾಂತ ಕೆ ಹೇಳಿದರು.
ತಾಲೂಕಿನ ಪಾಲ್ಗೊಂಡು ಅವರು ಮಾತನಾಡಿದರು. ಸಮಾಜದ ವಿದ್ಯಾರ್ಥಿಗಳು ಹೆಚ್ಚಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಸರ್ಕಾರದ ಉನ್ನತ ಹುದ್ದೆಯನ್ನು ಪಡೆಯುವಲ್ಲಿ ಶ್ರಮವಹಿಸಬೇಕು ಎಂದು ಸಲಹೆ ನೀಡಿದರು.
ಕುಮಟಾ ವೈಭವ ಪ್ಯಾಲೆಸ್ನ ಮಾಲೀಕ ಎಸ್.ಜೆ ನಾಯ್ಕ ಅವರಿಗೆ ರಾಮಕ್ಷತ್ರಿಯ ಸೇವಾಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಿವೃತ್ತ ನೌಕರರು, ರಾಜ್ಯ, ರಾಷ್ಟ್ರಮಟ್ಟದ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಮೋಹನ್ ಸಾಳೇಹಿತ್ತಲ್, ಎಸ್.ಆರ್.ನಾಯ್ಕ ಮಾತನಾಡಿದರು.

ಜಿಲ್ಲಾ ರಾಮಕ್ಷತ್ರಿಯ ಸಂಘದ ಗೌರವಾಧ್ಯಕ್ಷ ಆನಂದ ನಾಯ್ಕ ಮಾತನಾಡಿ ನಮ್ಮಲ್ಲಿ ಕೆಳದರ್ಜೆ, ಮೇಲ್ದರ್ಜೆ ಎಂಬ ಭೇದಭಾವವಿಲ್ಲ. ವೃತ್ತಿಯಲ್ಲಿ ಶ್ರದ್ದೆ, ಶಿಸ್ತು ಇದ್ದಾಗ ವೃತ್ತಿಯೇ ನಮ್ಮನ್ನು ರಕ್ಷಿಸುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಂಘದ ಅಧ್ಯಕ್ಷ ಉದಯ ಆರ್ ನಾಯ್ಕ ಮಾತನಾಡಿ ನಮ್ಮಲ್ಲಿ ಸರ್ಕಾರಿ ಸೇವೆ ಸಲ್ಲಿಸುವವರ ಪರಿಚಯವೇ ಇಲ್ಲವಾಗಿತ್ತು. ಸಂಘ ರಚನೆಯಾದ್ದರಿಂದ ಪರಸ್ಪರ ಪರಿಚಯವಾಗಿ ಎಲ್ಲರು ಒಗ್ಗೂಡಿದ್ದೇವೆ ಎಂದರು.
ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಸುರೇಶ ನಾಯ್ಕ, ಬೈಂದೂರು ಮೆಸ್ಕಾಂ ಸಿನಿಯರ್ ಅಸಿಸ್ಟಂಟ್ ಗಾಯತ್ರಿ ದೇವಿ, ನಾಗರಾಜ ಸಂಕೊಳ್ಳಿ, ರಾಮದಾಸ ನಾಯ್ಕ, ಚೇತನ್ ನಾಯ್ಕ, ಎನ್.ಎಸ್ ನಾಯ್ಕ, ಶಿವಾನಂದ ನಾಯ್ಕ, ಅರವಿಂದ ನಾಯ್ಕ ಇತರರು ಉಪಸ್ಥಿತರಿದ್ದರು. ಸಂಘದ ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಸ್ವಾಗತಿಸಿದರು. ವಿಷ್ಣು ನಾಯ್ಕ, ಗಣಪತಿ ನಾಯ್ಕ ನಿರ್ವಹಿಸಿದರು. ಶ್ಯಾಮಲಾ ನಾಯ್ಕ ವಂದಿಸಿದರು.

Leave a Comment